ಸಾಲಬಾಧೆ: ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ
ಕಲಬುರಗಿ,ಸೆ.13-ಸಾಲಬಾಧೆ ತಾಳದೆ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಇರಗಪಳ್ಳಿ ಗ್ರಾಮದಲ್ಲಿ ನಡೆದಿದೆ.
ಚಂದ್ರಪ್ಪ ತಂದೆ ತಿಪ್ಪಣ್ಣಾ ಪೂಜಾರಿ (49) ಆತ್ಮಹತ್ಯೆ ಮಾಡಿಕೊಂಡ ರೈತ.
ರೈತ ಚಂದ್ರಪ್ಪ ಅವರಿಗೆ ಏಳು ಎಕರೆ ಜಮೀನಿದ್ದು, ಜಮೀನಿನಲ್ಲಿ ಬಿತ್ತನೆ ಮಾಡಿದ್ದ ತೊಗರಿ, ಉದ್ದು, ಹೆಸರು ಬೆಳೆ ಅತಿವೃಷ್ಟಿಯಿಂದ ಹಾನಿಯಾಗಿತ್ತು. ಅಲ್ಲದೆ, ಪಿಕೆಜಿಬಿ ಬ್ಯಾಂಕಿನಲ್ಲಿ 1.50 ಲಕ್ಷ, ಹೆಚ್‍ಡಿಎಫ್‍ಸಿ ಬ್ಯಾಂಕಿನಲ್ಲಿ 40 ಸಾವಿರ ಮತ್ತು 6 ಲಕ್ಷ ಖಾಸಗಿ ಸಾಲವಾಗಿತ್ತು ಇದರಿಂದ ನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತ ರೈತನಿಗೆ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ. ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ರೈತನ ಕುಟುಂಬಕ್ಕೆ ಕೃಷಿ ಸಚಿವರು ಭೇಟಿ ನೀಡಬೇಕು ಮತ್ತು ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಮುಖಂಡರಾದ ಜಾಫರ್ ಖಾನ್, ಶಂಕ್ರಯ್ಯ ಸ್ವಾಮಿ, ಹಣಮಂತ ಪೂಜಾರಿ ಅವರು ಆಗ್ರಹಿಸಿದ್ದಾರೆ.