ಬಟ್ಟರ್ಗಾದಲ್ಲಿ ಬೀರಲಿಂಗೇಶ್ವರ ಪಲ್ಲಕ್ಕಿ ಉತ್ಸವ
ಅಳಂದ,ಸೆ.13: ತಾಲೂಕಿನ ಬಟ್ಟರ್ಗಾ ಗ್ರಾಮದಲ್ಲಿ ಶ್ರಾವಣ ಮಾಸದ ಮುಕ್ತಾಯದ ನಿಮಿತ್ಯವಾಗಿ ಸೆ. 15 ರಂದು ಬೀರಲಿಂಗೇಶ್ವರ ಪಲ್ಲಕ್ಕಿ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. 14 ರಂದು ರಾತ್ರಿ ದೇವಸ್ಥಾನದ ಹತ್ತಿರ ಡೊಳ್ಳಿನ ಹಾಡುಗಳ ಜಾಗರಣ ಸಮಾರಂಭವನ್ನು ನಡೆಸಲಾಗುತ್ತದೆ.
ಇಂಡಿ ತಾಲೂಕು ಬಸನಾಳದ ಅಮೋಘಸಿದ್ದೇಶ್ವರ ಡೊಳ್ಳಿನ ಹಾಡುಗಳ ಸಂಘದ ಮುಖ್ಯ ಗಾಯಕಿ ಸುಚಿತ್ರ ಬಸನಾಳ ಮತ್ತು ಸಂಗಡಿಗರಿಂದ ಹಾಗೂ ಯಡ್ರಾಮಿಸಿದ್ದೇಶ್ವರ ಗಾಯನ ಸಂಘ ಅಫಜಲಪುರದ ಮುಖ್ಯ ಗಾಯಕ ಪಿಂಟು ಮಾಸ್ತರ ಮತ್ತು ಸಂಗಡಿಗರಿಂದ ಡೊಳ್ಳಿನ ಹಾಡುಗಳ ಕಾರ್ಯಕ್ರಮ ನಡೆಯುತ್ತದೆ. ಸಕಲ ಭಕ್ತಾದಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಪುನೀತರಾಗಬೇಕೆಂದು ಬೀರಲಿಂಗೇಶ್ವರ ಸಮಿತಿ ವಿನಂತಿಸಿದೆ.