ಕುಶಾಲತೋಪುಗಳಿಗೆ ಪೂಜೆ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.13:– ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಕುಶಾಲತೋಪು ಸಿಡಿಸಿ ತರಬೇತಿ ನೀಡಲಿದ್ದು, ಇದಕ್ಕೂ ಮುನ್ನ ಇಂದು ಅರಮನೆ ಆವರಣದಲ್ಲಿ ಕುಶಾಲತೋಪುಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಯಿತು.
ಪುರೋಹಿತರಾದ ಪ್ರಹ್ಲಾದ ರಾವ್ ಮಾತನಾಡಿ, ಅರಮನೆಯಲ್ಲಿರುವ ಕುಶಾಲತೋಪುಗಳಿಗೆ ಪೂಜೆ ಸಲ್ಲಿಸಲಾಗಿದೆ. ನಾವು ಯಾವುದೇ ಯುದ್ದಗಳಿಗೆ ಹೋಗಬೇಕಾದರೆ, ಕಾರ್ಯದಲ್ಲಿ ವಿಜಯ ಆಗಬೇಕೆಂದರೆ ವಿಜಯಗಣಪತಿಗೆ ಪೂಜೆ ಸಲ್ಲಿಸುತ್ತೇವೆ. ಆದ್ದರಿಂದ ಇಂದು ವಿಜಯಗಣಪತಿ, ಶ್ರೀ ದುರ್ಗಿ, ಚಾಮುಂಡೇಶ್ವರಿ, ಮೃತ್ಯುಂಜಯ ಹೆಸರಿನಲ್ಲಿ ಮಹಾಪೂಜೆ ಸಲ್ಲಿಸಿದ್ದೇವೆ. ಎಲ್ಲಾ ಕುಶಾಲತೋಪುಗಳಿಗೆ ಪೂಜೆ ಮಾಡಿದ್ದೇವೆ. ಎಲ್ಲರ ಬಳಿಯಲ್ಲೂ ಮೃತ್ಯುಂಜಯ ಜಪ ಮಾಡಿಸಿದ್ದೇವೆ ಎಂದರು.
ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಮಾತನಾಡಿ, ನಾಡಹಬ್ಬ ದಸರಾ-2024 ಆಚರಣೆಗೆ ಪೂರ್ವಭಾವಿಯಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಪ್ರಮುಖವಾದ ಅಂಶ ಕುಶಾಲತೋಪು. ಪ್ರತಿವರ್ಷ ಅರಮನೆಯ ಆವರಣದಲ್ಲಿ ಕುಶಾಲತೋಪು ಪ್ರಾಕ್ಟೀಸ್ ಹಾಗೂ ತಾಲೀಮು ಮಾಡುತ್ತೇವೆ. ಅದರಂತೆ ಇಂದು ಕುಶಾಲತೋಪು ಸಜ್ಜುಗೊಳಿಸಿ, ವಿಶೇಷ ಪೂಜೆ ಸಲ್ಲಿಸಿ ಅವುಗಳನ್ನು ಪ್ರಾಕ್ಟೀಸ್ ಮಾಡಲು ತೆಗೆದುಕೊಂಡು ಹೋಗಲಾಗುವುದು ಎಂದರು.
ನಗರ ಪೆÇಲೀಸ್ ಆಯುಕ್ತೆ ಸೀಮಾಲಾಡ್ಕರ್, ಡಿಸಿಪಿ ಮುತ್ತುರಾಜ್ ಇನ್ನಿತರರು ಉಪಸ್ಥಿತರಿದ್ದರು.