ಗಣೇಶ ವಿಸರ್ಜನೆ ಸಂಭ್ರಮದಲ್ಲಿ ಮಿಂದೆದ್ದ ಜನ
ಆಲಮೇಲ:ಸೆ.13:ಪುಣೆ ಮಾದರಿ ಮತ್ತು ಮೈಸೂರು ದಸರಾ ಹೋಲುವ ರೀತಿಯಲ್ಲಿ ಆಲಮೇಲದಲ್ಲಿ ಐದನೇ ದಿನದ ಗಣೇಶ ವಿಸರ್ಜನೆ ಅತಿ ವಿಜೃಂಭಣೆಯಿಂದ ನಡೆಯಿತು. ಪಟ್ಟಣ ಸೇರಿದಂತೆ ಜಿಲ್ಲೆಯಾದ್ಯಂತ ಮತ್ತು ಪಕ್ಕದ ಕಲಬುರ್ಗಿ ಮತ್ತು ನೆರೆಯ ಮಹಾರಾಷ್ಟ್ರದಿಂದ ಇಲ್ಲಿನ 14 ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿರುವ ಗಣೇಶ ವಿಸರ್ಜನೆ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಡಾಲ್ಬಿ ಮುಂದೆ ದೇಶಿ ಕಲೆ, ನೃತ್ಯ, ಗಣೇಶನ ಮುಂದೆ ಇದ್ದ ನಾನಾ ಸ್ತಬ್ಧ ಚಿತ್ರಗಳು ಮಂಕಾಗಿ ಕಂಡವು. ನೋಡಲು ಬಂದ ಜನರಿಗೂ ಮಜಾ ನೀಡಿತು.
ಡಿಜೆ ಸೌಂಡ್ ಗೆ ಕುಣಿದು ಕುಪ್ಪಳಿಸುವ ಯುವಕರು, ಮಕ್ಕಳ ಕೋಲಾಟ ಸಹ ಈ ಸದ್ದಿಗೆ ಮೆರಗು ನೀಡಿತು.
ಆಕರ್ಷಕ ಸ್ತಬ್ಧ ಚಿತ್ರ:
14 ಗಜಾನನ ಸಂಘದವರು ಆಕರ್ಷಕ ಸ್ತಬ್ಧ ಚಿತ್ರ ಮಾಡಿದ್ದರು. ಅವು ಒಂದೊಕ್ಕಿಂತ ಒಂದು ಭಿನ್ನವಾಗಿದ್ದವು. ಅವುಗಳಿಗೆ ಹಾಗೂ ಟ್ರ್ಯಾಕ್ಟರ್‍ಗೆ ಮಾಡಿದ್ದ ದೀಪಾಲಂಕಾರ ಕೂಡಾ ಎಲ್ಲರ ಗಮನ ಸೆಳೆಯಿತು. ಗಣೇಶ ಪ್ರತಿಷ್ಠಾಪನೆ ದಿನ ಅಷ್ಟೊಂದು ಖರ್ಚು ಮಾಡುವುದಿಲ್ಲ. ಬದಲಾಗಿ ವಿಸರ್ಜಣೆ ದಿನ ಮಾತ್ರ ಲಕ್ಷಾಂತರ ರೂ. ವೆಚ್ಚ ಮಾಡಿ ಸ್ತಬ್ಧ ಚಿತ್ರಗಳನ್ನು ಮಾಡಿದ್ದರು. ಹೀಗಾಗಿಯೇ ಅದನ್ನು ನೋಡಲು ಬಂದವರಿಗೆ ಒಂದಕ್ಕಿಂತ ಒಂದು ವಿಭಿನ್ನವಾಗಿ ಕಂಡವು. ಜತೆಗೆ ಪಕ್ಕದ ಅಫ್ಜಲಪುರ, ಸಿಂದಗಿ, ಮಹಾರಾಷ್ಟ್ರದ ಅಕ್ಕಲಕೋಟ, ದುದನಿ, ಸೊಲ್ಹಾಪುರ ಸೇರಿದಂತೆ ಇತರ ಕಡೆಯಿಂದ ಬಂದವರು 7, 9 ಮತ್ತು 11ನೇ ದಿನ ಗಣೇಶ ವಿಸರ್ಜನೆ ವೇಳೆ ತಮ್ಮ ಊರಿನಲ್ಲಿಯೂ ಸ್ತಬ್ಧ ಚಿತ್ರ ಮಾಡುವಂತೆ ಬುಕ್ ಮಾಡಿದ್ದು ಹೋಗುತ್ತಾರೆ.
