ಕಟ್ಟಡ ಸಾಮಾಗ್ರಿಗಳ “ನಿರ್ಮಾಣ2024” ಆರಂಭಕಡಿಮೆ ವೆಚ್ಚದ ಮನೆಗಳ ನಿರ್ಮಾಣಕ್ಕೆ ಡಿಸಿ ಕರೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.13:  ಸರ್.ಎಂ.ವಿಶೇಶ್ವರಯ್ಯನವರ 164 ನೇ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಬಳ್ಳಾರಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್‌  ಇಂದಿನಿಂದ  ಮೂರು ದಿನಗಳ ಕಾಲ  ಕಮ್ಮ ಭವನದಲ್ಲಿ ಹಮ್ಮಿಕೊಂಡಿರುವ  ನಿರ್ಮಾಣ ೨೦೨೪ ಪ್ರದರ್ಶನ ಹಾಗೂ ಮಾರಾಟ ಮೇಳ ಆರಂಭಗೊಂಡಿದೆ.
ಜನರಿಗೆ ಕಟ್ಟಡಗಳ ಹೊಸ ಬಗೆಯ ಸಾಮಾಗ್ರಿಗಳ ಪರಿಚಯ ಮತ್ತು ತಂತ್ರಜ್ಞಾನದ ಬಗ್ಗೆ ತಿಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಪ್ರದರ್ಶನವನ್ನು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು ಕಟ್ಟಡದ ಹೊಸ ಸಾಮಾಗ್ರಿ, ತಂತ್ರಜ್ಞಾನದ ಬಗ್ಗೆ ತಿಳಿಸುವ ಈ ಒ್ರದರ್ಶನ ಸಾರ್ವಜನಿಕರಿಗೆ ಸಹಕಾರಿಯಾಗಿದೆ. ಅಸೋಸಿಯೇಷನ್ ಬಡ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಕಡಿಮೆ ಮೆಚ್ಚದ ಮನೆಗಳ ನಿರ್ಮಾಣಕ್ಕೆ ಮುಂದಾಗಿ ಜಿಲ್ಲಾಡಳಿತವೂ ಅದಕ್ಕೆ ಸಹಕಾರ ನೀಡಲಿದೆಂದರು.
ಜಿಪಂ ಸಿಈಓ ರಾಹುಲ್ ಶರಣಪ್ಪ ಸಂಕನೂರ್ ಮಾತನಾಡಿ,  ಈ ಜಿಲ್ಲೆಯಲ್ಲಿ ದ್ವಿತೀಯ ಪಿಯುನಲ್ಲಿ ವಿಜ್ಞಾನ ಅಭ್ಯಾಸ ಮಾಡುವುದು ಕಡಿಮೆ ಇದೆ. ಉತ್ತಮ ಇಂಜಿನೀಯರ್ ಗಳಾಗಲು ವಿಜ್ಞಾನದ ಅಭ್ಯಸ ಬೇಕು. ಉತ್ತಮ ತಂತ್ರಜ್ಞಾನದೊಂದಿಗೆ ಕಟ್ಟಡಗಳ ನಿರ್ಮಾಣ ನಿಮ್ಮಿಂದ ಆಗಲಿ ಎಂದರು. ಅಸೋಸಿಯೇಷನ್ ಅಧ್ಯಕ್ಷ ಹೊಸೂರ್ ಈಶ್ವರಗೌಡ ಅಧ್ಯಕ್ಷತೆ ವಹಿಸಿದ್ದರು.
ಅಸೋಸಿಯೇಷನ್ ಮಾಜಿ ಅಧ್ಯಕ್ಷ  ಸಂಜೀವ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಅಸೋಸಿಯೇಷನ್ ಬೆಳೆದು ಬಂದುದನ್ನು ತಿಳಸುತ್ತ. 1996 ರಿಂದ ಆರಂಭಗೊಂಡು ಈಗ ಬೃಹತ್ ಅಸೋಸಿಯೇಷನ್ ಆಗಿದೆಂದರು.
ಸಮಾರಂಭದಲ್ಲಿ ಚೇಂಬರ್ ಆಫ್ ಕಾಮರ್ಸ್ ನ‌ಮಾಜಿ ಅಧ್ಯಕ್ಷ  ಡಾ. ಡಿ.ಎಲ್. ರಮೇಶ್ ಗೋಪಾಲ್,  ಅಸೋಸಿಯೇಷನ್  ಕಾರ್ಯದರ್ಶಿ ಪಿ.ಪ್ರಕಾಶ್, ಜಂಟಿ ಕಾರ್ಯದರ್ಶಿ ರಾಜೀವ್ ಮತ್ತು ಟಿ.ಆರ್.ರಾಕೇಶ್ ಭಾಗಿಯಾಗಿದ್ದರು.
ಜಗದೀಶ್ ಪಾರ್ಥನೆ,  ಅಗಡಿ ಮಂಜೇಶ್ ಸಾಗತಿಸಿದರು.
ಪ್ರದರ್ಶನ:
ಪ್ರದರ್ಶನದಲ್ಲಿ 60 ಸ್ಟಾಲ್ ಗಳಲ್ಲಿ  ವಿನೂತನ ಬಗೆಯ ಕಟ್ಟಡ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ನಗರದಲ್ಲಿ ಮನೆ ಕಟ್ಟುವ ಜನರಿಗೆ ಇದು ಅನುಕೂಲಕಾರಿಯಾಗಿದೆ. ಗ್ರಾಹಕರಿಗೆ ಮತ್ತು ಕಂಪನಿಗಳಿಗೆ, ಮಾರಾಟಗಾರರಿಗೆ ಕೊಂಡಿಯಾಗಿ ಅಸೋಸಿಯೇಷನ್ ಈ ಕೆಲಸ ಮಾಡುತ್ತಿದೆ.