ಸನಾತನ ಧರ್ಮ ರಕ್ಷಣೆಯಾರ್ಥ ಹಿಂದೂ ಮಹಾ ಗಣಪತಿ!
ತಾಳಿಕೋಟೆ:ಸೆ.13: ನಮ್ಮ ಭಾರತ ದೇಶದ ಸನಾತನ ಧರ್ಮ ಉಳಿಯುವದರ ಜೊತೆಗೆ ಬೆಳೆಯಬೇಕು ಹಿಂದೂ ಧರ್ಮವೂ ವಿಶ್ವವ್ಯಾಪಿ ಪಸರಿಸಬೇಕು ಜಾತಿ ರಹೀತವಾದ ಸಮಾಜವು ನಿರ್ಮಾಣವಾಗಬೇಕೆಂಬ ಸದ್ದಿಚ್ಚೆಯೊಂದಿಗೆ ಸಾಗಿದ ಪಟ್ಟಣದ ಹಿಂದೂ ಮಹಾ ಗಣಪತಿ ಮಂಡಳಿಯು ದಶಮಾನೋತ್ಸವವನ್ನು ದಾಟಿ 11ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.
ಪಟ್ಟಣದ ತಿಲಕ ರಸ್ತೆಯಲ್ಲಿ ಪ್ರತಿ ವರ್ಷ ಬೃಹತ್ ಆಕಾರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾ ಸಾಗಿರುವ ಹಿಂದೂ ಮಹಾ ಗಣಪತಿ ಮಂಡಳಿಯನ್ನು ಕಟ್ಟುವ ಮುಂಚೆ ಧರ್ಮ ರಕ್ಷಣಾರ್ಥವಾಗಿ ಯಾವ ಕಾರ್ಯಗಳನ್ನು ಮಾಡಬೇಕು ಕಾರ್ಯಕ್ರಮಗಳ ಆಯೋಜನೆಗಳು ಹೇಗಿರಬೇಕೆಂಬ ಸದುದ್ದೇಶಗಳನ್ನು ಹೊತ್ತುಕೊಂಡು ಪ್ರಾರಂಬಿಸಲಾದ ಗಣೇಶೋತ್ಸವದ 10 ವರ್ಷಗಳಲ್ಲಿಯೂ ಧರ್ಮ ರಕ್ಷಣಾರ್ಥವಾಗಿ ಮತ್ತು ಸನಾತನ ಧರ್ಮದಡಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಈ ಭಾಗದ ಜನರ ಪ್ರೀತಿಯ ಅಚ್ಚುಮೆಚ್ಚಿನ ಮಂಡಳಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಈ ಮಂಡಳಿಗೆ ಶರಣರು ಸಂತರೇ ಪ್ರತಿ ಹಂತದಲ್ಲಿಯೂ ಬೆನ್ನೇಲುಬಾಗಿ ನಿಲ್ಲುವದರ ಜೊತೆಗೆ ಇಡೀ ವರ್ಷ ಪೂರ್ತಿ ಧರ್ಮದ ಕಾರ್ಯದಲ್ಲಿ ತೊಡಗಿಕೊಂಡಿರುವದು ಇನ್ನೋಂದು ವಿಶೇಷವಾಗಿದೆ ಪ್ರತಿ ವರ್ಷವೂ 9 ದಿನಗಳ ಕಾಲ ಬೆಳಿಗ್ಗೆಯಿಂದ ಸಾಯಂಕಾಲದ ವರೆಗೂ ಗಣ ಹೋಮ ಮಹಾ ಪೂಜೆ ಒಳಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿಸುತ್ತಾ ಬಂದಿದ್ದು ಅದರಲ್ಲಿ ವಿಶೇಷವಾಗಿ ತಾಯಿಯ ಸ್ವರೂಪವಾಗಿರುವ ಗೋವನ್ನು(ಆಕಳು) ಪೂಜೆ ಮಾಡುವದರೊಂದಿಗೆ ಗಣೇಶನನ್ನು