ಮೊದಲ ಪ್ರಯತ್ನದಲ್ಲಿ ಸಾಧನೆಯ ಶಿಖರವೇರಿದ ಆದರ್ಶ ಶಿಕ್ಷಕಿ ಆಶಾ
ಕಲಬುರಗಿ:ಸೆ.13:ರಾಜ್ಯದ ಶಿಕ್ಷಣ ಇಲಾಖೆ ನಡೆಸಿರುವ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಳಿಸಿದೆ. ಮೊದಲ ಪ್ರಯತ್ನದಲ್ಲೇ ಅತ್ಯುತ್ತಮವಾದ ಗರಿಷ್ಠ ಅಂಕಗಳನ್ನು ಪಡೆಯುವ ಮೂಲಕ ಆದರ್ಶ ಶಿಕ್ಷಕಿ ಆಶಾ ಹೆಸರು ಮಾಡಿದ್ದಾರೆ. ಈ ವರ್ಷ ಜೇವರ್ಗಿಯಲ್ಲಿ ಬಿ. ಎಡ್. ಓದುತ್ತಾ ಶಿಕ್ಷಕರ ಅರ್ಹತಾ ಪರೀಕ್ಷೆ ಅರ್ಜಿ ಸಲ್ಲಿಸಿದವರಲ್ಲಿ ಪಾಸಾದ ಏಕೈಕ ಮಹಿಳಾ ಶಿಕ್ಷಕಿ ಆಶಾ ಆಗಿದ್ದಾರೆ.
ನನ್ನ ಸಾಧನೆಗೆ ತಂದೆ, ತಾಯಿ ಆಶೀರ್ವಾದ ಮತ್ತು ಸಹೋದರ, ಸಹೋದರಿಯ ಸಹಕಾರ ಮಾರ್ಗದರ್ಶನ ಕಾರಣ ಎಂದು ಹೇಳಿದ್ದಾರೆ. ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಓದುವವರು ಕರ್ನಾಟಕ ಸರ್ಕಾರದ ಪ್ರೌಢಶಾಲಾ ಪಠ್ಯಪುಸ್ತಕಗಳನ್ನು ಚೆನ್ನಾಗಿ ಸ್ವಅಧ್ಯಯನ ಮಾಡಬೇಕು, ರಾಜ್ಯದ ಪ್ರತಿಷ್ಠಿತ ತರಬೇತಿ ಕೇಂದ್ರಗಳ ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸಬೇಕು, ಸಾಮಾಜಿಕ ಜಾಲತಾಣವಾದ ವಾಟ್ಸಪ್ ಇನ್ನಿತರ ಅಪ್ಲಿಕೇಶನ್ಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಎಂದು ಶಿಕ್ಷಕಿ ಆಶಾ ಟಿಇಟಿ ಓದುಗರಿಗೆ ಸಲಹೆ ನೀಡಿದ್ದಾರೆ. ಜೇವರ್ಗಿ ತಾಲೂಕಿನ ಸರ್ಕಾರಿ ಕನ್ಯಾ ಪ್ರೌಢಶಾಲೆ, ಸೋನ್ನದ ಶಿವಾನಂದ ಶಿವಯೋಗಿ ಪ್ರೌಢಶಾಲೆಯಲ್ಲಿ ವಿಜ್ಞಾನ ವಿಷಯದಲ್ಲಿ ವಿಶೇಷವಾದ ಬೋಧನಾ ಕಲಿಕಾ ಸಾಮಗ್ರಿಗಳನ್ನು ತಯಾರಿಸಿ ರೂಡಿ ಪಾಠಗಳನ್ನು ಮಾಡಿರುವ ಶಿಕ್ಷಕಿ ಆಶಾ ಶಿಕ್ಷಕರ ಬೋಧನಾ ಕ್ಷೇತ್ರದಲ್ಲಿ ಹೊಸದಾದ ಚಾಪನ್ನು ಮೂಡಿಸಿದ್ದಾರೆ. ಇವರ ವಿಶೇಷವಾದ ಆಕರ್ಷಕ ಬೋಧನಾ ಶೈಲಿ, ಮಕ್ಕಳು ಕೇಳಿದ ಪ್ರಶ್ನೆಗೆ ತಕ್ಷಣವೇ ಸರಿಯಾದ ಉತ್ತರ ಹೇಳುವ ಮನೋಭಾವ ಇವರಲ್ಲಿದೆ. ಶಿಕ್ಷಕರ ದಿನಾಚರಣೆ ನಿಮಿತ್ಯ ವಿದ್ಯಾರ್ಥಿಗಳು ಅಯೋಜಿಸಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಎಲ್ಲಾ ವಿಷಯಗಳಲ್ಲಿ ಅತಿ ಹೆಚ್ಚು ಪ್ರಶ್ನೆಗೆ ಉತ್ತರಿಸಿದ ಶಿಕ್ಷಕಿ ಆಶಾ ಎಕ್ಸಲೆಂಟ್ ಟೀಚರ್ ಆಗಿದ್ದಾರೆ ಮತ್ತು ಮಕ್ಕಳ ಭವಿಷ್ಯದ ಆಶಾಕಿರಣ ಆಶಾ ಎಂದು ಶಿವಾನಂದ ಶಿವಯೋಗಿ ಪ್ರೌಢಶಾಲೆಯ ಶಿಕ್ಷಕರಾದ ಶರಣು ಮಣೂರು ಸರ್ ಹೇಳಿದ್ದಾರೆ. ದೈಹಿಕ ಶಿಕ್ಷಕರಾದ ಬೀರಲಿಂಗ ಅವರು ಮಾತನಾಡಿ ಶಾಲೆಯ ಆವರಣದಲ್ಲಿ ಇರುವ ವಿವಿಧ ತರಹದ ಸಸಿಗಳನ್ನು ಬಳಸಿಕೊಂಡು ಅತ್ಯುತ್ತಮ ರೀತಿಯಲ್ಲಿ ಪ್ರಯೋಗಗಳನ್ನು ಮಾಡುವ ಮೂಲಕ ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಕ್ಕಳು ಶಿಕ್ಷಕರ ದಿನಾಚರಣೆ, ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ ಮತ್ತು ಅತ್ಯುತ್ತಮ ಶಿಕ್ಷಕಿ ಆಶಾ ಅವರ 24ನೇ ಜನ್ಮ ದಿನವನ್ನು ಸಂಭ್ರಮದಿಂದ ಆಚರಿಸಿ ಖುಷಿ ಪಟ್ಟರು. ಈ ಸಂದರ್ಭದಲ್ಲಿ ಶಿಕ್ಷಕೀಯರಾದ ಬಸ್ಸಮ್ಮ ಆರ್, ದಾನೇಶ್ವರಿ, ಜ್ಯೋತಿ ಸೇರಿ ಆಶಾ ಅವರಿಗೆ ಅಭಿನಂದನೆ ತಿಳಿಸಿದರು.