ಪೂಜ್ಯ ದೊಡ್ಡಪ್ಪ ಅಪ್ಪವರ 41ನೇ ಪುಣ್ಯ ಸ್ಮರಣೋತ್ಸವ
ಕಲಬುರಗಿ : ಸೆ.13:ನಗರದ ಗಾಜಿಪೂರ ಬಡಾವಣೆಯ ಸಪ್ತಗಿರಿ ಸಭಾಂಗಣದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಪೂಜ್ಯ ದೊಡ್ಡಪ್ಪ ಅಪ್ಪವರ 41ನೇ ಪುಣ್ಯಸ್ಮರಣೆ ಜರುಗಿತು.
ಸಮಾಜ ಸೇವಕ ಸಿದ್ದರಾಮ ತಳವಾರ ಮಾತನಾಡಿ, ನಮ್ಮ ಜಿಲ್ಲೆ, ಕ.ಕ ಭಾಗಕ್ಕೆ ದೊಡ್ಡಪ್ಪ ಅಪ್ಪವರು ನೀಡಿರುವ ಕೊಡುಗೆ ಅವಿಸ್ಮರಣೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕರಾದ ಎಚ್. ಬಿ.ಪಾಟೀಲ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್. ಬಿರಾದಾರ, ಪ್ರಮುಖರಾದ ಪ್ರಭವ ಪಟ್ಟಣಕರ್, ಅನೀಲಕುಮಾರ ಬಿರಾದಾರ, ವಿಜಯಕುಮಾರ ಪಡಶೆಟ್ಟಿ, ಶ್ರೀಶೈಲ ಜಮಾದಾರ, ಶರಣಪ್ಪ ಬಿ., ಸುನೀಲಕುಮಾರ, ಶಿವಪ್ಪ, ರತ್ನಪ್ಪ ಜಮಾದಾರ, ಸೂರ್ಯಕಾಂತ, ರಾಧಾಬಾಯಿ, ಲಕ್ಷ್ಮೀಬಾಯಿ ಜಮಾದಾರ, ಸೌಭಾಗ್ಯ, ನಾಗರತ್ನ, ಐಶ್ವರ್ಯ, ಬಸಮ್ಮ, ಶ್ರೀದೇವಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.