ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ; ಸಿದ್ದಲಿಂಗ ಪೂಜಾರಿ
ಜೇವರ್ಗಿ:ಸೆ.೧೪: ತಾಲೂಕಿನಾದ್ಯಂತ ಅಕ್ರಮ ಮದ್ಯ ಮಾರಾಟಗಾರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ ಅಧ್ಯಕ್ಷ ಸಿದ್ದಲಿಂಗ ಪೂಜಾರಿ ಆಗ್ರಹಿಸಿದರು.
ಪಟ್ಟಣದ ತಾಲೂಕ ಆಡಳಿತ ಆವರಣದಲ್ಲಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೆಶಿಸಿ ಸಿದ್ದಲಿಂಗ ಪೂಜಾರಿ ಮಾತನಾಡಿ ತಾಲೂಕಿನ ನಗರಗಳಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಾರಾಟ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅಂತಹ ಮಳಿಗೆಗಳಿಗೆ ಸಾಗುಸಿತ್ತಿರವಂತ ಮದ್ಯ ಮಾರಾಟಗಾರ ಪರವಾನಿಗೆ ರದ್ದುಪಡಿಸಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳ್ಳಲ್ಲಿ ಉಗ್ರ ಹೋರಾಟ ಮಾಡಲಾಗುವದು. ಅನಧಿಕೃತ ಮದ್ಯ ಮಾರಾಟಗಾರರ ಮಳಿಗೆಗಳನ್ನು ಮುಚ್ಚಿಸಿ ಅವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕ ಪ್ರಧಾನ ಕಾರ್ಯದರ್ಶಿ ಕಿರಣ್ ಸರಡಗಿ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ, ಮೌನೇಶ್ ನರಿಬೋಳ ಸಂಘದ ಮಹಿಳಾ ಘಟಕದ ತಾಲೂಕ ಅಧ್ಯಕ್ಷ ಜಯಶ್ರೀ ಅವರಾದ, ಉಪಾಧ್ಯಕ್ಷೆ ಭೀಮಾಬಾಯಿ ಅವರಾದ, ಸಿದ್ದಮ್ಮ ಅವರಾದ, ರವಿ ಮಿಣಜಗಿ, ಮಾನಪ್ಪ ದೊಡ್ಡಮನಿ ಇದ್ದರು.