ವಿದ್ಯಾರ್ಥಿಗಳ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಪೂರಕ:ಹಿರೇಮಠ
ತಾಳಿಕೋಟೆ:ಸೆ.13: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಕಲೆ ಎಂಬುದು ಅಡಗಿ ಕುಳಿತ್ತಿರುತ್ತದೆ ಅಂತಹ ಕಲೆಯನ್ನು ಹೊರಗೆ ತೆಗೆದು ವೇದಿಕೆಯ ಮೂಲಕ ಅನಾವರಣಗೊಳಿಸಿ ವಿದ್ಯಾರ್ಥಿಗೆ ಸ್ಪೂರ್ತಿಗೆ ತುಂಬವಂತಹ ಕಾರ್ಯ ಮಾಡಲು ಪ್ರತಿಭಾ ಕಾರಂಜಿ ಪೂರಕವಾಗಿದೆ ಎಂದು ಶಿಕ್ಷಣ ಸಂಯೋಜಕ ಎಸ್.ಎಸ್.ಹಿರೇಮಠ ಅವರು ಹೇಳಿದರು.
ಗುರುವಾರರಂದು ಪಟ್ಟಣದ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಸಮೂಹ ಸಂಪನ್ಮೂಲ ಕೇಂದ್ರ ಹಾಗೂ ಶ್ರೀ ಸಂಗಮೇಶ್ವರ ಪ್ರೌಢಶಾಲೆ ತಾಳಿಕೋಟಿ ಇವರ ಸಹಯೋಗದಲ್ಲಿ ಏರ್ಪಡಿಸಲಾದ 2024-25ನೇ ಸಾಲಿನ ತಾಳಿಕೋಟಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಎಲ್ಲ ಮಕ್ಕಳಲ್ಲಿ ಇರುವಂತಹ ಪ್ರತಿಭೆಗಳನ್ನು ಅನಾವರಣ ಗೊಳಿಸಲು ಅತ್ಯಂತ ಮುಖ್ಯ ವೇದಿಕೆ ಇದಾಗಿದೆ ಇಂತಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವದರಿಂದ ಪ್ರತಿ ಕಾರ್ಯದಲ್ಲಿ ಉತ್ಸುಕತೆ ಎಂಬುದು ಹೆಚ್ಚುತ್ತದೆ ಕಲೆ ಎಂಬುದು ಜ್ಞಾನ ಮೂಡಿಸುವಂತಹದ್ದಾಗಿದೆ ಆ ಜ್ಞಾನದ ಫಲಿತಾಂಶ ಮಕ್ಕಳಿಗೆ ಸಿಗಲಿದೆ ಈ ಭಾಗದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ ಅವರಿಗೆ ವೇದಿಕೆಗಳನ್ನು ಒದಗಿಸುವ ಕಾರ್ಯ ಶಿಕ್ಷಣ ಇಲಾಖೆ ಮಾಡುತ್ತಾ ಬಂದಿದೆ ಪ್ರತಿಭಾ ಕಾರಂಜಿಯಲ್ಲಿ ನಾಟಕ, ಚಲನಚಿತ್ರ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಇವುಗಳು ಅಷ್ಟೇ ಅಲ್ಲದೇ ಪ್ರಭಂದ, ಗೀತೆ ರಚನೆ ಮುಂತಾದವುಗಳು ಒಳಗೊಂಡಿದೆ ಎಂದು ಹೇಳಿದ ಅವರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಯಶಸ್ವಿಗೆ ಎಲ್ಲ ಶಾಲೆಯ ಮಕ್ಕಳು ಭಾಗವಹಿಸಿ ತಮ್ಮ ಕಲೆಯನ್ನು ಪ್ರದರ್ಶಿಸಲು ಹಾತೋರೆಯುತ್ತಿರುವದು ಸಂತಸ ಮೂಡಿಸಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್.ಎಸ್.ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಕಿರಣ ಎಚ್ ಪಾಟೀಲ ಅವರು ಮಾತನಾಡಿ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ಹೆಚ್ಚಿಸುವಂತಹ ಕಾರ್ಯ ಮಾಡುವ ಈ ಕಾರ್ಯಕ್ರಮ ಪ್ರತಿಭಾ ಕಾರಂಜಿ ಕಲೋತ್ಸವದ್ದಾಗಿದೆ ಮಕ್ಕಳ ಪ್ರತಿಭೆ ಕೇವಲ ನಮ್ಮ ಊರಿನಲ್ಲಿ ಅಷ್ಟೇ ಉಳಿದುಕೊಳ್ಳದೇ ಜಿಲ್ಲೆ ರಾಜ್ಯಮಟ್ಟ, ರಾಷ್ಟ್ರಮಟ್ಟದಲ್ಲಿ ಪ್ರದರ್ಶಿಸಿ ಪ್ರತಿಭೆಗಳನ್ನು ಗುರುತಿಸುವಂತಹ ಉತ್ತಮ ವೇದಿಕೆ ಇದಾಗಿದೆ ಇದರ ಪ್ರಯೋಜನೆಯನ್ನು ಎಲ್ಲ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.
