ನ್ಯಾಯಕ್ಕಾಗಿ ಹೋರಾಡುವವರಿಂದ ಅನ್ಯಾಯವಾಗದು : ಎಂ. ಎ. ಸಿಂದಗಿಕರ್
ಜೇವರ್ಗಿ :ಸೆ.೧೪ : ಜಿಲ್ಲೆ ಸೇರಿದಂತೆ ರಾಜ್ಯದ ನಾನಾಕಡೆಗಳಲ್ಲಿ ಅನೇಕ ಜನರಿಗೆ ನ್ಯಾಯವನ್ನು ಕೊಡಿಸಿದ ಹಾಗೂ ಸಮಾಜ ಸೇವೆಯನ್ನೆ ಮೈಗುಡಿಸಿಕೊಂಡ ನಾಯಕರು ಹಣಮಂತ ಯಳಸಂಗಿ. ಅವರಿಂದ ಅನೇಕರಿಗೆ ನ್ಯಾಯ ದೋರೆಯುತ್ತದೆ ಹೋರೆತು ಅನ್ಯಾಯವಾಗುವುದಿಲ್ಲ ಎಂದು ದಲಿತ ಸೇನೆ ರಾಜ್ಯ ಉಪಾಧ್ಯಕ್ಷ ಎಂ. ಎ. ಸಿಂದಗಿಕರ್ ಹೆಳಿದರು.
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ದಲಿತ ಸೇನೆ ತಾಲೂಕ ಘಟಕ ಜೇವರ್ಗಿ ವತಿಯಿಂದ ತಾಲೂಕ ದಂಡಾಧೀಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೆಶಿಸಿ ಎಂ. ಎ. ಸಿಂದಗಿಕರ್ ಮಾತನಾಡಿ ವಕೀಲರಾಗಿ, ಸಾಮಾಜಿಕ ಹೋರಾಟಗಾರರಾಗಿ ಜನರ ಜೋತೆ ಒಡನಾಡಿಯಾಗಿರುವ ಹಣಮಂತ ಯಳಸಂಗಿ ರವರ ಮೇಲೆ ಕೆಲವರು ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ. ಅವರ ಹೆಸರಿಗೆ ಮಸಿ ಬಡಿಯುವ ಹುನ್ನಾರ ನಡೆಯುತ್ತಿದೆ. ಪೊಲೀಸ್ ಇಲಾಖೆ ಈ ಕುರಿತು ಪ್ರಾಮಾಣಿಕ ತನಿಕೆ ಮಾಡಬೇಕು. ಸಮಾಜದ ಏಳಿಗೆಗೆ ದುಡಿಯುವ ನಾಯಕನ ಮೇಲೆ ಸುಳ್ಳು ಆರೋಪ ಸರಿಯಲ್ಲ. ತಕ್ಷಣವೆ ಮೆಲಧೀಕಾರಿಗಳು ಸುಕ್ತ ತನಿಕೆ ನಡೆಸಬೇಕು ಎಂದು ಆಗ್ರಹಿಸಿದರು.
ನಂತರ ತಾಲೂಕ ಅಧ್ಯಕ್ಷ ಶಿವಶರಣ ಟಿ ಸುಣೂರ ಮಾತನಾಡಿ ಸಮಾಜದ ಒಳಿತಿಗೆ ದುಡಿಯುವ ನಾಯಕರ ವಿರುದ್ದ ಸುಳ್ಳು ಆರೋಪಗಳು ಮಾಡುವುದು ಸರಿಯಲ್ಲ. ಅನೇಕ ಜನರಿಗೆ ಅವರು ನ್ಯಾಯವನ್ನು ಕೊಡಿಸುತ್ತಾರೆ, ಅವರಿಂದ ಯಾರಿಗು ಅನ್ಯಾಯವಾಗುವುದಿಲ್ಲ. ಸದಾ ಅನ್ಯಾಯದ ವಿರುದ್ದವೆ ಅವರ ದ್ವನಿ, ಅದನ್ನ ಯಾರು ಮುಟುಕುಗೊಳಿಸಲು ಆಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಬಾಗೇಶ ಸರನಾಳ, ಪರಶುರಾಮ ನೇದಲಗಿ, ಜಗದೀಶ ನಡಗಟ್ಟಿ, ಮುತ್ತಣ್ಣ ಸೊನ್ನ, ಶಾಹುಸೆನಿ, ಪ್ರಕಾಶ ಕಾಂಬ್ಳೆ, ಪ್ರಜ್ವಲ್ ಜೇರಟಗಿ, ಅನ್ಸರ ಪಟೇಲ್ ಸೇರಿದಂತೆ ಕಾರ್ಯಕತ್ರರು ಉಪಸ್ಥಿತರಿದ್ದರು.