ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಸೂಚನೆ
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಸೆ.13: ಎಸ್ಸೆಸ್ಸೆಲ್ಸಿ ಪಲಿತಾಂಶ ಸುಧಾರಣೆಗೆ ಶ್ರಮ ವಹಿಸಬೇಕು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಪ್ರೌಢ ಶಾಲಾ ಶಿಕ್ಷಕರಿಗೆ ತಿಳಿಸಿದರು.
ಪಟ್ಟಣದ ಹೊರವಲಯದಲ್ಲಿರುವ ಸಮತಾರೆಸಾರ್ಟನಲ್ಲಿಗುರುವಾರತಾಲೂಕು ಪ್ರೌಢ ಶಾಲಾ ವಿಜ್ಞಾನ ಶಿಕ್ಷಕರ ಕ್ಲಬ್‍ವತಿಯಿಂದ ಆಯೋಜಿಸಿದ್ದ ವಿಜಯನಗರಜಿಲ್ಲಾ ಮಟ್ಟದ ವಿಜ್ಞಾನ ಶಿಕ್ಷಕರ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಸಿಎಂ ಅವರು ಈಚೆಗೆ ವಿಜಯನಗರಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದಾಗ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನುಗಂಭೀರವಾಗಿ ಪರಿಗಣಿಸಿದ್ದರು ಎಂದಅವರುಫಲಿತಾಂಶ ಸುದಾರಣೆ ನಿಟ್ಟಿನಲ್ಲಿ ಶಿಕ್ಷಕರು ಉತ್ತಮವಾಗಿ ಕೆಲಸ ಮಾಡಬೇಕುಎಂದರು.ಮಕ್ಕಳಿಗೆ ಸರಳವಾಗಿ, ಗುಂಪು ಚರ್ಚೆ, ಶ್ರದ್ದೆಯಿಂದ ಕಲಿಸಬೇಕು, ಓದುವ ಹವ್ಯಾಸ ಬೆಳೆಸಬೇಕು ಎಂದು ಹೇಳಿದರು.
ತಾ.ಪಂ ಕಾರ್ಯನಿರ್ವಾಹಕಅಧಿಕಾರಿ ವೈ.ಎಚ್.ಚಂದ್ರಶೇಖರ ಮಾತನಾಡಿ ಕಳೆದ ಬಾರಿಕಡಿಮೆಫಲಿತಾಂಶ ಬಂದಿರುವತಾಲೂಕಿನ 16 ಪ್ರೌಢ ಶಾಲೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆಎಂದಅವರು ಸರಳ ವಿಜ್ಞಾನ, ದೈನಂದಿನ ವಿಜ್ಞಾನ, ಸುಲಭ ವಿಜ್ಞಾನ ಹೀಗೆ ಮೂರು ವಿಧದಲ್ಲಿ ವಿಜ್ಞಾವನ್ನು ಬೋಧನೆ ಮಾಡಬೇಕುಎಂದು ಸಲಹೆ ನೀಡಿದರು.
ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ ಮಾತನಾಡಿ ಈ ಬಾರಿಯಎಸ್ಸೆಸ್ಸೆಲ್ಸಿಫಲಿತಾಂಶ ನಮಗೆ ದೊಡ್ಡಸವಾಲಾಗಿದೆ,ಗುಣಾತ್ಮಕಫಲಿತಾಂಶಕೊಡಬೇಕಾಗಿದೆ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೈತಿಕ ಸ್ಥೈರ್ಯತುಂಬಿ, ಪ್ರೀತಿಯಿಂದ ಕಲಿಸಿ ಎಂದು ಹೇಳಿದರು.
ಘಟಕ ಪರೀಕ್ಷೆ ಮಾಡಿ,ತಾಯಂದಿರ ಸಭೆ ನಡೆಸಿ ಒಟ್ಟಿನಲ್ಲಿ ನಾವು ನೀವು ಸೇರಿಎಸ್ಸೆಸ್ಸೆಲ್ಸಿಫಲಿತಾಂಶವನ್ನುಗಣನೀಯವಾಗಿ ಸುಧಾರಿಸಬೇಕುಎಂದುಅವರು ಹೇಳಿದರು.
ಪ್ರಗತಿಪರಚಿಂತಕ ಕೋಡಿಹಳ್ಳಿ ಭೀಮಣ್ಣ ಮಾತನಾಡಿ ಟಿ.ವಿ.ಯಲ್ಲಿ ಬರುವ ಶಾಸ್ತ್ರವನ್ನು ಮಕ್ಕಳ ಮನಸ್ಸಿನಿಂದ ಹೋಗಲಾಡಿಸಿ, ವೈಜ್ಞಾನಿಕ ಶಾಸ್ತ್ರವನ್ನು ಗಟ್ಟಿಗೊಳಿಸಿ, ಪ್ರಗತಿಪರ ಆಲೋಚನೆ ಮಕ್ಕಳಿಗೆ ಮೂಡಿಸಿ ಎಂದು ಸಲಹೆ ನೀಡಿದರು.
ವಿಜ್ಞಾನ ಶಿಕ್ಷಕರ ಕ್ಲಬ್‍ಅಧ್ಯಕ್ಷಯತಿರಾಜ್ ಪ್ರಸ್ಥಾವಿಕವಾಗಿ ಮಾತನಾಡಿದರು. ವಿಷಯ ಪರಿವೀಕ್ಷಕ ಹುಲಿಬಂಡಿ, ಬಸವಂತಯ್ಯ ಹಿರೇಮಠ, ಅಕ್ಷರದಾಸೋಹದ ಸಹಾಯಕ ನಿರ್ದೆಶಕ ಕೆ.ನಾಗರಾಜ, ಶಿಕ್ಷಣ ಸಂಯೋಜಕಕಬೀರನಾಯ್ಕ, ಗನೀಫ್, ಪ್ರೌಢ ಶಾಲಾ ಶಿಕ್ಷಕರ ಸಂಘದಜಿಲ್ಲಾದ್ಯಕ್ಷ ಎನ್.ಜಿ.ಮನೋಹರ, ಬಿ.ಜಯಮಾಲತೇಶ, ಪ್ರೌಢ ಶಾಲಾ ಎನ್‍ಪಿಎಸ್ ನೌಕರರ ಸಂಘದ ವಿರೇಶ,ನಿಂಗಪ್ಪ, ಶಂಕರನಾಯ್ಕ, ಅಂಜಿನಪ್ಪ, ಹರಿಯಮ್ಮನಹಳ್ಳಿ, ಶಶಿಕಲಾ, ಗುರುಮೂರ್ತಿ, ಕೊಟ್ರೇಶ,ವಿಶ್ವನಾಥ, ವಿಜ್ಞಾನ ಶಿಕ್ಷಕರ ಕ್ಲಬ್ ಸದಸ್ಯರು ಹಾಜರಿದ್ದರು.