ಕರ್ತವ್ಯ ನಿಷ್ಠೆಗೆ ಒಲಿದ ಮುಖ್ಯಮಂತ್ರಿ ಪದಕ ; ಸಿದ್ಧಾರ್ಥ ಬಸರಿಗಿಡ
ಅಫಜಲಪುರ ; ಸೆ.13:ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದರ ಫಲವಾಗಿ ಮುಖ್ಯಮಂತ್ರಿ ಪದಕ ದೊರಕಿದ್ದು ತುಂಬಾ ಹೆಮ್ಮೆಯ ಸಂಗತಿ ಎಂದು ಮಾಜಿ ಜಿ. ಪಂ.ಸದಸ್ಯ ಹಾಗೂ ವಕೀಲರಾದ ಸಿದ್ಧಾರ್ಥ ಬಸರಿಗಿಡ ಅವರು ಹೇಳಿದರು.
ಚಿಂಚೋಳಿ ಗ್ರಾಮದ ಶ್ರೀ ಭಾಗ್ಯವಂತಿ ದೇವಸ್ಥಾನದಲ್ಲಿ ಅರಣ್ಯ ಇಲಾಖೆಯಲ್ಲಿ ಅರಣ್ಯ ವಲಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ವಿಶ್ವನಾಥ ಪಾಟೀಲ ಅವರಿಗೆ ಮುಖ್ಯಮಂತ್ರಿಗಳ ಪದಕ ದೊರಕಿರುವ ಅಂಗವಾಗಿ ಗ್ರಾಮದ ವತಿಯಿಂದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸರಳ, ಸಜ್ಜನಿಕೆ ವ್ಯಕ್ತಿತ್ವದಿಂದ ಗ್ರಾಮದ ಎಲ್ಲರೊಂದಿಗೆ ಬಾಂಧವ್ಯವನ್ನು ಹೊಂದಿರುವ ಪಾಟೀಲರಿಗೆ ಮುಂದಿನ ದಿನಗಳಲ್ಲಿ ಅತ್ಯುನ್ನತ ಸ್ಥಾನ ದೊರಕುವುದರ ಜೊತೆಗೆ ಇನ್ನಷ್ಟು ಪ್ರಶಸ್ತಿಗಳು ಲಭಿಸಲೆಂದು ಸಮಸ್ತ ಗ್ರಾಮದ ಪರವಾಗಿ ಅಭಿನಂದನೆಗಳು ತಿಳಿಸಿ ಶುಭ ಹಾರೈಸುವೆ ಎಂದು ಬಸರಿಗಿಡ ತಿಳಿಸಿದರು.
ಈ ಸಂದರ್ಭದಲ್ಲಿ ಚಿಂಚೋಳಿ ಗ್ರಾಮದ ಗದುಗೇಶ್ವರ ಮಠದ ಪೀಠಾಧಿಪತಿ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ಗ್ರಾ.ಪಂ.ಅಧ್ಯಕ್ಷ ಸುರೇಶ್ ಜಮಾದಾರ, ಗ್ರಾಮದ ಮುಖಂಡರಾದ ಸಿದ್ದುಗೌಡ ಪಾಟೀಲ, ಅಪ್ಪಾಶ ಜಗದಿ, ಮುತ್ತುಗೌಡ ಪಾಟೀಲ, ಚಿದಾನಂದ ಕೊಳ್ಳಿ, ಶ್ರೀಶೈಲ್ ಚಿನಮಳ್ಳಿ, ಸಿದ್ದು ಜಮಾದಾರ ಮಲ್ಲಾಬಾದ, ಸತೀಶ ಮಾತೋಳಿ, ಅಣ್ಣಾರಾಯ ಹಡಲಗಿ, ಬಾಬುಗೌಡ ಪಾಟೀಲ, ಸಾತಪ್ಪ ಮುಗಳಿ, ರಾಜಕುಮಾರ ಅಡಕಿ, ಗದಗಯ್ಯ ಸ್ವಾಮಿ, ಶಿವಶರಣಪ್ಪ ಪಾಟೀಲ, ರಾಜಕುಮಾರ ಪಾಟೀಲ, ಮಲ್ಲಿಕಾರ್ಜುನ ತಡಲಗಿ, ಕಲ್ಯಾಣಿ ಉದಯಕರ್, ರಮೇಶ್ ದೊಡ್ಡಮನಿ, ಶಿವಶರಣಪ್ಪ ಅಡಕಿ, ರವಿ ಹರಗಿ, ಶಿವಾನಂದ ಚಿನಮಳ್ಳಿ, ನಾಮದೇವ ಸುತಾರ್, ವಿದ್ಯಾಧರ್ ಪಾಟೀಲ, ಶಿವಶಂಕರ ಮದರಿ, ಶಿವಾನಂದ ದೊಡ್ಡಮನಿ, ರಾಜಶೇಖರ ಭಜಂತ್ರಿ ಸೇರಿದಂತೆ ಗ್ರಾಮದ ಹಲವಾರು ಮುಖಂಡರು ಇದ್ದರು.