ದುರ್ಗಾದೌಡ್ ಕಾರ್ಯಕ್ರಮಕ್ಕೆ ಚಾಲನೆ
ಲಕ್ಷ್ಮೇಶ್ವರ,ಅ.4: ಪಟ್ಟಣದಲ್ಲಿ ದಸರಾ ಮಹೋತ್ಸವದ ಅಂಗವಾಗಿ ದಸರಾ ಉತ್ಸವ ಸಮಿತಿ ಹಮ್ಮಿಕೊಂಡಿರುವ 9 ದಿನಗಳ ದುರ್ಗಾ ದೌಡ್ ಕಾರ್ಯಕ್ರಮಕ್ಕೆ ದೊಡ್ಡ ದ್ಯಾಮವ್ವ ನ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಕರೆವಾಡಿ ಮಠದ ಮಳೆ ಮಲ್ಲಿಕಾರ್ಜುನ ಶ್ರೀಗಳವರು ಚಾಲನೆ ನೀಡಿ ಇಂದು ಧರ್ಮ ಜಾಗೃತಿಗಾಗಿ ಮತ್ತು ಅದರ ಉಳಿವಿಗಾಗಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಸೂಕ್ತವಾಗಿವೆ ಪ್ರತಿಯೊಬ್ಬರು ನಮ್ಮ ಧರ್ಮ ಸಂಸ್ಕೃತಿ ಪರಂಪರೆ ಇತಿಹಾಸಗಳನ್ನು ಅರಿತುಕೊಂಡು ಧರ್ಮವಂತರಾಗಿ ಬಾಳಿ ಬದುಕಬೇಕಿದೆ ಎಂದರು.
ದುರ್ಗಾ ದೌಡ ಕಾರ್ಯಕ್ರಮದ ರೂವಾರಿ ಗುರುನಾಥ ದಾನಪ್ಪನವರ ಮಾತನಾಡಿ ಇದೊಂದು ಧರ್ಮ ಜಾಗೃತಿಯ ಕಾರ್ಯಕ್ರಮ ಪ್ರತಿಯೊಬ್ಬರು ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ದುರ್ಗಾ ದೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತ ಸಮೂಹ ಭಗವಾ ಉಡುಪುಗಳನ್ನು ಧರಿಸಿ ಸಾಗಿದರು ದೌಡ್ ಸಾಗುವ ಮಾರ್ಗ ಮಧ್ಯದಲ್ಲಿ ಭಾಗವಾ ಧ್ವಜಗಳು ರಾರಾಜಿಸುತ್ತಿದ್ದವು.
ಕಾರ್ಯಕ್ರಮದಲ್ಲಿ ದ್ಯಾಮವ್ವ ದೇವಸ್ಥಾನದ ಅಧ್ಯಕ್ಷರಾದ ಮಹೇಶ್ ಲಿಂಗಯ್ಯ ಸ್ವಾಮಿ ಮಠ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾದ ದೇವಪ್ಪ ಗಡೆದ ಮಲ್ಲನಗೌಡ ಪಾಟೀಲ ರವಿ ಲಿಂಗ ಶೆಟ್ಟಿ ನಾಗರತ್ನ ನಾಗಲೂಟಿ ನೀಲಪ ಕರ್ಜೆಕ್ಕಣ್ಣವರ ತಿಪ್ಪಣ್ಣ ಸಂಶಿ ಬಾಬು ಅಳವಂಡಿ ವೆಂಕಟೇಶ್ ಕೊಂಡಿಕೊಪ್ಪ ಶಿವನಗೌಡ ಪಾಟೀಲ ಸೇರಿದಂತೆ ಹಿರಿಯರು ಮುಖಂಡರು ಭಾಗವಹಿಸಿದ್ದರು.