ಪ್ರತಿಭೆಗಳಿಗೆ ಪ್ರೋತ್ಸಾಹ ಅತ್ಯಗತ್ಯ: ನರಸಪ್ಪ
ಸೈದಾಪುರ:ಸೆ.೧೪:ಪ್ರತಿಯೊಂದು ಮಗುವಿನಲ್ಲಿ ಒಂದಲ್ಲ ಒಂದು ಪ್ರತಿಭೆ ಇರುತ್ತದೆ, ಅದನ್ನು ಪಾಲಕರು, ಶಿಕ್ಷಕರು ಮತ್ತು ಸಮುದಾಯವು ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದು ಯುವ ಮುಖಂಡ ನರಸಪ್ಪ ಕವಡೆ ಬದ್ದೇಪಲ್ಲಿ ಅಭಿಪ್ರಾಯಪಟ್ಟರು.
ಪಟ್ಟಣದ ರೈಲು ನಿಲ್ದಾಣದ ಆವರಣದಲ್ಲಿ ಜೈ ಹನುಮಾನ ಗಜಾನನ ಸೇವಾ ಸಮಿತಿ ವತಿಯಿಂದ ಆಯೋಜಿಸಿದ ಗಣೇಶೋತ್ಸವದ ಶಾಲಾ ಮಕ್ಕಳ ಸಾಂಸ್ಕೃತಿ ಕರ‍್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾತಂತ್ರö್ಯ ಪೂರ್ವದಲ್ಲಿ ಬಾಲ ಗಂಗಾಧರ ತಿಲಕರಿಂದ ಪ್ರಾರಂಭವಾದ ಸಾರ್ವಜನಿಕ ಗಣೇಶೋತ್ಸವ ಇಂದು ನಮ್ಮ ಭಾಗದ ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ವೇದಿಕೆಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಸೈದಾಪುರ ಪಟ್ಟಣದಲ್ಲಿ ಜೈ ಹನುಮಾನ ಗಜಾನನ ಯುವಕ ಮಂಡಳಿಯಿAದ ಆಚರಿಸುತ್ತಿರುವ ಗಣೇಶೋತ್ಸವಕ್ಕೆ ಕರ‍್ಯಕ್ರಮಕ್ಕೆ ಜಾತಿ ಧರ್ಮ ಇಲ್ಲದೆ ಹಬ್ಬದ ವಾತವರಣದಂತೆ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ನಂತರ ಶ್ರೀ ಗೌರಿ ಶಂಕರ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕರ‍್ಯಕ್ರಮಗಳು ನೋಡುಗರ ಗಮನ ಸೇಳೆದವು. ಯುವ ಮುಖಂಡ ಯೋಗೇಶಕುಮಾರ ದೋಕ, ಮುಕುಂದಕುಮಾರ ಅಲಿಝಾರ್, ರಾಜೇಶ ಶೆಟ್ಟಿ ಉಡುಪಿ, ಶರಣಗೌಡ ಕ್ಯಾತ್ನಾಳ್, ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾ ಪ್ರಧಾನ ಕರ‍್ಯದರ್ಶಿ ಭೀಮಣ್ಣ ಮಡಿವಾಳ್ಕರ್, ಜೈ ಹನುಮಾನ ಗಜಾನನ ಸೇವಾ ಸಮಿತಿ ಅಧ್ಯಕ್ಷ ಚಂದ್ರಕಾAತ ತಿಮ್ಮೋಜಿಕರ್, ಗ್ರಾ.ಪಂ ಸದಸ್ಯ ರಾಕೇಶ ಕೋರೆ, ಸಚೀನ್ ಸಾಹುಕಾರ, ಎಸ್‌ಜಿಎಸ್ ಶಾಲಾ ಮುಖ್ಯಗುರು ಪಂಡಿತರಾವ್, ಸಿದ್ದು ಟಿಂಗರೆ, ಸುಮಿತ್, ಪ್ರಶಾಂತ, ನರಸಿಂಹಲು, ಮಹೇಶ, ಅಶೋಕ, ಆನಂದ, ಮಂಜು, ಪರಶುರಾಮ, ಉದಯ, ರಾಜು ಜಗತಾಪ್, ದೇವು, ಸಚಿನ್ ಪವರ್, ಬಸವರೆಡ್ಡಿ, ಪ್ರಶಾಂತ, ಮಲ್ಲಿಕಾರ್ಜುನ, ಮೈಬೂಬ್, ಖಾಸಿಂ, ಅಭಿ, ಪ್ರವೀಣ, ಆದಿ, ಶ್ರೀನಿವಾಸ ಸೇರಿದಂತೆ ಇತರರಿದ್ದರು.