ಪ್ರತಿಷ್ಠಾಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಅದರ ಜೊತೆಗೆ ಸನಾತನ ಧರ್ಮದಡಿಯಲ್ಲಿ ಸಾಂಸ್ಕøತಿಕ ಭರತನಾಟ್ಯ ಪ್ರದರ್ಶನ, ಮಾತೆಯರಿಗಾಗಿ ರಂಗೋಲಿ ಸ್ಪರ್ದೆ, ಭಾರತ ಮಾತಾ ಪೂಜೆಯೊಂದಿಗೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಕಾರ್ಗಿಲ್ ವಿಜಯೋತ್ಸವ, ದೀಪೋತ್ಸವ ಕಾರ್ಯಕ್ರಮ, ಅಲ್ಲದೇ ಶಾಲಾ ಮಕ್ಕಳಿಗಾಗಿ ವಿಶ್ವಗುರು ಭಾರತ ಎಂಬ ಹೆಸರಿನ ಮೇಲೆ ಪ್ರಭಂದ ಸ್ಪರ್ದೆ, ಮತ್ತು ನಾಡಿನ ಶರಣರ ಸಂತರಿಗೆ ಗೌರವಾರ್ಥವಾಗಿ ಎಲ್ಲ ಶರಣ ಸಂತರನ್ನು ಒಂದೇಡೆ ಸೇರಿಸಿ ಪಾದಯಾತ್ರೆಯ ಮೂಲಕ ವೇದಿಕೆಗೆ ಆಗಮಿಸಿ ಸಂತ ಸಮಾವೇಶ ನಡೆಸುವದರೊಂದಿಗೆ ಸಮಾಜಕ್ಕೆ ಸನಾತನದ ಧರ್ಮದ ಸಂದೇಶವನ್ನು ಕೊಡಿಸುವಂತ ಹತ್ತು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಂತರು, ಶರಣರು, ಜನಿಸಿದ ಈ ನಾಡಿನಲ್ಲಿ ಹಿರಿಮೆಯನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳಿಗೆ ಹಿಂದೂ ಮಹಾ ಗಣಪತಿ ಮಂಡಳಿಯೂ ಸಾಕ್ಷೀಕರಿಸುತ್ತಾ ಬಂದಿದೆ.
ಇನ್ನೂ ಧರ್ಮ ರಕ್ಷಣಾರ್ಥವಾಗಿ ದಿಕ್ಸೂಚಿ ಭಾಷಣಕಾರರನ್ನು ಅಹ್ವಾನಿಸುತ್ತಾ ಇಂದಿನ ಯುವ ಫಿಳಿಗೆ ಸನಾತನ ಧರ್ಮದ ರಕ್ಷಣೆಯಲ್ಲಿ ಯುವಕರ ಪಾತ್ರ ಏಷ್ಟು ಮುಖ್ಯವಾಗಿದೆ ಇಂದಿನ ಯುವ ಸಮೂಹ ಧರ್ಮದ ದಾರಿಯಲ್ಲಿ ನಡೆಯಲು ಯಾವ ರೀತಿಯಾದ ನಡೆ, ನುಡಿಗಳನ್ನು ಅನುಸರಿಸಬೇಕೆಂಬ ಯಾವ ರೀತಿಯಾದ ಸನಾತನ ಧರ್ಮದ ಸಂಸ್ಕøತಿ ಮತ್ತು ಸಂಸ್ಕಾರ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ಉಣಬಡಿಸಲು ವಿರಾಟ್ ಹಿಂದೂ ಸಮಾವೇಶವನ್ನು ಆಯೋಜಿಸಿ ಯುವಕರನ್ನು ಧರ್ಮದ ದಾರಿಯತ್ತ ಕೊಂಡೊಯುವಂತಹ ಕಾರ್ಯದ ಜೊತೆಗೆ ಬಾಲಗಂಗಾದರ ತಿಲಕ ಅವರು ಹೊತ್ತ ಕನಸ್ಸಿನ ಹಾದಿಯತ್ತ ಹಿಂದೂ ಮಹಾಗಣಪತಿ ಮಂಡಳಿ ಸಾಗುತ್ತಿರುವದು ವಿಶೇಷವಾಗಿದೆ.
