ಜಾತಿ, ಧರ್ಮವಿಲ್ಲದ ಉತ್ಸವವೇ ಗಣೇಶೋತ್ಸವ : ಬಸವರಾಜ ಪಾಟೀಲ್ ನರಿಬೊಳ
ಜೇವರ್ಗಿ :ಸೆ.೧೪ : ಜ್ಯಾತಿ, ಧರ್ಮದ ಬೇಧ ಭಾವವಿಲ್ಲದೆ ನಡೆಯುವ ಉತ್ಸವ ಯಾವುದಾದರಿ ಇದ್ದರೆ ಅದು ಗಣೇಶ ಉತ್ಸವ ಮಾತ್ರ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಸವರಜಾ ಪಾಟೀಲ್ ನರಿಬೋಳ ಅಭಿಮತಪಟ್ಟರು.
ಪಟ್ಟಣದ ದತ್ತ ನಗರ ಬಡಾವಣೆಯಲ್ಲಿ ವೀರ ಸಾವರ್ಕರ್ ಗಣೇಶ ಉತ್ಸವ ೨೦೨೪ರ ಪ್ರಯುಕ್ತವಾಗಿ ನಡೆಯುತ್ತಿರುವ ಸಪ್ತದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು.
ದೇಶದ ತುಂಬೆಲ್ಲ ಗಣೇಶ ಉತ್ಸವವನ್ನು ಸಂಭ್ರಮದಿAದ ಸರ್ವರು ಆಚರಿಸುತ್ತಾರೆ. ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಯಾವುದು ಜಾತಿ, ಧರ್ಮಗಳ ಭೇಧವಿಲ್ಲದೆ ಭಾರತದಾದ್ಯಂತ ಆಚರಿಸುತ್ತಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡುವುದರ ಮುಕಾಂತರ ಬಡಾವಣೆಗಳಲ್ಲಿ ಹಬ್ಬದ ವಾತಾವರಣವನ್ನು ಯುವ ಶಕ್ತಿ ನಿರ್ಮಿಸುತ್ತಾದೆ. ಅದರಂತೆ ಜೇವರ್ಗಿಯ ವೀರ ಸಾವರ್ಕರ್ ಗಣೇಶ ಉತ್ಸವ ಮಂಡಳಿಯುವ ಅದ್ದುರಿಯಾಗಿ ಪ್ರತಿ ನಿತ್ಯ ಸಾಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸುವುದರ ಮುಲಕ ಹೊಸ ಪ್ರತಿಭೆಗಳನ್ನ ಗುರುತಿಸುತ್ತಿದೆ, ಇಂತಹ ಉತ್ಸವಗಳು ನಡೆಯುವುದರ ಮುಕಾಂತರ ಭಾವೈಕ್ಯತೆ ಬೆಳೆಯಲಿ ಎಂದರು.
ಉತ್ಸವ ಸಮಿತಿಯ ಮುಖಂಡ ವಿಶಾಲ ಪವಾರ ಮಾತನಾಡಿ ವೀರ ಸಾವರ್ಕರ್ ಗಣೇಶ ಉತ್ಸವ ಕಾರ್ಯಕ್ರಮವನ್ನು ಜನರು ಪ್ರೋತ್ಸಾಹಿಸುತ್ತಿದ್ದಾರೆ. ಉತ್ಸವವು ವೈಭವದಿಂದ ನಡೆಯಲು ಸರ್ವರು ಸಹಕಾರ ನೀಡುತ್ತಿದ್ದಾರೆ. ಪಟ್ಟಣ ಸೇರಿದಂತೆ ಹಳ್ಳಿಗಳಿಂದ ಜನರು ಬಂದು ಸಪ್ತದಿನ ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿದ್ದಾರೆ ಅವರಿಗೆ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ಯನಗುಂಟಿಯ ಗಿರೀಶ ಹಿರೇಮಠ ಸ್ವಾಮಿಗಳು, ಸಿದ್ದು ಸಾಹು ಅಂಗಡಿ, ಶೋಬಾ ಸಜ್ಜನ್, ಸುನಂದ ಕಲ್ಲಾ, ಶಿವಗಂಗಮ್ಮ ಬೆಲ್ಲದ್, ಶ್ರೀಶೈಲಗೌಡ ಕರಕಿಹಳ್ಳಿ, ಭಗವಂತ್ರಾಯ ಕೊಳಕೂರ, ಮಂಜು ಪುರಾಣಿಕ, ಗೌಡಪ್ಪಗೌಡ ವಾರದ್, ಮಹೇಶ್ ಉಳ್ಳಾಗಡ್ಡಿ, ಗುರು ಮದರಿ, ವಿನೋಧ ರಬಶೆಟ್ಟಿ, ಅಮೀನಪ್ಪಗೌಡ, ಶಿವು ವರವಿ, ಶರಣು ನೇರಡಗಿ, ಗೌಸ್ ಇನಾಮದಾರ, ಶರಣು ಬಡಿಗೇರ, ಅಣವೀರಗೌಡ ಬಿರಾದಾರ, ಸಿದ್ದು ಗಜ, ಸಿದ್ದು ಮಾಹೂರ, ಪ್ರಜ್ವಲ್ ಕೊಬ್ಬಿನ್, ವೀನಿತ್, ಲಗಮಣ್ಣ, ಬಸ್ಸು ರೆಡ್ಡಿ, ಭಿಮು ಖಾದ್ಯಾಪೂರ ಸೇರಿದಂತೆ ಅನೇಕರಿದ್ದರು.