ಗಜಾನನ ಮಹೋತ್ಸವ
ಹೂವಿನ ಹಿಪ್ಪರಗಿ:ಸೆ.೧೪: ಸಮೀಪ ದಿಂಡವಾರ ಗ್ರಾಮದಲ್ಲಿ ಮರಗಮ್ಮ ದೇವಿ ಗಜಾನನ ಯುವಕ ಮಂಡಳಿ ವತಿಯಿಂದ. ಸತತ ಎರಡನೇ ವರ್ಷದ ಗಜಾನನ ಪ್ರತಿಷ್ಠಾಪನೆ ಮಾಡಲಾಯಿತು.
ಇದರ ಅಂಗವಾಗಿ. ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಗ್ರಾಮದ ಗಣ್ಯರಿಗೆ ಮುಖಂಡರಿಗೆ ಯುವಕರಿಗೆ ದಾನಿಗಳಿಗೆ ಮತ್ತು ಶ್ರೀಗಳಿಗೆ ಸನ್ಮಾನ ಸಮಾರಂಭವನ್ನು ಮಾಡಲಾಯಿತು.
ಸನ್ಮಾನ ಸಮಾರಂಭದಲ್ಲಿ. ಶ್ರೀ ಗುರು ಪರಮಾನಂದ ಮಹಾರಾಜರು. ಮನಗೂರ ಶ್ರೀಗಳು. ಗ್ರಾಮ ಪಂಚಾಯಿತಿನ ಅಧ್ಯಕ್ಷರು ಸದಸ್ಯರು ಸಿಬ್ಬಂದಿಗಳು ಇನ್ನುಳಿದ ದಾನಿಗಳು ಯುವಕರು ಮುಖಂಡರು ಜೊತೆಗೆ ಜಾಂಬವ ಯುವಸೇನೆ ರಾಜ್ಯ ಉಪಾಧ್ಯಕ್ಷರಾದ ಡಾ ಮಲಕಪ್ಪ ಬಾಗೇವಾಡಿ. ಇನ್ನುಳಿದ ಗ್ರಾಮದ ಹಿರಿಯರು ತಾಯಂದಿರು ಯುವಕರು ಕಮಿಟಿಯ ಸದಸ್ಯರು ಮುಖ್ಯಸ್ಥರು. ಉಪಸ್ಥಿತರಿದ್ದರು