ಸತ್ಯವೇ ದೇವರೆಂದು ನಡೆದವರು ಗಾಂಧೀಜಿ
ಚನ್ನಮ್ಮನ ಕಿತ್ತೂರು,ಅ.4: ಸತ್ಯದಿಂದ ಇದ್ದರೆ ನಾವು ಯಾವುದಕ್ಕೂ ಹೆದರುವ ಅಗತ್ಯವಿಲ್ಲ ತಪ್ಪು ಮನಾಡಿದವರಷ್ಟೇ ಇನ್ನೊಬ್ಬರಿಗೆ ಹೆದರಬೇಕು. ಸತ್ಯ ಮಾರ್ಗದಲ್ಲಿ ನಡೆದವರು ಗಾಂಧಿಜೀ ಎಂದು ಗ್ರಾಪಂ ಅಧ್ಯಕ್ಷೆ ಮಲ್ಲವ್ವ ನಾವಲಗಟ್ಟಿ ಹೇಳಿದರು.
ತಾಲೂಕಿನ ದೇವಗಾಂವ ಗ್ರಾಪಂದಲ್ಲಿ ಗಾಂಧಿಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷಸ್ಥಾನ ವಹಿಸಿಕೊಂಡು ಭಾವಚಿತ್ರಗಳಿಗೆ ಪೂಜೆಗೈದು ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಅವರು ಮಾತನಾಡಿದರು.
ನಂತರ ಗ್ರಾಪಂದವರು, ಸಾರ್ವಜನಿಕರು ಜೊತೆಗೂಡಿ ಗ್ರಾಮ ಸ್ವಚ್ಛಗೊಳಿಸಿದರು. ಗ್ರಾಪಂ ಸದಸ್ಯ ಅನಿಲ್ ಎಮ್ಮಿ ಪ್ರಾಸ್ತಾವಿಕ ನುಡಿಯನ್ನಾಡಿದರು.
ತಾಪಂ, ಪಪಂ, ಸರ್ವ ಗ್ರಾಪಂ ಒಳಗೊಂಡಂತೆ ತಾಲೂಕಾಧ್ಯಂತ ವಿವಿಧ ಕಛೇರಿಗಳಲ್ಲಿ ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು.
ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ರೇಣುಕಾ ರಮೇಶ ಮಡಿವಾಳರ, ಅಭಿವೃದ್ದಿ ಅಧಿಕಾರಿ ರವಿ ಉಡಕೇರಿ, ಸದಸ್ಯರುಗಳಾದ ಮಹಾಂತೇಶ ದುಗ್ಗಾಣಿ, ರಾಜೇಂದ್ರ ಕಕ್ಕೇರಿ, ಪಾಪು ನರಗುಂದ, ಮಾನಪ್ಪ ಕಂಬಾರÀ, ಭರತೇಶ ಗಂದಿಗವಾಡ, ಗ್ರಾಮಸ್ಥರಾದ ಶಂಕರ ನಾವಲಗಟ್ಟಿ, ರಾಮಚಂದ್ರ ಪತ್ತಾರ, ರುದ್ರಪ್ಪ ಬೆಂಡಿಗೇರಿ, ಹಸನ ಅಂಬಲತಡಿ, ನಾಗಪ್ಪ ದೊಡಮನಿ, ಶಂಕರಗೌಡ ಪಾಟೀಲ, ಅಜ್ಜಪ್ಪ ತಳವಾರ, ಮಂಜುನಾಥ ನರಗುಂದ, ನಾಗರಾಜ ಕುಂಬಾರ, ಮಂಜುನಾಥ ಕಮ್ಮಾರ, ಮುದಕಪ್ಪ ಅಗಸರ, ಕಲ್ಲಪ್ಪ ತಳವಾರ, ಕಸ ವಿಲೇವಾರಿ ಘಟಕದವರು ಸೇರಿದಂತೆ ಗ್ರಾಪಂ ಸಿಬ್ಬಂದಿಗಳು, ಸರ್ವಸದಸ್ಯರಿದ್ದರು.