ನಂದಿಬೇವೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಪಾರ್ವತಮ್ಮ ಆಯ್ಕೆ.
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಸೆ.13: ತಾಲೂಕಿನ ನಂದಿಬೇವೂರು ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಪಾರ್ವತಮ್ಮ ಆಯ್ಕೆಯಾಗಿದ್ದಾರೆ.
ಕೊಂಗನಹೊಸೂರು ರತ್ನಮ್ಮ ಅವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು, ಎಸ್ಸಿ ಮಹಿಳಾ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಂದಿಬೇವೂರಿನ ಪಾರ್ವತಮ್ಮ ಮತ್ತು ಸುಜಾತ ನಾಮಪತ್ರ ಸಲ್ಲಿಸಿದ್ದರು.
ಒಟ್ಟು 23 ಸದಸ್ಯರನ್ನು ಹೊಂದಿರುವ ಗ್ರಾಪಂಯಲ್ಲಿ ಪಾರ್ವತಮ್ಮ 14 ಮತಗಳನ್ನು ಪಡೆದು ಜಯಶೀಲರಾದರೆ ಪ್ರತಿಸ್ಪರ್ಥಿ ಸುಜಾತ ಅವರು 9 ಮತಗಳನ್ನು ಪಡೆದು ಪರಾಭವಗೊಂಡರು ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಬಿ.ವಿ.ಗಿರೀಶಬಾಬು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀಚಂದ್ರಶೇಖರ, ಸದಸ್ಯರಾದ ಕಲ್ಲಹಳ್ಳಿ ಬೃಂದಮ್ಮ, ನಾಗಮ್ಮ, ಆವಿನ ಸುಜಾತ, ಸಿದ್ದೇಶ, ಫಕ್ಕಿರಪ್ಪ, ವೀರಣ್ಣ, ಭರಮನಗೌಡ, ರತ್ನಮ್ಮ, ಭೀಮಣ್ಣ, ವೀರಮ್ಮ, ಪಿಡಿಒ ಎಸ್.ವೀರೇಶ, ಗ್ರಾಮ ಆಡಳಿತಾಧಿಕಾರಿ ಸುರೇಶ ಸೇರಿದಂತೆ ಇತರರು ಇದ್ದರು.