ಶಿವಲಿಂಗದ ಮೇಲೆ ಪಾದ ಇರಿಸಿದ್ದಕ್ಕೆ ಬಾವಗಿ ಭದ್ರೆಶ್ವರ ಮಠದ ಶಿವುಕುಮಾರ ಸ್ವಾಮೀಜಿ ಆಕ್ರೋಶ
ಬೀದರ್ :ಸೆ.13:ಸಂಪ್ರದಾಯ ಎಂದು ಶಿವಲಿಂಗದ ಮೇಲೆ ಪಾದ ಇಡಬಾರದು. ಲಿಂಗದ ಮೇಲೆ ಪಾದ ಪೂಜೆ ಮಾಡಿದ ಘಟನೆಯಿಂದ ಶಿವಭಕ್ತರ ಭಾವನೆಗೆ ಧಕ್ಕೆಯಾಗಿದೆ’ ಎಂದು ಭದ್ರೆಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮೀಜಿ ಹೇಳಿದರು.
ಹಿರೇಮಠದ ಸಿದ್ಧವೀರ ಶಿವಾಚಾರ್ಯರು ಶಿವಲಿಂಗದ ಮೇಲೆ ಪಾದ ಇರಿಸಿ ಪೂಜೆ ಮಾಡಿಸಿಕೊಂಡಿರುವ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದರು.
ತಪ್ಪು ಯಾರೇ ಮಾಡಲಿ ಅದು ತಪ್ಪೆ. ಶಿವಲಿಂಗ ಪರಮಾತ್ಮನ ಸ್ವರೂಪ. ಪ್ರತಿಷ್ಠಾಪನೆಗೆ ಮುಂಚೆ ಶಿವಲಿಂಗದ ಶುದ್ಧೀಕರಣ ಹಸ್ತಗಳಿಂದ ಮಾಡಬೇಕೆ ಹೊರತು ಪಾದಗಳಿಂದಲ್ಲ. ಶಿವಭಕ್ತರಿಗೆ ನೋವಾಗುವ ರೀತಿಯಲ್ಲಿ ನಡೆದುಕೊಂಡಿದ್ದು ಅಹಂಕಾರದ ಪ್ರತೀಕ ಎಂದವರು ಹೇಳಿದ್ದಾರೆ.
ಶಿವಲಿಂಗದ ಮೇಲೆ ಪಾದ ಇಟ್ಟು ಪೂಜೆ ಮಾಡಿಸಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ಶಿವಭಕ್ತರು ಬಹಳ ಕೋಪ ವ್ಯಕ್ತ ಪಡಿಸುತ್ತಿದ್ದಾರೆ ಹೇಳುವವರು ಯಾರೂ ಇಲ್ಲವೇ ಎಂದು ಭದ್ರೆಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.