ಮಹಾ ಗಣಪತಿ ಪ್ರತಿಷ್ಠಾಪನೆಯ ದಿನದಂದಲೂ ವಿಸರ್ಜನೆಯ ವರೆಗೂ ಮೂರ್ತಿ ಪ್ರತಿಷ್ಠಾಪನೆಯ ಸ್ಥಳದಲ್ಲಾಗಲಿ ಅಥವಾ ವಿಸರ್ಜನೆಯ ಸಮಯದ್ದಲ್ಲಾಗಲಿ ಕಳೆದ 10 ವರ್ಷಗಳಿಂದಲೂ ಚಲನಚಿತ್ರಗೀತೆಗಳನ್ನು ಹಾಗೂ ಪರಿಸರ ಮಾಲಿನ್ಯದ ಪಟಾಕ್ಷೀ, ಗುಲಾಲ್ ಎರೆಚುವದನ್ನು ಸಂಪೂರ್ಣ ನಿಷೇಧಿಸುವದರೊಂದಿಗೆ ಕೇವಲ ಭಕ್ತಿಗೀತೆಗಳು ಮತ್ತು ಹಿಂದೂ ಧರ್ಮದ ರಕ್ಷಣೆಗೆ ಅವಶ್ಯವಿರುವ ಗೀತೆಗಳು ಮತ್ತು ದೇಶದ ವೀರ ಮಹಾ ಪುರುಷರ ಗೀತೆಗಳನ್ನು ಬಳೆಸುತ್ತಾ ಎಲ್ಲರಲ್ಲಿಯೂ ಧರ್ಮದ ದಾರಿಯ ಜೊತೆಗೆ ಭಕ್ತಿಯ ಪರಾಕಾಷ್ಠೇಯನ್ನು ಹೆಚ್ಚಿಸುವಂತಹ ಕಾರ್ಯ ಮಾಡುತ್ತಾ ಸಾಗಿದ್ದಾರೆ.
ಈ ಭಾರಿಯ ಗಣೇಶ ಪ್ರತಿಷ್ಠಾಪನೆಯ ವೇದಿಕೆಗೆ ನಾಡಿನ ನಡೆದಾಡುವ ದೇವರು ಸಂತರಾದ ವಿರಕ್ತಶ್ರೀಗಳ ಹೆಸರನ್ನು ಇಡಲಾಗಿದ್ದು. ವೇದಿಕೆಯ ಮುಂಭಾಗದಲ್ಲಿ ದೈನಂದಿನ ಕಾರ್ಯಕ್ರಮಗಳ ವಿವರಣೆಯನ್ನು ಎಲ್‍ಇಡಿಯ ಮೂಲಕ ಪ್ರಚಾರ ಪಡಿಸುವಂತಹ ಕಾರ್ಯ ಮಾಡಲಾಗಿದೆ.
ಪಟ್ಟಣದ ಶ್ರೀ ಸಾಯಿ ರಕ್ತ ತಪಾಸಣಾ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಭಿರ, ಉಚಿತ ಮಧುಮೇಹ, ರಕ್ತದೊತ್ತಡ, ಉಚಿತ ಆರೋಗ್ಯ ತಪಾಸಣಾ ಶಿಭಿರಗಳನ್ನು ಆಯೋಜಿಸಿ ಬಡಜನರಿಗೆ ಅನುಕೂಲ ಕಲ್ಪಿಸುವಂತಹ ಕಾರ್ಯವೂ ಕೂಡಾ ಮಾಡಲಾಗಿದೆ.
