ದೋಷ,ದ್ವೇಷ ಬಿಟ್ಟರೆ ವ್ಯಕ್ತಿತ್ವ ಮಿಂಚು :ಡಿವೈಎಸ್ಪಿ ಹೀರಾ
ಕಲಬುರಗಿ,ಸೆ 13: ಜೀವನದಲ್ಲಿ ದೋಷ ದ್ವೇಷ ಎರಡನ್ನು ದೂರವಿಟ್ಟರೆ ಮಾನವರಿಂದ ಮಹಾಮಾನವ ಮಹಾಮಾನವರಿಂದ ದೇವಮಾನವರಾಗಲು ಸಾಧ್ಯ ಎಂದು ಡಿವೈಎಸ್ಪಿ ಬಸವೇಶ್ವರಹೀರಾ ಅಭಿಪ್ರಾಯಪಟ್ಟರು.
ಶಾಂತಪ್ಪಾ ಪಾಟೀಲ ನರಿಬೋಳ ಪ್ರತಿಷ್ಠಾನದಿಂದ ನಗರದ ಕನ್ನಡಭವನದಲ್ಲಿ ಹಮ್ಮಿಕೊಂಡಿದ್ದ ಶಾಂತಪ್ಪಾ ಪಾಟೀಲ ನರಿಬೋಳರ 11ನೇ ಪುಣ್ಯಸ್ಮರಣೆ ಹಾಗೂ ಶಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದರು. ದೋಷ ಹುಡುಕುವುದು ಬಿಡಬೇಕು.ಜೊತೆಗೆ ದೋಷ ಸಿಗದಿದ್ದಾಗ ದ್ವೇಷಿಸಲು ಶುರು ಮಾಡುತ್ತೇವೆ. ಇವೆರಡನ್ನು ಬಿಡಬೇಕಾದರೆ ಸಜ್ಜನರ ಒಡನಾಟವಿರಬೇಕು. ಮಾತು ಕಡಿಮೆ, ಆಲಿಸುವುದು ಹೆಚ್ಚಿಸಿಕೊಳ್ಳಬೇಕು ಎಂದರು. ಶಾಂತಶ್ರೀ ಪ್ರಶಸ್ತಿ ಸ್ವಿಕರಿಸಿ ಮಲ್ಲಿನಾಥಗೌಡ ಯಲಗೋಡ ಮಾತನಮಾಡಿದರು. ಸಾನಿಧ್ಯವಹಿಸಿದ ಯಾದಗಿರಿ ಜಿಲ್ಲಾ ಮಠಾಧೀಶರ ಒಕ್ಕೂಟ ಅಧ್ಯಕ್ಷ ದೇವಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠ ಹಾಗೂ ಸ್ಟೇಷನ್ ಬಬಲಾದ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪೂಜ್ಯ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಉದ್ಘಾಟನೆ ನೆರವೇರಿಸಿದ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿದರು. ಅರವಿಂದ ಗುರೂಜಿ, ಮಲ್ಲಣಗೌಡ ಪಾಟೀಲ ಕಲ್ಲೂರ ವೇದಿಕೆಮೆಲಿದ್ದರು. ವಿವಿದ ಪ್ರಶಸ್ತಿ ಪುರಸ್ಕøತ ಶಿಕ್ಷಕರನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ನೂತನ ಪಧಾದಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಮಾಜಿ ಜಿ ಪಂ ಸದಸ್ಯ ಮರೆಪ್ಪಾ ಬಡಿಗೇರ ಸಂಕಾಲಿ ಶರಣಗೌಡ ಪೆÇಲೀಸ್ ಪಾಟೀಲ ನರಿಬೋಳ, ರಾಘವೇಂದ್ರ ಕುಲಕರ್ಣಿ, ರಾಮಚಂದ್ರ ನಾಯಕೋಡಿ,ಗುರು ಟಣಕೆದಾರ, ನಬಿ, ಭೀಮರಾಯ, ಭೀಮು ದೋರಿ, ಸುರೇಶ ಪಾಟೀಲ ನೇದಲಗಿ ಸೆರಿದಂತೆ ಇನ್ನಿತರರು ಪಾಲ್ಗೊಂಡರು.