ಬೈಕ್ ಕಳ್ಳನ ಬಂಧಿಸಿ ವಿವಿಧ ಕಂಪನಿಯ 12 ಬೈಕ್ ವಶ
ಕಲಬುರಗಿ,ಸೆ.13-ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಗಂಗಾನಗರದ ಲಕ್ಷ್ಮೀಕಾಂತ ಅಲಿಯಾಸ್ ಲಕ್ಕಿ ತಂದೆ ಶಿವಶಂಕರ ಕೊಪ್ಪಿನ್ (27) ಎಂಬಾತನನ್ನು ಬಂಧಿಸಿರುವ ಸಬ್-ಅರ್ಬನ್ ಪೊಲೀಸರು 9 ಲಕ್ಷ ರೂ.ಮೌಲ್ಯದ ವಿವಿಧ ಕಂಪನಿಯ 12 ಬೈಕ್ ವಶ ಪಡಿಸಿಕೊಂಡಿದ್ದಾರೆ.
ನಗರದಲ್ಲಿ ಬೈಕ್ ಕಳ್ಳತನ ಪ್ರಕರಣ ಹೆಚ್ಚುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ಸಹಾಯಕ ಪೊಲೀಸ್ ಆಯುಕ್ತ ಡಿ.ಜಿ.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಸಬ್-ಅರ್ಬನ್ ಪೊಲೀಸ್ ಠಾಣೆ ಪಿಐ ಸಂತೋಷ ಎಲ್.ತಟ್ಟೆಪಳ್ಳಿ, ಪಿಎಸ್‍ಐ ಬಸವರಾಜ, ವಂದನಾ, ಎಎಸ್‍ಐ ಅಶೋಕ, ಸಿಬ್ಬಂದಿಗಳಾದ ಹಾಜಿಮಲಂಗ್, ರಾಜಕುಮಾರ ಗಂಧೆ, ಸಂತೋಷ, ಬೀರಣ್ಣ, ಲಕ್ಷ್ಮೀಕಾಂತ, ವೆಂಕಟೇಶ, ಮಂಜುನಾಥ, ಫಿರೋಜ್, ನೆಹರುಸಿಂಗ್, ಭೀಮು ನಾಯಕ್, ಅನೀಲ ಅವರು ತನಿಖೆ ನಡೆಸಿ ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಕ್ ಕಳ್ಳನನ್ನು ಬಂಧಿಸಿ 9 ಲಕ್ಷ ರೂ.ಮೌಲ್ಯದ ವಿವಿಧ ಕಂಪನಿಯ 12 ಬೈಕ್ ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರು ಶ್ಲಾಘಿಸಿದ್ದಾರೆ.