ಒಳ್ಳೆ ಟಿವಿ ಕೊಡಿ ಎಂದ ದರ್ಶನ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.13:  ತಮಗೆ ಟಿವಿ ನೀಡುವಂತೆ ನಟ ದರ್ಶನ್ ಜೈಲಿನ ಸಿಬ್ಬಂದಿಗೆ ಒತ್ತಾಯಿಸುತ್ತಿದ್ದಾರಂತೆ.
ಟಿವಿ ನೀಡುವಂತೆ ಪದೇ ಪದೇ ಸಿಬ್ಬಂದಿಗೆ ಕೇಳ್ತಿರೋ ದರ್ಶನ್,  ವಿಚಾರಣಾಧೀನ ಕೈದಿಗಳಿಗೆ ಟಿವಿ‌ ಕೊಡುವಂತೆ ಜೈಲು‌ ನಿಯಮ ಇದ್ರು ಕೊಡ್ತಿಲ್ಲ ಯಾಕೆ. ಅದಕ್ಕೂ ಕೋರ್ಟ್ ಗೆ ಅಪ್ಲಿಕೇಶನ್ ಹಾಕಬೇಕಾ ಎಂದಿದ್ದಾರಂತೆ.
ಇನ್ನು ಕೊಡೋದಿದ್ದರೆ ಒಳ್ಳೆ ಟಿವಿ ಕೊಡಿ  ನಾಲ್ಕೇ ದಿನಕ್ಕೆ ಕೆಟ್ಟು ಹೋಗೋ ಟಿವಿ ಕೊಡಬೇಡಿ ನಾನಿನ್ನೂ ಆರೋಪಿ ಅಷ್ಟೇ ಅಪರಾಧಿಯಲ್ಲ, ಇಷ್ಟೊಂದು ಕಠಿಣ ನಿಯಮ ಬೇಕಾ ಎಂದು ಪ್ರಶ್ನಿಸಿದ್ದಾರಂತೆ. ಕಳೆದ ಶನಿವಾರ ಹಳೆ ಟಿವಿ ಕೊಟ್ಟಿದ್ದ ಸಿಬ್ಬಂದಿ‌ ಅದು ಕೆಟ್ಟುಹೊದ ಪರಿಣಾಮ ಇನ್ನು ಟಿವಿ ನೀಡಿಲ್ಲ.
ಪಾಠ ಕಲಿಯದ ದರ್ಶನ್:
ಕಳೆದ ಮೂರು ತಿಂಗಳಿನಿಂದ  ಜೈಲಿನಲ್ಲಿದ್ದರೂ ನಿನ್ನೆ ಸಂಜೆ ವಕೀಲರನ್ನು ಭೇಟಿ ಮಾಡಲು ಸಂದರ್ಶಕರ ಕೊಠಡಿಗೆ ಬರುವಾಗ  ಮಾಧ್ಯಮಗಳಿಗೆ ತನ್ನ ಎರೆಡು ಕೈಗಳ  ಮಧ್ಯ ಬೆರಳು ಮುಂದು ಮಾಡಿ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ.