ಬಿ.ವಿ.ಭೂಮರಡ್ಡಿ ಮಹಾವಿದ್ಯಾಲಯದಲ್ಲಿ ಗಣೇಶೋತ್ಸವ
ಬೀದರ :ಸೆ.13: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಪ್ರತಿ ವರ್ಷದಂತೆ, ಈ ವರ್ಷವು ಕೂಡ ಪರಿಸರ ಸ್ನೆಹಿ ಜೇಡಿ ಮಣ್ಣಿನ ಗಣಪತಿ ಪ್ರತಿಷ್ಠಾಪಿಸಿ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಪೂಜೆ ಸಲ್ಲಿಸಿದರು ಅಲ್ಲದೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಗಣಪನ ಹಾಗೆ ಚಾಣಾಕ್ಷರಾಗಿ ಓದಿನಲ್ಲಿ ಮುಂದೆ ಬಂದು ಸತತ ಪ್ರಯತ್ನಪಟ್ಟು ಒಂದು ವೇಳೆ 15-20 ವರ್ಷ ಕಷ್ಟಪಟ್ಟರೆ ಮುಂದೆ 60-70 ವರ್ಷ ಸುಖವಾಗಿ ಬಾಳಬಹುದು, ಈಗೀನ ಜನಾಂಗ ಅಂದರೆ ವಿಶೇಷವಾಗಿ ನವಯುವಕರು ತಮ್ಮ ಜೀವನದ ಘಟ್ಟ ಮರೆತು ಬೇರೆ ಬೇರೆ ದುಷ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಅದನ್ನು ಬಿಟ್ಟು ದೇಶ ಕಟ್ಟುವ ಕೆಲಸ ಮಾಡಿ ಯಾವುದೇ ಜಾತಿ, ಧರ್ಮ, ಜನಾಂಗ ಎನ್ನದೆ ಆಗೀನ ಸ್ವತಂತ್ರ್ಯ ಸೇನಾನಿಯರಾದ ಬಾಲಗಂಗಾಧರ ತಿಲಕರು ನೀಡಿದ ಕರೆಗೆ ಓಗೋಟ್ಟು ಸ್ವತಂತ್ರ್ಯ ಸಂಗ್ರಾಮದಲ್ಲಿ ಗಣೇಶನ ಪೂಜೆ ನಿಮಿತ್ಯವಿಟ್ಟುಕೊಂಡು ಎಲ್ಲರನ್ನೂ ಒಗ್ಗೂಡಿಸಿ ಒಮ್ಮತದಿಂದ ಹೋರಾಡಿ ದೇಶವನ್ನು ಸ್ವತಂತ್ರ್ಯಗೋಳಿಸಿದರು. ಇನ್ನೂ ಕಾಲ ಮಿಂಚಿಲ್ಲ ಗುರು-ಹಿರಿಯರನ್ನು ಸತ್ತಕರಿಸಿ ಪ್ರೀತಿಯಿಂದ ಮನೆಯಲ್ಲಿ ಅಜ್ಜ-ಅಜ್ಜಿಯರಿಂದ ಪ್ರೇರಣೆ ಪಡೆದು ಜೀವನದಲ್ಲಿ ಯಶ್ವಸಿಯಾಗಿರೆಂದು ಹಾರೈಸಿದರು.
ಈ ಹಬ್ಬದ ವಿಶೇಷತೆಯೆಂದರೆ ಬಿ.ವಿ.ಭೂಮರಡ್ಡಿ ಮಹಾವಿದ್ಯಾಲಯ ಆವರಣದಲ್ಲಿರು ನ್ಯಾಷನಲ್ ಇಂಗ್ಲೀಷ ಮಾಧ್ಯಮ ಪಬ್ಲಿಕ್ ಶಾಲೆಯ ಆರ್ಟ & ಕ್ರಾಫ್ಟ್ ಶಿಕ್ಷಕೀಯಾದ ಶ್ರೀಮತಿ ದಿವ್ಯಾ ಮಠದ ಅವರು ಸ್ವಂತ ತಮ್ಮ ಕೈಯಿಂದ ಜೇಡಿ ಮಣ್ಣಿನ ಗಣಪ ತೈಯಾರಿಸಿ ನೀಡಿದರು. ಅಲ್ಲದೇ ಭೌತಶಾಸ್ತ್ರ ವಿಷಯದ ಪ್ರಾಧ್ಯಾಪಕರಾದ ಶ್ರೀ ಪ್ರವೀಣಕುಮಾರ ಪುರೋಹಿತ ಪ್ರತಿದಿನ 11.00 ಗಂಟೆಗೆ ಗಣೇಶನ ಪೂಜೆಗೆ ಸಹಾಯ ಮಾಡಿದರು. ಈ ಇರ್ವರನ್ನು ಪ್ರಾಂಶುಪಾಲರು ಗಣೇಶ ವಿರ್ಸಜನೆಯ ದಿನದಂದು ಶಾಲು ಹೊದಿಸಿ ಸನ್ಮಾನಿಸಿ ಪ್ರೋತ್ಸಾಹಿಸಿದರು. ವಿಶೇಷಯೆಂದರೆ ಮಹಾವಿದ್ಯಾಲಯದ ಔಷಧಿ ಉದ್ಯಾನ ವನ (ಫರ್ನರಿ)ಯಲ್ಲಿ ನೆಲ್ಲಿಯ ಸಸಿಯ ಹೊಂಡದಲ್ಲಿ ಪರಿಸರ ಸ್ನೇಹಿಯಾಗಿ ಗಣೇಶನನ್ನು ವಿರ್ಸಜನೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆ, ಡಾ. ದೀಪಾ ರಾಗ, ಶ್ರೀ ಬಸವರಾಜ ಬಿರಾದಾರ, ಶ್ರೀ ಸುಜೀತಕುಮಾರ, ಶ್ರೀ ಸಚೀನ ಶೆಟಕಾರ, ಶ್ರೀ ಮಹೇಶ ಪಾಟೀಲ್, ಕು. ಚಿಕಾಲಿ ಸೋನಮ್ಮ ಅಲ್ಲದೇ ಮಹಾವಿದ್ಯಾಲಯದ ವಿದ್ಯಾರ್ಥಿಗಳು, (ಎನ್.ಸಿ.ಸಿ., ಎನ್.ಎಸ್.ಎಸ್.), ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಯವರು ಹಾಜರಿದ್ದರೆಂದು ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ ಕೋಟೆ ತಿಳಿಸಿದರು.