ಇನ್ನೋರ್ವ ಅತಿಥಿ ಸುರೇಶ ಬೀರಗೊಂಡ ಅವರು ಮಾತನಾಡಿ ಮಕ್ಕಳಿಗಾಗಿ ವೇದಿಕೆ ಸಿದ್ದಪಡಿಸಲಾಗಿದೆ ಅಂಜಿಕೆಯಿಲ್ಲದೆ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ, ಪ್ರತಿಭೆಯನ್ನು ಹೊರ ಹಾಕುವಂತಹ ಕಾರ್ಯ ಮಾಡಿರಿ ನಿರ್ಣಾಯಕರು ನೀಡಿದ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೇಕು ಎಂದು ಹೇಳಿದರು.
ಇದೇ ಸಮಯದಲ್ಲಿ ವಿವಿದ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕರುಗಳಿಗೆ ಸನ್ಮಾನಿಸಲಾಯಿತು.
ವೇದಿಕೆಯ ಮೇಲೆ ಶಿಕ್ಷಣ ಸಂಯೋಜಕ ಎಮ್. ಕೆ.ಬಾಗವಾನ, ಎಸ್.ಎಸ್.ಹಾದಿಮನಿ, ಎಪಿಎಪ್.ಸಂಚಾಲಕ ಎಲ್.ಸಿ.ಬಾಗೇವಾಡಿ, ಸಿಆರ್‍ಸಿ ಸಂಗಮೇಶ ಪಾಲ್ಕಿ, ಸಿಆರ್‍ಸಿ ಕಾಶೀನಾಥ ಸಜ್ಜನ, ಬಿಆರ್‍ಪಿ ಡಾ.ಅನಿಲ ಇರಾಜ, ಸುರೇಶ ವಾಲೀಕಾರ, ಡಾ, ಎಚ್.ಬಿ.ನಡುವಿನಕೇರಿ, ಪ್ರೇಮನಗೌಡ ಪಾಟೀಲ, ಮಲ್ಲೇದ ಸರ್, ಯಂಕಂಚಿ, ಪ್ರೌಢಶಾಲೆ ನಿರ್ಣಾಯಕರಾಗಿ ಎಸ್.ಬಿ.ಸಜ್ಜನ, ಸಿ.ಎಸ್.ಯರಗಲ್ಲ, ವಿವಿಧ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
ತಾಳಿಕೋಟೆ ಕ್ಲಸ್ಟರಿನ 13 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು.
ಸರ್ವಜ್ಞ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಎಸ್.ವಿ.ಜಾಮಗೊಂಡಿ ಸ್ವಾಗತಿಸಿದರು. ಶಿಕ್ಷಕ ಬಿ.ಆಯ್.ಹಿರೇಹೊಳಿ, ಎಸ್.ಸಿ.ಗುಡಗುಂಟಿ ನಿರೂಸಿದರು.