ಮಾನವ ಸರಪಳಿ ರಚಿಸಲು 18 ಸಾವಿರ ಜನ
ಲಕ್ಷ್ಮೇಶ್ವರ, ಸೆ13: ಸೆಪ್ಟಂಬರ್ 15ರಂದು ರವಿವಾರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಗೆ ಅಂಗವಾಗಿ ಹಾವೇರಿ ಜಿಲ್ಲೆ ಸಂಪರ್ಕಿಸುವ ಹಾಲಗಿ -ಮರುಳ ಗಡಿಯಿಂದ ಮಾನವ ಸರಪಳಿ ರಚಿಸಲು 18000 ಜನರು ಸ್ವಯಂ ಪ್ರೇರಣೆಯಿಂದ ಭಾಗವಹಿಸಲು ಸಿದ್ಧರಾಗಿದ್ದಾರೆ ಎಂದು ತಹಶೀಲ್ದಾರ್ ವಾಸುದೇವ ವಿ ಸ್ವಾಮಿ ಅವರು ತಿಳಿಸಿದರು.
ಅಂತಿಮ ರೂಪರೇಷೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ರವಿವಾರ ಮುಂಜಾನೆ 9 ಘಂಟೆಗೆ ಮಾನವ ಸರಪಳಿ ರಚಿಸುವ ಮೂಲಕ ಪ್ರಜಾಪ್ರಭುತ್ವದ ಮಹತ್ವವನ್ನು ಮೌಲ್ಯವನ್ನು ಎತ್ತಿ ಹಿಡಿದು ಭಾರತ ಅತ್ಯಂತ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರ ಎಂಬುವುದನ್ನು ಸಾಬೀತುಪಡಿಸಲು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಸೂರಣಗಿ ನೆಲುಗಲ್ಲ ಚಿಕ್ಕ ಸವಣೂರುವರೆಗೆ 18 ಕಿಲೋಮೀಟರ್ ಮಾನವ ಸರಪಳಿ ನಿರ್ಮಿಸಲು 18ರಿಂದ 20 ಸಾವಿರ ಜನ ಸೇರಲಿದ್ದಾರೆ ಎಂದರು,
ಈಗಾಗಲೇ ಎಲ್ಲ ಸಂಘ ಸಂಸ್ಥೆಗಳು ಕನ್ನಡ ಪರ ಸಂಘಟನೆಗಳು ಯುವಕ ಮಂಡಳಗಳು ಗ್ರಾಮ ಪಂಚಾಯಿತಿಗಳು ಸ್ಥಳೀಯ ಸಂಸ್ಥೆಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳು ಸರ್ಕಾರಿ ತರ ಸಂಸ್ಥೆಗಳು ನ್ಯಾಯಬೆಲೆ ಅಂಗಡಿಯವರು ಸೇರಿದಂತೆ ಜನಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.
ಹಾವೇರಿ ಜಿಲ್ಲೆಯ ಗಡಿಯಲ್ಲಿ ಮಾನವ ಸರಪಳಿ ರಚನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳು ಪೆÇಲೀಸ್ ವರಿಷ್ಠಾಧಿಕಾರಿಗಳು ಸಿಇಓ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಸಭೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳು ಶಿಕ್ಷಣ ಇಲಾಖೆ ಅಧಿಕಾರಿಗಳು ಸಾರಿಗೆ ಸಂಸ್ಥೆಗೆ ಘಟಕ ವ್ಯವಸ್ಥಾಪಕರು ಶಾಲಾ ಕಾಲೇಜುಗಳ ಮುಖ್ಯಸ್ಥರು ಸೇರಿದಂತೆ ಲಕ್ಷ್ಮೇಶ್ವರ್ ಪೆÇಲೀಸ್ ಠಾಣೆಗೆ ಪಿಎಸ್‍ಐ ಈರಣ್ಣ ರಿತ್ತಿ ಉಪ ತಹಶೀಲ್ದಾರ್ರಾದ ಕಿಮಾಯಿ ಮತ್ತು ಮನಿಯಾರ ಈಶ್ವರ್ ಮೆಡ್ಲೇರಿ ಸೇರಿದಂತೆ ಅನೇಕರಿದ್ದರು.