ವಿದ್ಯಾರ್ಥಿ ಸಂಘ,ಕ್ರೀಡಾ ಸಂಘದ ಉದ್ಘಾಟನೆ
ಕೋಲಾರ,ಸೆ೧೪:ಮುಳಬಾಗಿಲು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶುಕ್ರವಾರ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾಸಂಘ ಉದ್ಘಾಟಿಸಲಾಯಿತು. ಹಾಗೂ ಕ್ರೀಡಾಕೂಟವನ್ನು ನಡೆಯಿತು.
ಸಮಾರಂಭ ಮತ್ತು ಕ್ರೀಡಾಕೂಟದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲ ಕೆ.ವಿ.ವೆಂಕಟರೆಡ್ಡಿ ವಹಿಸಿಕೊಂಡಿದ್ದರು. ಸಂಸ್ತೆಯ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳಾದ ಬಿ.ಕೆ ರಘು, ಬಿ.ಕವಿತಾ, ಡಾ.ಮು. ಬಸವರಾಜು, ಮಂಜುಲಾದೇವಿ. ನರೇಂದ್ರ ಎಲ್ಲಾ ವಿಭಾಗಗಳ ಉಪನ್ಯಾಸಕರುಗಳು, ಕಾರ್ಯಾಗಾರ ಸಿಬ್ಬಂದಿ ವರ್ಗದವರು ಕಛೇರಿ ಸಿಬ್ಬಂದಿಯವರು, ವಿದ್ಯಾರ್ಥಿಗಳು ಕ್ರೀಡಾ ಸಲಹೆಗಾರರಾದ ಎನ್. ಮುನಿರಾಜು ಭಾಗವಹಿಸಿದ್ದರು.