ರಾಹುಲ್ ಗಾಂಧಿ ಹೇಳಿಕೆಗೆ ಖಂಡನೆ; ಬಿಜೆಪಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ. ಸೆ.೧೩: ಲೋಕಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ನ‌ ಯುವ ನಾಯಕ ರಾಹುಲ್ ಗಾಂಧಿಯವರು  ಮಿಸಲಾತಿ ಕುರಿತು ವಿವಾದಾತ್ಮಕ  ಹೇಳಿಕೆ ನೀಡಿರುವ  ಹಿನ್ನಲೆಯಲ್ಲಿ ದೇಶದ ಜನರಲ್ಲಿ ಕ್ಷಮೆ ಯಾಚನೆ ಮಾಡಬೇಕು ಎಂದು ಒತ್ತಾಯಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಶುಕ್ರವಾರ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ‌ ನಡೆಸಿದರು. ಪ್ರತಿಭಟನೆಯಲ್ಲಿ ಗೀರೀಶ್, ನವೀನ್, ಶ್ರೀನಿವಾಸ್, ಸುರೇಶ್, ಶಿವಣ್ಣಚಾರ್, ಸೌಭಾಗ್ಯ ಬಸವರಾಜನ್, ಭಾರ್ಗವಿ ದ್ರಾವಿಡ್, ಶ್ಯಾಮಲ ಶಿವಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು.