17ರಂದು ಸದ್ಗುರುಜಿಯವರ 23 ನೇ ಪಾದಯಾತ್ರೆ : ವಿವಿಧ ರಾಜ್ಯದಿಂದ ಭಕ್ತರು ಭಾಗಿ
ಬೀದರ್: ಸೆ.13:ಪೂಜ್ಯ ಮಂತ್ರ ಮಹರ್ಷಿ ಡಾ. ಸದ್ಗುರುಜಿ 23ನೇ ಪಾದಯಾತ್ರೆ ಇದೇ ದಿನಾಂಕ 17- 9 -2024 ರಂದು ಸಿರ್ಸಿ ಔರಾದ (ಎಸ್) ದಿಂದ ಅಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿ ಸುಕ್ಷೇತ್ರ ರೇಕುಳ್ಗಿಯ ಶ್ರೀ ಶಂಬುಲಿಂಗೇಶ್ವರ ಆಶ್ರಮದವರೆಗೆ ನಡೆಯಲಿದೆ.
ಈ ಪಾದಯಾತ್ರೆಯಲ್ಲಿ ಸ್ಥಳೀಯ ಅಪಾರ ಭಕ್ತ ಸಮೂಹ ಮತ್ತು ರಾಜ್ಯದ ವಿವಿಧ ಮಠಾಧೀಶರು ಪೂಜ್ಯರು ವಿದ್ವಾಂಸರು ಪಾಲ್ಗೊಳ್ಳುತ್ತಿರುವುದು ಮತ್ತು ದೇಶದ ಸುಮಾರು 15 ರಾಜ್ಯಗಳಿಂದ ಸದ್ಗುರುಜಿಯವರ ಪರಮ ಭಕ್ತರು ಅಧಿಕಾರಿಗಳು ,ಉದ್ಯಮಿಗಳು, ಆಗಮಿಸಿ ಶಂಭುಲಿಂಗ ಮತ್ತು ಬಸಮತಾಯಿ ಸದ್ಗುರುಜಿಯವರ ಆಶೀರ್ವಾದ ಪಡೆದು ಪುನೀತರಾಗುತ್ತಿರುವುದು ವಿಶೇಷ.
ಪರಮಪೂಜ್ಯರು ನಾಡಿನಾದ್ಯಂತ ದೇಶದಾದ್ಯಂತ ಸುತ್ತಾಡಿ ಲೋಕಕಲ್ಯಾಣಕ್ಕಾಗಿ ಮತ್ತು ಸನಾತನ ಧರ್ಮದ ರಕ್ಷಣೆಗಾಗಿ ಪವಾಡಗಳನ್ನು ಮಾಡುತ್ತ ಶ್ರಮಿಸುತ್ತಿರುವರು.
ಈ ಪ್ರಯುಕ್ತ ನಾಡಿನದ್ಯಂತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಬೇಕೆಂದು ಡಾ. ವಿಶ್ವನಾಥ ತೆಗಂಪುರೆ, ಧಮೇರ್ಂದ್ರ ಪೂಜಾರಿ, ಪಾದಯಾತ್ರೆ ಉತ್ಸವ ಸಮಿತಿ ಸದಸ್ಯರಾದ ಸಂಗಪ್ಪ ಪಾಟೀಲ್, ವೈಜಿನಾಥ ಹಚ್ಚಿ , ಜಗನ್ನಾಥ ಸಿದ್ದ, ಶ್ರೀ ರವಿ ನಾಗಿನ್ ಕೆರೆ, ವೀರಶೆಟ್ಟಿ ಪಾಟೀಲ್, ಸಂಗಾರೆಡ್ಡಿ, ರವಿ ರೆಡ್ಡಿ, ಸೂರ್ಯಕಾಂತ ಯದ್ಲಾಪುರ, ಸಂಗಮೇಶ ಡಿಕೆ ಮತ್ತು ಇನ್ನಿತರು .ಜಂಟಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.