ಸಮಗ್ರ ವೀರಾಗ್ರಣಿ ಪ್ರಶಸ್ತಿ
ಮುನವಳ್ಳಿ, ಸೆ13: ಪಟ್ಟಣದ ಡಾ. ಜಿ.ವ್ಹಿ ನಾಯಿಕ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಜರುಗಿದ ಸವದತ್ತಿ ತಾಲೂಕ ಮಟ್ಟದ ಪದವಿ ಪೂರ್ವ ಮಹಾವಿದ್ಯಾಲಯದ ಕ್ರೀಡಾಕೂಟದಲ್ಲಿ ಅನ್ನದಾನೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗಯಾಗಿ ಸಮಗ್ರ ವಿರಾಗ್ರಣಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಖೋ ಖೋ ಪ್ರಥಮ, ಕಬಡ್ಡಿ ಪ್ರಥಮ, ಥ್ರೋ ಬಾಲ್ ಪ್ರಥಮ, ಗುಂಡು ಎಸೆತ ಪ್ರಥಮ ಹಾಗೂ ದ್ವಿತೀಯ, ಜಾವೇಲಿನ ಪ್ರಥಮ, 3000 ಮೀ ಓಟ ಪ್ರಥಮ, ಗುಡ್ಡುಗಾಡು ಓಟ ಪ್ರಥಮ, 800 ಮೀ. ದ್ವಿತೀಯ, 1500 ಮೀ ದ್ವಿತೀಯ ತ್ರಿವಿಧ ಜಿಗಿತ ಪ್ರಥಮ, ಎತ್ತರ ಜಿಗಿತ ಪ್ರಥಮ, 400ಮೀ ರಿಲೇ ಪ್ರಥಮ, ಯೋಗ ಟೆನ್ನಿಕ್ವಾಯಿಟ್ ಪ್ರಥಮ, ಜಂಪ ರೋಪ್ ಪ್ರಥಮ.
ಬಾಲಕರ ವಿಭಾಗದಲ್ಲಿ ಕಬಡ್ಡಿ ಪ್ರಥಮ, ವಾಲಿಬಾಲ್ ಪ್ರಥಮ, 200 ಮೀ ಓಟ ಪ್ರಥಮ, ಜಾವೇಲಿನ ದ್ವಿತೀಯ, 3000ಮೀ ನಡಿಗೆ ಪ್ರಥಮ, ಎತ್ತರ ಜಿಗಿತ ಪ್ರಥಮ, 800 ಮೀ ದ್ವಿತೀಯ, ಚೆಸ್,ಟೆನ್ನಿಕ್ವಾಯಿಟ್ ಪ್ರಥಮ ಜಂಪ ರೋಫ್ ಪ್ರಥಮ ಎಲ್ಲ ಆಟಗಳಲ್ಲಿ ಭಾಗವಹಿಸಿ ವಿಧ್ಯಾರ್ಥಿಗಳು ಸಮಗ್ರ ವಿರಾಗ್ರಹಣಿ ಪ್ರಶಸ್ತಿ ವಿಜತರಿಗೆ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರು ಶ್ರೀ ಮುರುಘೇಂದ್ರ ಶ್ರೀಗಳು ಹಾಗೂ ನಿರ್ದೇಶಕ ಮಂಡಳಿ, ಪ್ರಾಚಾರ್ಯರು ಹರ್ಷ ವ್ಯಕ್ತ ಪಡಿಸಿದ್ದಾರೆ.