ತ್ರಿಮೂರ್ತಿ ಶ್ರೀಗಳೇ ಪೈನಲ್
ದಶಮಾನೋತ್ಸವದ ಹೆಜ್ಜೆ ದಾಟಿ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಹಿಂದೂ ಮಹಾ ಗಣಪತಿ ಮಂಡಳಿಗೆ ಇಲ್ಲಿಯವರೆಗೂ ಅಧಿಕೃತ ಪದಾಧಿಕಾರಿಗಳು ನೇಮಕ ಗೊಂಡಿಲ್ಲಾ ಮಂಡಳಿಯ ಗೌರವಾಧ್ಯಕ್ಷರನ್ನಾಗಿ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಗೌರವ ಉಪಾಧ್ಯಕ್ಷರನ್ನಾಗಿ ಕೆಸರಟ್ಟಿ ಶಂಕರಲಿಂಗ ಮಠದ ಶ್ರೀ ಸೋಮಲಿಂಗ ಮಹಾ ಸ್ವಾಮಿಗಳು, ಗೌರವ ಕಾರ್ಯದರ್ಶಿಗಳನ್ನಾಗಿ ಶ್ರೀ ಶಿವಭವಾನಿ ಮಂದಿರದ ಅರ್ಚಕರಾಗಿರುವ ವೇ.ಸಂತೋಷಬಟ್ ಜೋಶಿ ಈ ತ್ರಿಮೂರ್ತಿ ಶ್ರೀಗಳು ಸನಾತನ ಧರ್ಮದ ದಾರಿಯಲ್ಲಿ ಹಾಕಿಕೊಡುವ ಚೌಕಟ್ಟಿನಲ್ಲಿಯೇ ಕಾರ್ಯಕ್ರಮಗಳು ಇಲ್ಲಿಯವರೆಗೂ ನಡೆಯುತ್ತಾ ಬಂದಿವೆ.
ಈ ಧರ್ಮದ ಕಾರ್ಯಕ್ಕೆ ಶ್ರೀಗಳ ಜೊತೆಯಾಗಿ ನೂರಾರು ಯುವ ಸಮೂಹ ಟೊಂಕಕಟ್ಟಿ ನಿಲ್ಲುವದರೊಂದಿಗೆ ಇಲ್ಲಿಯವರೆಗೂ ಯಾವುದೇ ಅಡೆತಡೆಗಳಿಲ್ಲದೇ ಜಿಲ್ಲೆಯಲ್ಲಿಯೇ ವಿಶಿಷ್ಠ ರೀತಿಯಲ್ಲಿ ಮಂಡಳಿ ಹೆಸರು ಮಾಡುವಂತೆ ಕೈ ಜೋಡಿಸಿರುವದು ಶ್ರೀಗಳಿಗೆ ಧರ್ಮದ ಕಾರ್ಯಗಳನ್ನು ನಡೆಸಲು ಇನ್ನಷ್ಟು ಪುಷ್ಠಿ ನೀಡಿದಂತಾಗಿದೆ.
ಸನಾತನ ಧರ್ಮದ ಉಳಿವಿನಡೆಗೆ ಸಾಗಿರುವ ಹಿಂದೂ ಮಹಾ ಗಣಪತಿ ಪ್ರತಿ ಷ್ಠಾಪನೆಯ ದಿನದಿಂದ ವಿಸರ್ಜನೆ ಸಮಯದವರೆಗೂ ಬಾಗಲಕೋಟ, ಯಾಧಗಿರಿ, ಮತ್ತು ವಿಜಯಪೂರ, ಕಲ್ಬರ್ಗಿ, ಜಿಲ್ಲೆ ಒಳಗೊಂಡು ಅನೇಕ ತಾಲೂಕುಗಳಿಂದಲೂ ಮಹಿಳೆಯರು ಮತ್ತು ಯುವಕರು ಪಾಲ್ಗೊಂಡು ಗಣೇಶೋತ್ಸವದ ಹಬ್ಬದ ಸಂಭ್ರಮವನ್ನು ಸವಿಯುತ್ತಾ ಸಾಗಿರುವದು ಈ ಭಾಗದಲ್ಲಿ ಭಕ್ತಿಯ ಪರಾಕಾಷ್ಠೆಯನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.