ಬೆಳ್ಳಂಬೆಳಗ್ಗೆ ನಗರಸಭೆ ಕಚೇರಿಗೆ ಅಧ್ಯಕ್ಷರ ಭೇಟಿ: ಪರಿಶೀಲನೆ
ಸಂಜೆವಾಣಿ ವಾರ್ತೆ
ನಂಜನಗೂಡು: ಸೆ.13:– ನಗರಸಭೆ ಅಧ್ಯಕ್ಷ ಶ್ರೀಕಂಠಸ್ವಾಮಿ ಬೆಳಿಗ್ಗೆ 6 ಗಂಟೆಗೆ ನಗರಸಭೆಗೆ ಭೇಟಿ ನೀಡಿ ಹಾಜರಾತಿ ಪುಸ್ತಕ ಪರಿಶೀಲನೆ ಮಾಡಿದರು ಇದರಿಂದ ಅಧಿಕಾರಿಗಳು ಮೇಸ್ತ್ರಿಗಳು ತಬ್ಬಿಬಾದರೂ.
ನಗರಸಭೆ ಹೆಲ್ತ್ ಇನ್ಸ್ಪೆಕ್ಟರ್ ಗಳು ಬೆಳಗ್ಗೆ ಕಚೇರಿಗೆ ಆರು ಗಂಟೆಗೆ ಬರಲೇಬೇಕು. ಯಾಕೆ ಬರುತ್ತಿಲ್ಲ ಎಂದು ಕಿಡಿ ಕಾರಿದರೂ. ಬೆಳಗ್ಗೆ ಯಾರ್ಯಾರು ಹಾಜರಾತಿ ಹಾಕುತ್ತಿಲ್ಲ ಯಾರು ಬಂದಿಲ್ಲ ಎಂದು ಪರಿಶೀಲಿಸಿದರು ನಾಳೆಯಿಂದ ಎಲ್ಲರೂ ಕೂಡ 6:00 ಕಚೇರಿಗೆ ಬರಬೇಕು ಎಂದು ಆದೇಶಿಸಿದರು ಈ ಸಂದರ್ಭದಲ್ಲಿ ನಗರಸಭೆ ಮೇಸ್ತ್ರಿಗಳು ಸ್ಥಳದಲ್ಲಿದ್ದ ಹೆಲ್ತ್ ಇನ್ಸ್ಪೆಕ್ಟರ್ಗಳು ವಾರ್ಡುಗಳಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಚರ್ಚೆ ನಡೆಯಿತು ಜೆಸಿಬಿ ಕೆಟ್ಟು ನಿಂತು ತಿಂಗಳುಗಳು ಕಳೆದಿವೆ ಅದನ್ನು ರಿಪೇರಿ ಮಾಡಿಸಲು ಮತ್ತು ಅಲ್ಲಿಯತನಕ ಎರಡು ತಿಂಗಳವರೆಗೆ ಬಾಡಿಗೆ ಜೆಸಿಬಿ ಪಡೆಯಬೇಕೆಂದು ಮಾಹಿತಿ ನೀಡಿದರು.
ಇದರ ಜೊತೆಗೆ ಪಟ್ಟಣದಲ್ಲಿ 20 ರಿಂದ 24 ಪಾರ್ಕುಗಳಿವೆ ಸ್ವಚ್ಛತೆಗೆ ಪೌರ ಕಾರ್ಮಿಕರ ಬಳಸಿದರೆ ಬಹಳ ತೊಂದರೆ ಆಗುತ್ತದೆ ಅದರಿಂದ ಇಂಜಿನಿಯರ್ ಸೆಕ್ಷನ್ ಭಾಗದಲ್ಲಿ ಪಾಕ್ರ್ಗಳ ಸ್ವಚ್ಛತೆಗೆ ಕಾರ್ಮಿಕರನ್ನು ತೆಗೆದುಕೊಂಡು ಬಳಸಲು ಅವಕಾಶವಿದೆ ಅದನ್ನು ಅಲ್ಲಿಯೇ ಮಾಡಿದರೆ ಪಟ್ಟಣದಲ್ಲಿ ಸ್ವಚ್ಛತೆ ಮಾಡಲು ಅನುಕೂಲವಾಗುತ್ತದೆ ಎಂದು ಮಾಹಿತಿ ನೀಡಿದರು.
ಅಕ್ರಮವಾಗಿ ರಸ್ತೆಯಲ್ಲಿ ಅಂಗಡಿಗಳ ಮಾಲೀಕರು ತಮ್ಮ ಅಂಗಡಿಯ ಬೋರ್ಡ್ ಗಳನ್ನು ಫುಟ್ ಬಾತ್ ನಲ್ಲಿ ನಿಲ್ಲಿಸಿರುತ್ತಾರೆ ಅದನ್ನು ತೆಗೆಯಲು ಸೂಚಿಸಿದರು ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಪುಟ್ಪತ್ ಜಾಗದಲ್ಲಿ ಸೆಡ್ ಹಾಕಿ ಅಂಗಡಿಗಳನ್ನು ನಿರ್ಮಿಸುತ್ತಿದ್ದಾರೆ. ಅದನ್ನು ತೆಗೆಯಲು ಸೂಚಿಸಿದರು ಅವರು ಬೆಳಗ್ಗೆ ಇಂದ ಸಂಜೆವರೆಗೆ ವ್ಯಾಪಾರ ಮಾಡಿಕೊಂಡು ತೆಗೆದುಕೊಂಡು ಹೋಗಬೇಕು ಆ ರೀತಿ ಅವರಿಗೆ ಮಾಹಿತಿ ನೀಡಲು ಸೂಚಿಸಿದರು ನಾಳೆಯಿಂದಲೇ ಎಲ್ಲಾ ಹೆಲ್ತ್ ಇನ್ಸ್ಪೆಕ್ಟರ್ಗಳು ಮೇಸ್ತ್ರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ಆದೇಶ ಮಾಡಿದರು.
ಎರಡು ತಿಂಗಳ ಮಟ್ಟಿಗೆ ಜೆಸಿಬಿ ಬಾಡಿಗೆ ಮತ್ತು ಪಾರ್ಕುಗಳ ಸ್ವಚ್ಛತೆಗೆ ಕಾರ್ಮಿಕರಗಳನ್ನು ತೆಗೆದುಕೊಳ್ಳುವುದಕ್ಕೆ ಜೆಸಿಬಿ ರಿಪೇರಿಗೆ ಅಧಿಕಾರಿಗಳನ್ನು ಚರ್ಚಿಸಿ ತೀರ್ಮಾನಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.