ನ.15ರೊಳಗೆ ಪ್ರತಿ ಮನೆಗೂ ನೀರು ಪೂರೈಸಿ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.13:– ನಗರದ ಕೆ.ಆರ್.ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಬಂಧ ನ.15ರೊಳಗೆ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿ ಪ್ರತಿ ಮನೆಗೂ ನೀರು ಪೂರೈಕೆ ಮಾಡಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಸೂಚನೆ ನೀಡಿದರು.
ನಗರಪಾಲಿಕೆ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕೃಷ್ಣರಾಜ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕೆ.ಆರ್.ಕ್ಷೇತ್ರಕ್ಕೆ ಎಷ್ಟು ನೀರನ್ನು ತರಲಾಗುತ್ತಿದೆ. ಎಷ್ಟು ಸರಬರಾಜು ಮತ್ತು ವಿತರಣೆ ಮಾಡಲಾಗುತ್ತಿದೆ ಎಂಬುದರ ವಿವರ ಕೊಡಿ,'' ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ವೇಳೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರ್? ಮಾತನಾಡಿ,ನಗರದ ಪ್ರತಿಯೊಂದು ಟ್ಯಾಂಕ್‍ಗಳಲ್ಲಿ ಓವರ್ ಪೆÇ್ಲೀ ತಡೆಯಲು ಸೆನ್ಸಾರ್ ಅಳವಡಿಸಬೇಕು. ಬಲ್ಕ್ ಪೆÇ್ಲೀ ಮೀಟರ್‍ಗಳನ್ನು ಅಳವಡಿಸಿದರೆ ಸಣ್ಣ ಸಮಸ್ಯೆಗಳನ್ನು ಪರಿಹರಿಸಬಹುದು,” ಎಂದು ಸಲಹೆ ನೀಡಿದರು.
ಬಹಳ ದಿನಗಳ ನಂತರ ಪರಿಶೀಲನೆ ನಡೆಸಲಾಗುತ್ತಿದೆ. ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಆಗುವ ಕೆಲಸಗಳ ಬಗ್ಗೆ ಚಾರ್ಟ್ ಮಾಡಿಕೊಳ್ಳಬೇಕು. ಒಂದು ವರ್ಷದ ಚಾರ್ಟ್ ಮಾಡಿಕೊಂಡು ಆರು ತಿಂಗಳಲ್ಲಿ ಮುಗಿಸಬೇಕು,'' ಎಂದು ಹೇಳಿದರು. ನಗರದಲ್ಲಿ ಅತಿ ಹೆಚ್ಚು ಗುಂಡಿ ಬಿದ್ದಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆದ್ಯತೆ ಮೇರೆಗೆ ಮುಚ್ಚುವ ಕ್ರಮ ಕೈಗೊಳ್ಳಬೇಕು. ಬೀದಿ ದೀಪದ ಸಮಸ್ಯೆಯಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು,”ಎಂದು ಹೇಳಿದರು. ನಗರದ ವಿವಿಧ ಕಡೆಗಳಲ್ಲಿ ರಸ್ತೆಬದಿ ವ್ಯಾಪಾರಿಗಳಿಗೆ ನಿರ್ಮಿಸಿರುವ ಜಾಗಗಳಿಗೆ ಫಾಸ್ಟ್ ಫುಡ್ ವ್ಯಾಪಾರಿಗಳನ್ನು ಸ್ಥಳಾಂತರಿಸಬೇಕು. ಸಾರ್ವಜನಿಕರು ಹೆಚ್ಚು ಸಂಚರಿಸುವ ರಸ್ತೆಗಳಲ್ಲಿ ಅವಕಾಶ ಕೊಡದೆ ಸ್ಥಳಾಂತರಿಸುವಂತೆ ಕ್ರಮ ಜರುಗಿಸಬೇಕು,'' ಎಂದರು. ನಗರದ ಲಲಿತಾದ್ರಿಪುರ, ಗೊರೂರು ಬಡಾವಣೆಯಲ್ಲಿ ನಿರ್ಮಾಣ ಮಾಡುತ್ತಿರುವ ಬಹು ವಸತಿ ಸಮುಚ್ಛಯಗಳ ಕಟ್ಟಡದ ಪರಿಶೀಲನೆ ಸೇರಿ ಆಶ್ರಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆಯನ್ನು ಆಯೋಜಿಸಿ,” ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಆಯುಕ್ತರಾದ ಮೋಹನಕುಮಾರಿ, ಜೆ.ಎಸ್.ಸೋಮಶೇಖರ್, ಅಧೀಕ್ಷಕ ಎಂಜಿನಿಯರ್ ಕೆ.ಜೆ.ಸಿಂಧು, ವಲಯ ಸಹಾಯಕ ಆಯುಕ್ತರಾದ ಎಸ್.ಸತ್ಯಮೂರ್ತಿ, ಮಂಜುನಾಥ್ ರೆಡ್ಡಿ, ಕಾರ್ಯಪಾಲಕ ಎಂಜಿನಿಯರ್ ಮಹೇಶ್, ಅಶ್ವಿನ್ ಇದ್ದರು.