ಶ್ರದ್ಧೆಯಿಂದ ಅಭ್ಯಾಸ ಮಾಡಿ:ಲೋಕೇಶ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.14: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಶ್ರದ್ದೆ,ಆಸಕ್ತಿಯಿಂದ ಅಭ್ಯಾಸ ಮಾಡಿದರೆ ಯಶಸ್ಸನ್ನು ಗಳಿಸಬಹುದು ಎಂದು ಹರಳಹಳ್ಳಿ ವಿಎಸ್‍ಎಸ್‍ಎನ್ ಅಧ್ಯಕ್ಷ ಹೆಚ್.ಟಿ.ಲೋಕೇಶ್ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಶೀಳನೆರೆ ಹೋಬಳಿಯ ಉಯ್ಗೋನಗಳ್ಳಿ ಶಾಲೆಯಲ್ಲಿ ಸಿಂಧಘಟ್ಟ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಕಲೆ, ಸೃಜನಶೀಲತೆ ಅಡಗಿರುತ್ತದೆ ಅವುಗಳನ್ನು ಸಮಯೋಚಿತವಾಗಿ ಪ್ರದರ್ಶಿಸಿದಾಗ ಅವುಗಳಿಗೆ ಮೂರ್ತರೂಪ ಸಿಕ್ಕಿ ಕಲೆಯಾಗಿ ಹೊರಹೊಮ್ಮುತ್ತವೆ ಆದ್ದರಿಂದ ಶಾಲಾ ಹಂತದಲ್ಲಿ ಎಳೆಯ ಮಕ್ಕಳಲ್ಲಿ ಇರುವ ನಾನಾತರಹದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಅವಶ್ಯಕವಾಗಿವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಶ್ರೀಧರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜು, ಗ್ರಾಪಂ ಸದಸ್ಯೆ ರೂಪಮಹಾದೇವ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್, ಪ್ರಕಾಶ್, ಶಾಲೆಯ ಮುಖ್ಯ ಶಿಕ್ಷಕಿ ಮಂಜಮ್ಮ, ಶಿಕ್ಷಕರುಗಳಾದ ಮರವನಹಳ್ಳಿಬಸವರಾಜು, ಸಿ.ರಾಜಯ್ಯ, ಪ್ರಥಮದರ್ಜೆ ಗುತ್ತಿಗೆದಾರ ಸತೀಶ್, ಪ್ರೌಢಶಾಲಾ ಶಿಕ್ಷಕರಾದ ನಾಗರಾಜು, ರಾಮಚಂದ್ರ, ಕೃಷ್ಣ, ಶಂಕರ್, ಬಾಬು, ಅನಿತಾ, ಸುಷ್ಮಾ, ನಳಿನಿ, ರಾಜೇಶ್, ಸಿ.ಎಸ್.ಅಶೋಕ್ ಸೇರಿದಂತೆ ಹಲವರಿದ್ದರು.