ಗಣಪತಿ ಗಾಯನ ಸ್ಪರ್ಧೆಯಲ್ಲಿ ಮೈಸೂರಿನ ಇಬ್ಬರು ಗಾಯಕರಿಗೆ ಪ್ರಥಮ ಸ್ಥಾನ
ಸಂಜೆವಾಣಿ ವಾರ್ತೆ
ಮೈಸೂರು, ಸೆ.14– ರಾಜ್ಯ ಮಟ್ಟದ ಗಣಪತಿಯ ಗೀತ ಗಾಯನ ಸ್ಪರ್ಧೆಯಲ್ಲಿ ಮೈಸೂರಿನ ಇಬ್ಬರು ಗಾಯಕರು ಪ್ರಥಮ ಸ್ಥಾನ ಪಡೆದಿದ್ದಾರೆ.
ಮೈಸೂರಿನ ನವಗಾನ ಮಿಲನ ಟ್ರಸ್ಟ್ ಗಾಯಕರಾದ ಕಾಳಿಹುಂಡಿ ಶಿವಕುಮಾರ್ ಮತ್ತು ಕುದೇರು ಎಸ್. ಪರಶಿವಮೂರ್ತಿರವರುಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ಬೆಂಗಳೂರಿನ ಝೇಂಕಾರ ಸ್ವರ ಮಧುರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯರವರು ಗಣೇಶ ಚತುರ್ಥಿ ಪ್ರಯುಕ್ತ ವಾಟ್ಸಾಪ್ ಮೂಲಕ ಗಣೇಶನ ಕುರಿತಾದ ಭಕ್ತಿಗೀತೆ, ಚಿತ್ರಗೀತೆ, ಒಳಗೊಂಡಂತೆ ಗಾಯನ ಸ್ಪರ್ಧೆಯನ್ನು ಏರ್ಪಡಿಸಿದ್ದರು.
ಈ ಸ್ಪರ್ಧೆಯಲ್ಲಿ ರಾಜ್ಯದ ಅನೇಕ ಜಿಲ್ಲೆ, ತಾಲೂಕಿನಿಂದ ರಾಜ್ಯದ ವಿವಿಧೆಡೆಯಿಂದ 50 ಕ್ಕೂ ಹೆಚ್ಚು ಗಾಯಕ, ಗಾಯಕಿಯರು ಭಾಗವಹಿಸಿದ್ದರು.ಆ ಪೈಕಿ ಮೈಸೂರಿನ ನವಗಾನ ಮಿಲನ ಟ್ರಸ್ಟ್‍ನ ಗಾಯಕರಾದ ಕಾಳಿ ಹುಂಡಿ ಶಿವಕುಮಾರ್ ರವರುವಿಶೇಷ ಗಾಯಕ ಮತ್ತು ಕುದೇರು ಎಸ್. ಪರಶಿವಮೂರ್ತಿ ರವರುವಿಶಿಷ್ಠ ಗಾಯಕ ಎಂದು ಪ್ರತ್ಯೇಕವಾಗಿ ಪ್ರಥಮಸ್ಥಾನ ಗಳಿಸಿ ವಿಜೇತರಾಗಿದ್ದಾರೆ.
ಕಾಳಿಹುಂಡಿ ಶಿವಕುಮಾರ್ ರವರು ನಂಜನಗೂಡು ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹವ್ಯಾಸಿ ಗಾಯಕರಾಗಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಹಾಗೆಯೇ ಕುದೇರು ಎಸ್. ಪರಶಿವಮೂರ್ತಿರವರು ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇವರು ಸಹ ಹವ್ಯಾಸಿ ಗಾಯಕರಾಗಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮೂಲತಃಇವರು ಚಾಮರಾಜನಗರ ತಾಲ್ಲೂಕಿನ ಕುದೇರು ಗ್ರಾಮದವರಾಗಿದ್ದು, ಹಾಲಿ ಮೈಸೂರಿನಲ್ಲಿ ವಾಸಿಸುತ್ತಿದ್ದಾರೆ. ಇವರುಗಳು ಈ ಹಿಂದೆಯೂ ಕೂಡ ವಿವಿಧ ಕಾರ್ಯಕ್ರಮಗಳಲ್ಲಿ ಸ್ಪರ್ಧಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ತೀರ್ಪುಗಾರರಾದ ಝೇಂಕಾರ ಸ್ವರ ಮಧುರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದ ಪ್ರಾಂಶುಪಾಲರಾದ ಗೌರಿಶಂಕರ ಚಟ್ಟಿರವರು ವಿಜೇತರನ್ನುಆಯ್ಕೆ ಮಾಡಿದರು. ಇವರುಗಳನ್ನು ಮೈಸೂರಿನ ನವ ಗಾನ ಮಿಲನ ಟ್ರಸ್ಟ್‍ನ ಸದಸ್ಯರು ಅಭಿನಂದಿಸಿದ್ದಾರೆ.