ಈ ಸಲ ಸಾಮಾಜಿಕ ಸ್ತಬ್ಧಚಿತ್ರಗಳು ಸೇರಿದಂತೆ ಪೌರಾಣಿಕ ಸ್ತಬ್ಧ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು ಕಾಮನಕಟ್ಟಿ ಚೌಕ್‍ನವರು ಪಾಂಡುರಂಗ ವಿಠ್ಠಲ, ಬಸವನಗರದ ಚೌಕ್‍ನವರು ಸಪ್ತ ಸಂಗೀತ, ಹಿರೋಡೇಶ್ವರ ಚೌಕ್ ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರ,ಗಾಂಧಿಚೌಕ್ ನಿಂದ ಶಿವಾಜಿ ನಿಂತಿರುವ ದೃಶ್ಯ, ರಾಘವೇಂದ್ರ ಚೌಕ್‍ನವರು ಬಾಲ ರಾಮನ ಅವತಾರ, ಲಕ್ಷ್ಮಿ ಚೌಕ್‍ನವರು ದ್ಯಾಮವ್ವನ ಜಾತ್ರೆ, ಗಣೇಶ ನಗರದವರು ಆದಿ ಶಕ್ತಿ ಅವತಾರ,
ವೀರಭದ್ರೇಶ್ವರ ಬೆಲ್ಲದ ಬಾಗೇವಾಡಿಯಿಂದ ದ್ಯಾಮವ್ವನ ಜಾತ್ರೆ, ಸಾವಳಗಿ ಶಿವಲಿಂಗೇಶ್ವರ ಚೌಕನಿಂದ ಶಿವ-ನಂದಿ,ಹನುಮಾನ ಚೌಕನಿಂದ ರಾವಣನ ಅವತಾರ,ಮುಳಮಠ ಚೌಕ್ ಶಿವಾಜಿ ಕೋಟೆ,ದತ್ತಾ ಚೌಕ್ ತುಳಜಾಪೂರ ಅಂಬಾಭವಾನಿ ದ್ವಾರ ಬಾಗಿಲು ಸೇರಿದಂತೆ ಮತ್ತಿತರರ ಸ್ತಬ್ಧಚಿತ್ರಗಳು ಆಕರ್ಷಕವಾಗಿದ್ದವು
ಸೂಕ್ತ ಪೆÇಲೀಸ್ ಬಂದೋಬಸ್ತ್:
ಪುಣೆ ಮಾದರಿಯ ಈ ಗಣೇಶ ವಿಸರ್ಜನೆ ನೋಡಲು 50 ಸಾವಿರಕ್ಕೂ ಅಧಿಕ ಜನರು ಸೇರಿದ್ದರು. ಬುಧವಾರ ರಾತ್ರಿ 8 ಗಂಟೆಗೆ ಆರಂಭವಾದ ಮೆರವಣಿಗೆ ಒಂದು ಚೌಕ್‍ನಿಂದ ಇನ್ನೊಂದು ಚೌಕ್‍ಗೆ ಹೋಗಿ ಅಲ್ಲಿನ ಗಣಪತಿ ಜತೆ ಸೇರಿ ಮುಂದೆ ಸಾಗುತ್ತಿರುವುದು ಕಂಡು ಬಂತು. ಹೀಗಾಗಿ ಪೆÇಲೀಸರು ಸೂಕ್ತ ಪೆÇಲೀಸ್ ಬಂದೋಬಸ್ತ್ ಒದಗಿಸಿದ್ದರು.ಗುರುವಾರ ಬೆಳಗಿನ ಜಾವ ಎಲ್ಲ ಗಣಪತಿಗಳ ವಿಸರ್ಜನೆ ನಡೆಯಿತು.
ಈ ವೇಳೆ ಮಂಡಳಿ ಅಧ್ಯಕ್ಷ ಮಹಿಬೂಬ ಮಸಳಿ,ಮುಖಂಡರಾದ ರಮೇಶ ಭಂಟನೂರ,ಅಶೋಕ ಕೊಳಾರಿ,ವಿಜಯಕುಮಾರ ಅಕ್ಕಲಕೋಟ,ಸುನೀಲ ಉಪ್ಪಿನ,ಸುರೇಶ ಬಂಡಗಾರ,ಗನಿಸಾಬ್ ದೇವರಮನಿ,ವಿನಾಯಕ ಕಲಶೆಟ್ಟಿ,ಸಿದ್ದುಗೌಡ ಬಿರಾದಾರ,ನಾಸೀರ ದೇವರಮನಿ ಸೇರಿದಂತೆ ಅನೇಕರಿದ್ದರು.
ಗಣೇಶ ವಿಸರ್ಜನೆ ವೇಳೆ ಪಿಎಸ್‍ಐ ಸಖತ್ ಸ್ಟೆಪ್:
ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಮೆರವಣಿಗೆ ವೇಳೆ ಸಖತ್ ಸ್ಟೇಪ್ ಹಾಕಿದ ಆಲಮೇಲ ಪಿಎಸೈ ಅರವಿಂದ ಅಂಗಡಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು ಪಿಎಸ್ ಐ ಅವರನ್ನು ಹೆಗಲ ಮೇಲೆ ಎತ್ತಿಕೊಂಡು ಸ್ಥಳಿಯರು ಕುಣಿದರು. ಪಟ್ಟಣದಲ್ಲಿ ಭಾವೈಕ್ಯತೆಯಿಂದ ಪ್ರತಿ ವರ್ಷ ಕೂಡಾ ಗಣೇಶೋತ್ಸವ ಆಚರಣೆ
ಪಿಎಸ್‍ಐ ನೊಂದಿಗೆ ಇನ್ನೂಳಿದ ಸಿಬ್ಬಂದಿಯಿಂದಲೂ ಡಾನ್ಸ್..
ಪಿಎಸ್‍ಐ ಡಾನ್ಸ್ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್