ದಿ.5, 6 ರಂದು ಗರಭಾ (ದಾಂಡಿಯಾ) ಉತ್ಸವ
ಹುಬ್ಬಳ್ಳಿ,ಅ4: ಪ್ರಕೃತಿ ಕಲ್ಚರಲ್ ಮತ್ತು ಸ್ಪೋಟ್ರ್ಸ್ ಫೌಂಡೇಶನ್ ವತಿಯಿಂದ ಅ.5 ಹಾಗೂ ಅ. 6 ರಂದು ಗರಭಾ (ದಾಂಡಿಯಾ) ಉತ್ಸವ 2024 ನ್ನು ನಗರದಲ್ಲಿ ಆಯೋಜಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಪರಶುರಾಮ ಪೂಜಾರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದಿಂದ ಇಲ್ಲಿನ ತೋಳನಕೆರೆಯಲ್ಲಿ ಸಂಸ್ಥೆಯ ವತಿಯಿಂದ ಗರಭಾ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಅದರಂತೆ ಈ ವರ್ಷ ಎರಡು ಸ್ಥಳಗಳಲ್ಲಿ ಗರಭಾ ಉತ್ಸವ ಆಯೋಜಿಸಲಾಗಿದೆ. ಅ.5 ರಂದು ಸಂಜೆ 6 ಕ್ಕೆ ತೋಳನಕೆರೆ ಹಾಗೂ ಅ. 6 ರಂದು ಸಂಜೆ 6 ಕ್ಕೆ ಬಾಲಾಜಿ ಆಸ್ಪತ್ರೆ ಎದುರಿನ ಕಲ್ಲೂರ ಲೇಔಟ್ ನಲ್ಲಿನ ಪ್ರಕೃತಿ ಸ್ಪೋಟ್ರ್ಸ್ ಫೌಂಡೇಶನ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಅಂದು ಕಾರ್ಯಕ್ರಮದಲ್ಲಿ ಬೆಸ್ಟ್ ಗ್ರೂಪ್ ಡ್ಯಾನ್ಸ್, ಬೆಸ್ಟ್ ಕಪಲ್, ಬೆಸ್ಟ್ ಕಾಸ್ಟೂಮ್, ಎನರ್ಜನಿಕ್ ಗ್ರೂಪ್ ಹೀಗೆ ನಾನಾ ವಿಭಾಗದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.