ಸಚಿವರಿಂದ ಭಿತ್ತಿ ಪತ್ರ ಬಿಡುಗಡೆ
ಬೀದರ್:ಸೆ.13: ಇಲ್ಲಿಯ ಬೆಲ್ದಾಳೆ ಕನ್ವೆನ್ಶನ್ ಹಾಲನಲ್ಲಿ ಸೆ. 22 ರಂದು ಹಮ್ಮಿಕೊಂಡಿರುವ ಶ್ರಾವಣ ಶಿವ ದರ್ಶನ ಸಂಚಾರ, ಶ್ರೀ ಸಿದ್ಧಾಂಥ ಶಿಖಾಮಣಿ ಗ್ರಂಥ ಅರ್ಪಣೆ ಅಭಿಯಾನ ಸಮಾರೋಪ ಹಾಗೂ ಶ್ರೀ ಜಗದ್ಗುರು ಪಂಚಾಚಾರ್ಯ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದ ಭಿತ್ತಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಗರದಲ್ಲಿ ಸೋಮವಾರ ಬಿಡುಗಡೆ ಮಾಡಿದರು.
ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.
ಅಂದು ಬೆಳಿಗ್ಗೆ 8.30ಕ್ಕೆ ಪಾಪನಾಶ ದೇಗುಲದಿಂದ ಬೆಲ್ದಾಳೆ ಕನ್ವೆನ್ಶನ್ ಹಾಲವರೆಗೆ ಶ್ರೀಶೈಲ ಜಗದ್ಗುರು ಹಾಗೂ ವೀರಶೈವ ಲಿಂಗಾಯತ ಧರ್ಮಗ್ರಂಥ ಸಿದ್ಧಾಂಥ ಶಿಖಾಮಣಿಯ ಭವ್ಯ ಮೆರವಣಿಗೆ ಜರುಗಲಿದೆ ಎಂದು ಕೇಂದ್ರ ಸರ್ಕಾರದ ಸಾಂಸ್ಥಿಕ ಪ್ರಾಣಿ ನೀತಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವರು, ಸಂಸದರು, ಶಾಸಕರು, ಜಿಲ್ಲೆಯ ಶಿವಾಚಾರ್ಯರು, ಹರ, ಗುರು, ಚರ ಮೂರ್ತಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಬೆಮಳಖೇಡ ಹಿರೇಮಠ ಸಂಸ್ಥಾನದ ಡಾ. ರಾಜಶೇಖರ ಶಿವಾಚಾರ್ಯ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಮುಖಂಡರಾದ ಪ್ರಕಾಶ ಪಾಟೀಲ ಮಳಚಾಪುರ, ಜಗನ್ನಾಥ ಕರಂಜೆ ಬಾಳೂರ, ಕಂಟೆಪ್ಪ ಭಂಗೂರೆ, ರಾಕೇಶ ಮಠಪತಿ, ನಾಗಯ್ಯ ಸ್ವಾಮಿ, ಶಾಮಣ್ಣ ಬಂಬಳಗಿ ಮತ್ತಿತರರು ಇದ್ದರು.
ಕಾರ್ಯಕ್ರಮ ಅರ್ಥಪೂರ್ಣ ಹಾಗೂ ಯಶಸ್ವಿಯಾಗಿಸುವ ದಿಸೆಯಲ್ಲಿ ಭರದ ಸಿದ್ಧತೆ ನಡೆದಿವೆ. ಜಿಲ್ಲೆಯ ವಿವಿಧೆಡೆಯ ಸುಮಾರು ಮೂರು ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಶಿವಯ್ಯ ಸ್ವಾಮಿ
ಕೇಂದ್ರ ಸರ್ಕಾರದ ಸಾಂಸ್ಥಿಕ ಪ್ರಾಣಿ ನೀತಿ ಸಮಿತಿ ಸದಸ್ಯ