ಕೊಳವೆಬಾವಿ ಕೊರೆಯುವ ಕಾಮಗಾರಿಗೆ ಭೂಮಿ ಪೂಜೆ
ಕಲಬುರಗಿ,ಸೆ.13:ತಾಲೂಕಿನ ಪಟ್ಟಣ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹತಗುಂದಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪಟ್ಟಣ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಶಾಲೆಗಳಲ್ಲಿ ವಾಟರ್ ಏಡ್ ಸಂಸ್ಥೆಯ ಅಮ್ರೃತ ವಷಿ9ಣಿ ಯೋಜನೆ ಅಡಿಯಲ್ಲಿ ಬುಧವಾರ ಬೋರ್ವೆಲ್ ಕೊರೆಯುವ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಲಾ ಅಂಗಳದಲ್ಲಿ ಹರಿದು ಬರುವ ಮಳೆ ನೀರು ಭೂಮಿಗೆ ಇಂಗಿಸುವ ಕಾರ್ಯಕ್ಕೆ ಸಂಸ್ಥೆಯ ವತಿಯಿಂದ ತಲಾ ಎರಡು ಶಾಲೆಗಲ್ಲಿ 150 ಅಡಿ ಬೋರ್ವೆಲ್ ಹಾಕಿಸಿ ಶಾಲಾ ಅಂಗಳದಲ್ಲಿ ಹರಿದು ಬರುವ ಮಳೆ ನೀರು ಭೂಮಿಗೆ ಇಂಗಿಸುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ರಾಜಶೇಖರ ಗುಂಡದ ಅವರು, ಶಾಲೆಯಲ್ಲಿ ಸಂಸ್ಥೆಯ ವತಿಯಿಂದ ಮಾಡುವ ಕೆಲಸ ಬಹಳ ಮುಖ್ಯವಾಗಿದೆ. ಏಕೆಂದರೆ ಅಂತರ್ಜಲ ಮಟ್ಟವನ್ನು ಕಡಿಮೆ ಯಾಗುತಿದೆ ಕಾರಣ ಇಂತಹ ಕೆಲಸದಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಅನುಕೂಲವಾಗುತ್ತದೆ ಎಂದರು.
ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಮುಖ್ಯ ಗುರುಗಳಾದ ಪ್ರಭುಲಿಂಗ ಕುಂಬಾರ ಅವರು ಮಾತನಾಡಿ, ಮಳೆ ನೀರು ಭೂಮಿಗೆ ಇಂಗಿಸುವ ಕೆಲಸ ಪ್ರತಿಯೊಬ್ಬರು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಏಕೆಂದರೆ ಅಂತರ್ಜಲ ಮಟ್ಟ ಕುಸಿಯುತ್ತಿದೆ ಹೀಗೆ ಬಿಟ್ಟರೆ ಮುಂದೆ ನೀರು ಇಲ್ಲದ ಪರಿಸ್ಥಿತಿ ಬರಬಹುದು ಕಾರಣ ನೀರು ಭೂಮಿಗೆ ಇಂಗಿಸುವ ಕೆಲಸ ಆಗಬೇಕಾಗಿದೆ. ಸಂಸ್ಥೆಯ ವತಿಯಿಂದ ಮಾಡುವ ಈ ಕೆಲಸ ತುಂಬಾ ಒಳ್ಳೆಯ ಕೆಲಸವಾಗಿದ್ದೆ ಎಂದರು.
ಸಂಸ್ಥೆಯ ಸಿಬ್ಬಂದಿಗಳಾದ ಭೀಮರಾವ್ ಭಾರತಿ ಮತ್ತು ನಾಗರೇಡ್ಡಿ ಪಾಟಿಲ್ ಹಾಗೂ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಾಗರಾಜ ಖಂಡೋಜಿ ಶಾಲಾ ಶಿಕ್ಷಕರುಗಳಾದ ಅಕ್ತರ್ ಶರೀನ್, ಶಾಂತಾಬಾಯಿ, ಬಸವರಾಜ, ಎಸ್.ಬಿ.ಬಾಗಲಿ.ಶ್ರೀಶೈಲ ಸಕ್ಕರಗಿ, ದೇವಿಂದ್ರಪ್ಪ ದೊಡಮನಿ ಉಪಸ್ಥಿತರಿದ್ದರು.