ಸಾಲೆಬೀರನಹಳ್ಳಿ; ಶಿಕ್ಷಕನಿಗೆ ವಿದ್ಯಾರ್ಥಿಗಳಿಂದ ಆತ್ಮೀಯ ಬೀಳ್ಕೊಡುಗೆ
ಚಿಂಚೋಳಿ:ಸೆ.13: ತಾಲ್ಲೂಕಿನ ಸಾಲೆಬೀರನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಸುಮಾರು 9 ವರ್ಷಗಳಿಂದ ತನ್ನ ಸೇವೆಯನ್ನು ಸಲ್ಲಿಸಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದ ಶಿಕ್ಷಕ ಮುತ್ತಪ್ಪ ಅವರಿಗೆ ವರ್ಗಾವಣೆಯಾದ ನಿಮಿತ್ಯ ಶಾಲೆಯ 2016- 17 ನೇ ಬ್ಯಾಚ್ ನ ವಿದ್ಯಾರ್ಥಿಗಳು ಶಿಕ್ಷಕ ಮುತ್ತಪ್ಪ ಅವರಿಗೆ ಸನ್ಮಾನವನ್ನು ಮಾಡಿ ಶುಭ ಹರಸಿ ಆತ್ಮೀಯವಾಗಿ ಬೀಳ್ಕೊಟ್ಟರು.
ಬಳಿಕ ಶಾಲೆಯ ಹಳೆಯ ವಿದ್ಯಾರ್ಥಿ ಘಮ್ಮು ರಾಠೋಡ ಶಿಕ್ಷಕರ ಸೇವೆಯನ್ನು ಸ್ಮರಿಸಿ ಪ್ರಶಂಸೆಯ ಮಾತುಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಬಸವರಾಜ ಮತ್ತಿ ಸೇರಿದಂತೆ ಶಿಕ್ಷಕರಾದ ಶಶಿಕಾಂತ,ಚಂದ್ರಕಾಂತ ವಾಲಿ,ಮುತ್ತಮ್ಮ,ಜ್ಯೋತಿ ಮತ್ತು ವಿದ್ಯಾರ್ಥಿಗಳಾದ ಪ್ರಕಾಶ,ಗುಂಡಪ್ಪ, ಮಹಾಂತೇಶ,ಗಣಪತಿ,ರಾಮ,ವಿನೋದ್ ಚೌವ್ಹಾಣ,ವಿಷ್ಣುರೆಡ್ಡಿ, ಸಂಧ್ಯಾ ಕುಮಾರಿ,ದಿವ್ಯಾ ಸೇರಿದಂತೆ ಇನ್ನಿತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.