ಸಂಸದರಿಗೆ ಭರ್ಜರಿ ಸ್ವಾಗತ
ಸಂಜೆವಾಣಿ ವಾರ್ತೆ
ನಂಜನಗೂಡು: ಸೆ.13:– ಅಶೋಕಪುರಂ ಸಮಾಜ ಸೇವಕ ಮತ್ತು ರೈಲ್ವೆ ಗೂಡ್ಸ್ ಶೆಡ್ ಕೂಲಿ ಕಾರ್ಮಿಕರ ಅಧ್ಯಕ್ಷ ಚಂದ್ರು ನೇತೃತ್ವದಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಬಾರಿ ಗಾತ್ರದ ಹೂವಿನ ಹಾರ ಹಾಕಿ ಭವ್ಯ ಸ್ವಾಗತ ಕೋರಿದರು.
ಬಡಾವಣೆಯ ನಿವಾಸಿಗಳು ಸಂಸದರು ಬರುವುದಕ್ಕಿಂತ ಮುಂಚೆ ರಸ್ತೆಯಲ್ಲ ನೀರನ್ನು ಹಾಕಿ ರಂಗವಲ್ಲಿ ಬಿಡಿಸಿ ಹೂವನ್ನು ಹಾಕಿ ಸ್ವಾಗತ ಕೋರಿದರು.
ಚಂದ್ರು ಮಾತನಾಡಿ ಮೊದಲ ಬಾರಿಗೆ ಮಹಾರಾಜರು ನಮ್ಮ ಬಡಾವಣೆ ಅಸೋಕಪುರಂ ಗೆ ಬಂದಿರುವುದು ನಮಗೆಲ್ಲ ಸಂತಸ ತಂದಿದೆ ಪುಣ್ಯ ಮಾಡಿದ್ದೇವೆ ಅವರು ಸಂಸದರು ಅನ್ನುವುದಕ್ಕಿಂತ ನಮಗೆಲ್ಲ ಮಹಾರಾಜರು ಎಂಬುದೇ ಖುಷಿ ತಂದಿದೆ ಅವರು ಬಂದಿರುವುದು ನಮ್ಮ ಬಡಾವಣೆಯಲ್ಲಿ ಹಬ್ಬದ ವಾತಾವರಣ ಉಂಟಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಬಾಬು ಜಗಜೀವನ ರಾಮ್ ಯುವ ಸೇನೆಯವರಾದ ರಾಜ ನಿಂಗರಾಜು ಚಂದ್ರು ಚರಣ್ ಕುಮಾರ್ ರವಿ ಸುರೇಶ್ ಬೈರಾ ದಾಸ್ ಪ್ರಕಾಶ್ ಸಿದ್ದಪ್ಪ ಸ್ವಾಮಿ ಶಿವು ಜಗದೀಶ್ ನಾಗರಾಜು ಪ್ರದೀಪ್ ದೇವು ಕೃಷ್ಣ ಚೇತನ್ ಸುಧನ್ ಸೇರಿದಂತೆ ಇತರರು ಇದ್ದರು.