ಫೋಟೋಗ್ರಾಫರ್ಸ್ ಗೆ ಸ್ಮಾರ್ಟ್ ಕಾರ್ಡ್ ವಿತರಣೆ; ಸಂಘದಿಂದ ಸ್ವಾಗತ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧೩: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಜಾರಿಗೊಳಿಸುತ್ತಿರುವ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಸುಮಾರು 23 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಅಪಘಾತ ಪರಿಹಾರ ಮತ್ತು ಸಹಜ ಮರಣ ಪರಿಹಾರ ಸೌಲಭ್ಯಗಳನ್ನು ಪಡೆಯಲು ಸಹಕಾರ ನೀಡಿದ್ದು, ಈ ಯೋಜನೆಗೆ ಫೋಟೋಗ್ರಾಫರ್ಸ್ ಗಳನ್ನು ಸೇರ್ಪಡೆ ಮಾಡಿರುವುದು ಸಂತಸ ವಿಷಯ ಎಂದು ತಾಲ್ಲೂಕು ಫೋಟೋ ಮತ್ತು ವೀಡಿಯೋಗ್ರಾರ‍್ಸ್ ಸಂಘದ ಗೌರವಾಧ್ಯಕ್ಷ ಬಿ. ಮಂಜುನಾಥ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸರ್ಕಾರದಿಂದ ಛಾಯಾಗ್ರಾಹಕರಿಗೆ ಅತಿ ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದು ಕಾರ್ಮಿಕ ಅಧಿಕಾರಿಗಳು ಹೇಳಿದ್ದಾರೆ. ಮುಖ್ಯಮಂತ್ರಿ  ಸಿದ್ದರಾಮಯ್ಯನವರಿಗೆ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಜಿಲ್ಲಾ ಉಸ್ತುವಾರಿರಾದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ, ದಾವಣಗೆರೆ ಜಿಲ್ಲೆಯ ಕಾರ್ಮಿಕ ಅಧಿಕಾರಿಗಳಿಗೆ ಸಂಘದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.ಫೋಟೋಗ್ರಾಫರ್ ಗಳು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ಕೂಡಲೇ ರಾಜ್ಯ ಸರ್ಕಾರ ಫೋಟೋಗ್ರಾಫರ್ಸ್  ಸೇವಾ ಕಾರ್ಯವನ್ನು ಗುರುತಿಸಿ ಶೀಘ್ರವೇ ಫೋಟೋಗ್ರಾಫರ್ಸ್ ಅಕಾಡೆಮಿ ಸ್ಥಾಪಿಸಬೇಕು. ಅವರ ಕುಟುಂಬಕ್ಕೆ ನೆರವಾಗುವಂತೆ ಸವಲತ್ತುಗಳನ್ನು ನೀಡಬೇಕು. ಅವರ ಮಕ್ಕಳ ಶಿಕ್ಷಣಕ್ಕೆ, ಉದ್ಯೋಗಕ್ಕೆ ಅವಕಾಶ ಕಲ್ಪಿಸಿಕೊಡಬೇಕು. ಆಶ್ರಯ ಮನೆ ಅಥವಾ ನಿವೇಶನ ಛಾಯಾಗ್ರಾಹಕರ ಕಾಲೋನಿ ನಿರ್ಮಾಣ ಮಾಡ ಬೇಕೆಂದು ಸಂಘದ ಅಧ್ಯಕ್ಷ ಎಂ. ಮನು ಆಗ್ರಹಿಸಿದರು.ಹೆಚ್ಚಿನ ಮಾಹಿತಿಗೆ ಸಂಘದ ಕಚೇರಿ- ಮನು ಫೋಟೋಗ್ರಫಿ ಇವೆಂಟ್ಸ್ 2ನೇ ಕ್ರಾಸ್ 2 ನೇ ಮೇನ್ ವಿನೋಬನಗರ ದಾವಣಗೆರೆ ಅಧ್ಯಕ್ಷರು ಎಂ. ಮನು 9448339151 ಗೌರವಾಧ್ಯಕ್ಷರು ಬಿ. ಮಂಜುನಾಥ್ 9844145007 ಪ್ರಧಾನ ಕಾರ್ಯದರ್ಶಿ ಕೆ ದೇವೇಂದ್ರಪ್ಪ 9845328250 ಕಚೇರಿಗೆ ಮೂಲ ದಾಖಲಾತಿಗಳು ಹಾಗೂ ಆಧಾರ್ ಕಾರ್ಡ್ ಇತ್ತೀಚಿನ 2 ಭಾವಚಿತ್ರ ಮತ್ತು ಫೋಟೋಗ್ರಾಫರ್ ಸಂಘದ ಗುರುತಿನ ಚೀಟಿ  ಐಡಿ ಕಾರ್ಡ್ ತಂದು ಮೂರು ದಿನಗಳ ಒಳಗೆ ನೊಂದಾಯಿಸಲು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ. ದೇವೇಂದ್ರಪ್ಪ, ಗ್ರಾಮಾಂತರ ವಲಯ ಅಧ್ಯಕ್ಷ ಕೊಂಡಜ್ಜಿ ಎಸ್. ರಾಜಶೇಖರ್, ಉಪಾಧ್ಯಕ್ಷ ಡಿ. ರಮೇಶ್, ಖಜಾಂಚಿ ಡಿ. ರಂಗನಾಥ್ ಉಪಸ್ಥಿತರಿದ್ದರು.