ಹಬೋಹಳ್ಳಿ ಪಿಎಲ್‌ಡಿ ಬ್ಯಾಂಕ್ ವಸೂಲಾತಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.13 ತಾಲೂಕಿನ ಪಿಎಲ್‌ಡಿ ಬ್ಯಾಂಕ್ ವಸೂಲಾತಿಯಲ್ಲಿ ವಿಜಯನಗರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ ಎಂದು ಜಿಲ್ಲಾ ವ್ಯವಸ್ಥಾಪಕ ಸಿ. ಮಂಜುನಾಥ ಹೇಳಿದರು.
ಪಟ್ಟಣದ ಹಳೆ ಊರಿನ ಸಮುದಾಯ ಭವನದಲ್ಲಿ ಗುರುವಾರ ನಡೆದ ಬ್ಯಾಂಕಿನವಾರ್ಷಿಕ ಮಹಾಜನ ಸಭೆಯಲ್ಲಿ ಮಾತನಾಡಿದರು. ಬ್ಯಾಂಕ್ ವ್ಯವಸ್ಥಾಪಕ ಮತ್ತು ಸಿಬ್ಬಂದಿಯ ಪ್ರಯತ್ನದಿಂದ ಶೇಕಡ 93 ರಷ್ಟು ಸಾಲ ವಸೂಲಾತಿಯಾಗಿದೆ. ಒಂದು ವರ್ಷದಲ್ಲಿ 69.92 ಲಕ್ಷ ರೂ  ನಿವ್ವಳ ಲಾಭ ಬಂದಿದೆ. ಬ್ಯಾಂಕಿನಲ್ಲಿ ಒಟ್ಟು 6,741 ಷೇರುದಾರರಿದ್ದಾರೆ. ಇನ್ನೂ ಒಂದು ಸಾವಿರ ಸಾವಿರ ಪೇರುದಾರರು ಆಗಬಹುದು ಎಂದರು.
ಬ್ಯಾಂಕಿನ ವ್ಯವಸ್ಥಾಪಕ ಶಿವ ಕವಿ ತಿಪ್ಪೇಸ್ವಾಮಿ ಮಾತನಾಡಿ 2024-25ರಲ್ಲಿ ಕೃಷಿ ವಿಭಾಗಕ್ಕೆ 4 ಕೋಟಿ ವ್ಯಾಪಾರ ಅಭಿವೃದ್ಧಿಗೆ 2 ಕೋಟಿ ಸೇರಿದಂತೆ ಒಟ್ಟು 6ಕೋಟಿ  ರೂ.ಸಾಲ ನೀಡುವ ಗುರಿ ಹೊಂದಲಾಗಿದೆ  ಎಂದರು.
ಬ್ಯಾಂಕಿನ ಅಧ್ಯಕ್ಷ ಬಿ ಗಂಗಾಧರ್ ಮಾತನಾಡಿ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ನೀಡುವ ಬಳಕೆ ಸಾಲದ ಮಿತಿಯನ್ನು  ಮುಂದಿನ ದಿನಗಳಲ್ಲಿ ಚರ್ಚಿಸಿ ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊಟ್ಟೂರು ತಾಲೂಕ ನಂತರ ಆ ಭಾಗದ ಅಲಬೂರು ಕೋಗಳಿ, ಅಂಬಳಿ  ರೈತರು ಬ್ಯಾಂಕಿನ ಸೇರುದಾರರಾಗಿದ್ದು. ಮುಂದಿನ ದಿನಗಳಲ್ಲಿ ಅವರನ್ನು ಕೈ ಬಿಡಲಾಗುವುದೇ ಎಂದು  ಬಿಡಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಚಿಂತ್ರಪಳ್ಳಿ ಗಂಗಾಧರ ಕೇಳಿದಾಗ ಬ್ಯಾಂಕಿನ ವ್ಯವಸ್ಥಾಪಕ ತಿಪ್ಪೇಸ್ವಾಮಿ ಮಾತನಾಡಿ ಸದ್ಯ ಅವರನ್ನು ಇನ್ನು ಬಾಕಿನ ಸದಸ್ಯರನ್ನಾಗಿಯೇ ಮುಂದುವರಿಸಲಾಗುವುದು. ಬರುವ ಚುನಾವಣೆಯಲ್ಲಿ ಅವರಿಗೆ ಮತದಾನದ ಹಕ್ಕು ನೀಡಲಾಗುವುದು ಎಂದರು.
ಈ ವೇಳೆ  ತಾ ಪಂ ಮಾಜಿ ಅಧ್ಯಕ್ಷ ಸೂರ್ಯ ಬಾಬು, ಪಿ ಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ವೈ ಮಲ್ಲಿಕಾರ್ಜುನ, ಹೆಚ್ಎ ಕೊಟ್ರೇಶ್, ಸಹಕಾರ ಸಂಘದ ಮಾಜಿ ಅಧ್ಯಕ್ಷ ಹುಡೇದ್  ಗುರುಬಸವರಾಜ್, ಮುಖಂಡ ಕಿನ್ನಾಳ ಸುಭಾಷ್ ಮಾತನಾಡಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ನಾಗಮ್ಮ, ನಿರ್ದೇಶಕರಾದ ಈ ಕೃಷ್ಣಮೂರ್ತಿ ಫಕೀರಬಿ, ದೇವಿಪ್ರಸಾದ್, ಬಿ ಎಂ ಗುರುವಯ್ಯ, ಜಿ ಕೊಟ್ರಪ್ಪ ಡಿ ಕೊಟ್ರೇಶಪ್ಪ ಎಚ್ಎಂ ಮಲ್ಲಯ್ಯ  ಶಾಮಾಚಾರ್  ಸೇರಿ ಸಿಬ್ಬಂದಿ ವರ್ಗದ  ಇದ್ದರು.