ಪುರಾಣ ಪ್ರಾರಂಭೋತ್ಸವ
ಲಕ್ಷ್ಮೇಶ್ವರ,ಅ.4: ಪಟ್ಟಣದ ದೇಸಾಯಿ ಬಣ್ಣದಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ 9 ದಿನಗಳ ಕಾಲ ನಾಲ್ಕನೇ ವರ್ಷದ ಪುರಾಣ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಂಜುನಾಥ್ ಮಾಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ನವರಾತ್ರಿ ಮಹೋತ್ಸವ ಒಂಬತ್ತು ದಿನಗಳ ಕಾಲ ದೇವತೆಗಳ ಪುರಾಣ ಪ್ರವಚನಕ್ಕೆ ಅತ್ಯಂತ ಸೂಕ್ತವಾಗಿದೆ . ಪುರಾಣ ಪ್ರವಚನ ಆಲಿಸುವುದರಿಂದ ಸದಾ ಒತ್ತಡದ ಬದುಕಿನಲ್ಲಿರುವ ನಮಗೆ ಮಾನಸಿಕ ಶಾಂತಿ ನೆಮ್ಮದಿ ದೊರಕುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ತಹಶೀಲ್ದಾರ ವಾಸುದೇವ್ ವಿ ಸ್ವಾಮಿ ದೇವಣ್ಣ ಬಳಿಗಾರ ಏಎಸ್‍ಐ ಮೀನಾಕ್ಷಿ ಮಟ್ಟಿ ವೀರೇಂದ್ರ ಕುಮಾರ್ ಕಟಗಿ ಸಾಹೇಬ್ ಜಾಬ್ ಹವಾಲ್ದಾರ್ ತಿಪ್ಪಣ್ಣ ರೊಟ್ಟಿಗವಾಡ ಆಗಮಿಸಿದ್ದರು.
ಜಿಎಂ ಪೂಜಾರ ಹನುಮಂತ ಸಾ ಚೌದ್ರಿ ಚಂದ್ರ ಗೌಡ್ರು ಅಡ್ರಕಟ್ಟಿ ಪ್ರವಚನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮಲ್ಲೇಶ್ ಚಿಕ್ಕೇರಿ ಪ್ರಕಾಶ್ ಗುತ್ತಲ್ ಮುತ್ತು ನೀರಲಗಿ ಸುರೇಶ ನುಚ್ಚಂಬಲಿ ಪವನ್ ಬಂಕಾಪುರ ಎಂ ಎಸ್ ಹಿರೇಮಠ ಇದ್ದರು.
ಚಂದ್ರು ಮಾಗಡಿ ಕಾರ್ಯಕ್ರಮ ನಿರ್ವಹಿಸಿದರು.