ಹಿಂದೂ ಮಹಾಮಂಡಳಿ ಗಣೇಶೋತ್ಸವದಲ್ಲಿ ಪಂಚಾಮೃತ ಅಭಿಷೇಕದೊಂದಿಗೆ ತ್ರೀಕಾಲ ಪೂಜೆ
ಸಂಜೆವಾಣಿ ವಾರ್ತೆ
ಗಂಗಾವತಿ, ಸೆ.13: ನಗರದ ಹಿಂದೂ ಮಹಾಮಂಡಳಿ ಗಣೇಶೋತ್ಸವ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗಣಪತಿ ಪ್ರತಿಷ್ಟಾಪನೆಯಲ್ಲಿ ಪ್ರತಿ ನಿತ್ಯ ಗಣಪತಿಗೆ ಪಂಚಾಮೃತ ಅಭಿಷೇಕ ಸಮೇತ ನಿತ್ಯ ತ್ರೀಕಾಲ ಪೂಜೆ ನಡೆಸಲಾಗುತ್ತಿದೆ.
ಕಳೆದ ಸೆ.7 ರಂದು ನಗರದ ಬಸ್ ನಿಲ್ದಾಣದ ಎದುರಿಗೆ ಹತ್ತನೇ ವರ್ಷದ ಆಚರಣೆಯಲ್ಲಿ ಸರ್ವ ಸಮಾಜದ ಸಹಯೋಗದಲ್ಲಿ ಹಿಂದು ಮಹಾಮಂಡಳಿ ಗಣಪತಿಯನ್ನು ಪ್ರತಿಷ್ಟಾಪಿಸಲಾಗಿದೆ.  ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನದ ಮಾದರಿಯಲ್ಲಿ ಟೆಂಟ್ ನಿರ್ಮಿಸಿದ್ದು, ಬೃಹದಾಕಾರದ ಗಣಪತಿಯನ್ನು ಪ್ರತಿಷ್ಟಾಪಿಸಲಾಗಿದೆ.
ಜೊತೆಗೆ ಚಿಕ್ಕ ಗಣಪತಿ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದು, ಬೆಳ್ಳಿ ಮತ್ತು ಪಂಚಲೋಹದ ಗಣಪತಿ ಮೂರ್ತಿಗೆ ಅರ್ಚಕರಿಂದ ಶಾಸ್ತ್ರೋಕ್ತವಾಗಿ ಪಂಚಾಮೃತ ಅಭಿಷೇಕದೊಂದಿಗೆ ತ್ರೀಕಾಲ ಪೂಜೆ ನೇರವೇರಿಸಲಾಗುತ್ತಿದೆ.  ಪ್ರತಿಷ್ಟಾಪನೆ ದಿನದಿಂದಲೇ ತ್ರೀಕಾಲ ಪೂಜೆ ಪ್ರಾರಂಭವಾಗಿದೆ.  ಪ್ರತಿ ನಿತ್ಯ ಬೆಳೆಗ್ಗೆ 8 ಗಂಟೆಗೆ, 11.30ಕ್ಕೆ ಮತ್ತು ಸಂಜೆ 6.00 ಗಂಟೆ ಸಮಯದಲ್ಲಿ ನಗರದ ಆಪೇಕ್ಷಿತ ದಂಪತಿಗಳಿಂದ ಸಂಕಲ್ಪ ಪೂಜೆಯನ್ನು ಮಾಡಿಸಲಾಗುತ್ತದೆ.  ಸಂಪ್ರದಾಯಬದ್ಧವಾಗಿ ನಡೆಯುವ ಪೂಜೆಯಲ್ಲಿ ದಂಪತಿಗಳು ಪೂಜೆ ಮಾಡುವ ಇಚ್ಚೆ ಇದ್ದರೆ ಗಣಪತಿ ಪ್ರತಿಷ್ಟಾಪನೆ ಸಮಿತಿಯ ಪ್ರಮುಖರನ್ನು ಭೇಟಿಯಾಗಬಹುದು ಎಂದು ಹಿಂದು ಮಹಾಮಂಡಳಿ ಸಮಿತಿ ಪ್ರಮುಖ ಅಯ್ಯನಗೌಡ ಹೇರೂರು, ನೀಲಕಂಠಪ್ಪ ನಾಗಶೆಟ್ಟಿ, ಕುಮಾರೇಶ ಹೂಗಾರ ಕೊರಿದ್ದಾರೆ.
ಹನ್ನೊಂದನೆ ದಿನ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಸಮೇತ ಗಣಪತಿ ವಿಸರ್ಜನೆ ಮೆರವಣಿಗೆ ಅದ್ದೂರಿಯಾಗಿ ನಡೆಯಲಿದೆ ಎಂದು ತಿಳಿಸಿದರು.