ಬಲರಾಮ ಜಯಂತಿ ಆಚರಣೆ
ಲಕ್ಷ್ಮೇಶ್ವರ,ಅ.4: ತಾಲೂಕಿನ ಗೋನಾಳ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಿನ್ನೆ ಭಾರತೀಯ ಕಿಸಾನ್ ಸಂಘದ ವತಿಯಿಂದ ರೈತರ ಆರಾಧ್ಯ ದೈವ ಬಲರಾಮ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೃಷಿಕರ ಆರಾಧ್ಯ ದೈವ ಬಲರಾಮನ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಬಳಿಕ ಮಾತನಾಡಿದ ಉಪಾಧ್ಯಕ್ಷ ಅಜಯ್ ಕರಿ ಗೌಡರ ಮತ್ತು ಮಾಜಿ ಅಧ್ಯಕ್ಷ ಟಾಕಪ್ಪ ಸಾತ ಪೂತೆ ಅವರು ಪ್ರತಿ ವರ್ಷ ಮಹಾಲೆಯ ಅಮಾವಾಸ್ಯೆಯ ಮಾರ್ನೆ ದಿನವಾದ ಪಾಡ್ಯ ದಿನದಂದು ಕೃಷಿಕರ ಆರಾಧ್ಯ ದೈವ ಬಲರಾಮನ ಜಯಂತಿಯನ್ನು ರೈತರು ಆಚರಿಸುವ ಪರಂಪರೆಯನ್ನು ಆರಂಭಿಸಬೇಕು ಎಂದು ಮತ್ತು ಕೃಷಿ ಪದ್ಧತಿಯ ಮೂಲ ಆರಾಧಕರಾದ ಬಲರಾಮರ ಜಯಂತಿ ರೈತರ ಪಾಲಿಗೆ ಅತ್ಯಂತ ಮಹತ್ವದ ದಿನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಜನ ಗೌಡ ಕೆಂಚನಗೌಡ್ರೆ ಆದೇಶ ಹುಲಗೂರ ಚಂದ್ರಗೌಡ ಕರಿಗೌಡರ ಪ್ರಕಾಶ್ ನಂದಗಾವಿ ನಿಂಗನಗೌಡ ಮರಿಲಿಂಗನಗೌಡರ ಚಂದ್ರು ತಳವಾರ ಚೆನ್ನಬಸಪ್ಪ ಹಲಸಂದಿ ದೇವೇಂದ್ರ ಗೌಡ ಸಣ್ಣ ಗೌಡರ ದೀಪು ಹೊಸ್ಮನಿ ಅಲ್ಲಿಸಾ ಬ ಅಗಶಿಮನಿ ಪಿಡಿಒ ಜಗದೀಶ್ ಕುರುಬರ ಮತ್ತಿತರರು ಇದ್ದರು.