ಚಿಂಚೋಳಿ ಠಾಣೆಯಲ್ಲಿ ವಿದ್ಯಾರ್ಥಿಗಳಿಗಾಗಿ ತೆರೆದ ಮನೆ ಕಾರ್ಯಕ್ರಮ
ಚಿಂಚೋಳಿ,ಸೆ.13- ಚಿಂಚೋಳಿ ಪೆÇಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳಿಗಾಗಿ ಪೆÇಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮದಡಿ ಕಾನೂನು ಮತ್ತು ಠಾಣೆಯ ಬಗೆಗೆ ಅರಿವು ಮೂಡಿಸುವ ಕಾರ್ಯ ನಡೆಯಿತು.
ಈ ಹಿನ್ನೆಲೆಯಲ್ಲಿ ಸರಕಾರಿ ಕೇಂದ್ರ ಪ್ರಾಥಮಿಕ ಶಾಲೆ ಚಿಂಚೋಳಿಯ ಮುಖ್ಯಗುರು ಶಶಿಧರ ಗಾಯಕವಾಡರೊಂದಿಗೆ ಪೆÇಲೀಸ್ ಠಾಣೆಗೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಪೆÇಲೀಸ್ ಸಿಬ್ಬಂದಿಗಳು ಆತ್ಮೀಯವಾಗಿ ಬರಮಾಡಿಕೊಂಡು ಠಾಣೆಯ ಪರಿಚಯ ಮಾಡಿಕೊಟ್ಟರು.
ಬಳಿಕ ಪೆÇಲೀಸ್ ಸಿಬ್ಬಂದಿ ಹಂಸಪಾಲ್ ರೆಡ್ಡಿ, ವಿದ್ಯಾರ್ಥಿಗಳಿಗೆ ತಾವು ಕರ್ತವ್ಯ ಪಾಲಿಸುವ ರೀತಿ ನೀತಿಗಳನ್ನು ವಿವರಿಸುತ್ತಾ ಠಾಣೆಯ ಠಾಣಾಧಿಕಾರಿ ಕರ್ತವ್ಯ ನಿರ್ವಹಿಸುವ ಸ್ಥಳ ಮತ್ತು ತನಿಖೆ ಮಾಡುವ ಕೊಠಡಿ ತಾಂತ್ರಿಕ ವಿಭಾಗ ಮತ್ತು ಶಾಂತಿ ಸುವ್ಯವಸ್ಥೆ ಹಾಳು ಮಾಡಿ ಕಾನೂನಿಗೆ ಧಕ್ಕೆ ತಂದವರಿಗೆ ಬಂಧಿಸಿಡುವ ಬಂಧಿಖಾನೆಗಳನ್ನು ತೋರಿಸುತ್ತ ಅವುಗಳ ಬಗ್ಗೆ ವಿವರಣೆ ನೀಡಿದರೆ ಮಕ್ಕಳೆಲ್ಲರೂ, ಅವುಗಳನ್ನು ಕುತೂಹಲದಿಂದ ನೋಡಿದರು. ಈ ಸಂದರ್ಭದಲ್ಲಿ ಪೆÇಲೀಸ್ ಸಿಬ್ಬಂದಿ ಲಕ್ಷ್ಮೀಕಾಂತ ಎಚ್ ಸಿ ಮಾತನಾಡಿ, ನಾವು ಪ್ರತಿ ತಿಂಗಳಿಗೊಮ್ಮೆ ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಟ್ಟು ಅವರನ್ನು ಬರಮಾಡಿಕೊಂಡು ಕಾನೂನಿನ ಬಗ್ಗೆ ಠಾಣೆ ಹೇಗೆ ಕರ್ತವ್ಯ ನಿರ್ವಹಿಸುತ್ತದೆ ಎನ್ನುವಂತಹ ರೀತಿಯಲ್ಲಿ ಅವರಿಗೆ ಮಾಹಿತಿಯನ್ನು ನೀಡಿ ಅರಿವು ಮೂಡಿಸುತ್ತೇವೆ. ಇದರಿಂದ ಮಕ್ಕಳಲ್ಲಿ ವಿದ್ಯಾರ್ಥಿಗಳಲ್ಲಿ ಪೆÇಲೀಸರ ಮತ್ತು ಠಾಣೆಯ ಬಗೆಗೆ ಇರುವ ವಿನಾಕಾರಣದ ಭಯ ಹೋಗುತ್ತದೆ ಅಲ್ಲದೇ ಕಾನೂನಿನ ಬಗ್ಗೆ ತಿಳಿಯುವಂತೆ ಮಾಡುತ್ತದೆ ಮುಂದೆ ವಿದ್ಯಾರ್ಥಿಗಳಲ್ಲಿ ನಾವು ಪೆÇಲೀಸ್ ಕರ್ತವ್ಯಕ್ಕೆ ಸೇರಬೇಕೆಂಬ ಅಭಿಮಾನ ಮೂಡಿ ಕಾನೂನಿನ ಸೇವೆಗೆ ಸೇರಲು ಪ್ರೇರಣೆ ನೀಡುತ್ತದೆ ಎಂದರು.
ಬಳಿಕ ಮಕ್ಕಳಿಗೆ ಸಿಹಿ ನೀಡಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕಿಯರಾದ ಶಹನಾಜಿ ಬೇಗಂ, ಶ್ವೇತಾ ಹಾಗೂ ಪೆÇಲೀಸ್ ಸಿಬ್ಬಂದಿಗಳಾದ ಮೇಘನಾಥ ರೆಡ್ಡಿ, ಮಾರುತಿ ಹಜಾಳೆ ಗೃಹ ರಕ್ಷಕ ಸಿಬ್ಬಂದಿ ಹಣಮಂತ ತಾಡಪಳ್ಳಿ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು.