ಗಣೇಶನ ಸ್ಥಾಪನೆಯಿಂದ ಬಾಂಧವ್ಯ ಇನ್ನು ಗಟ್ಟಿಯಾಗಲು ಸಹಕಾರಿ
ಚಿತ್ತಾಪುರ:ಸೆ.೧೩:ಪ್ರತಿ ವರ್ಷವು ವಿಜ್ಞೇಶ್ವರನ ಸ್ಥಾಪನೆಯಿಂದ ಸರ್ವಧರ್ಮಿಯರಲ್ಲಿ ಭಾಂದವ್ಯ ಗಟ್ಟಿಯಾಗಲು ಸಹಕಾರಿಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ, ಸಮಾಧಾನ, ನೆಮ್ಮದಿ ಲಭಿಸಲಿದೆ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಮುಡಬೂಳಕರ್ ಹೇಳಿದರು.
ಪಟ್ಟಣದ ವಾರ್ಡ ನಂ ೩ ರಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ರಂಗೊಲಿ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಓಣಿಯ ಎಲ್ಲರೂ ಒಂದಡೇ ಕೂಡಿಕೊಂಡು ವಿವಿಧ ಸ್ಪರ್ಧೇಗಳನ್ನು ಏರ್ಪಡಿಸುವದರಿಂದ ಅದಕ್ಕೆ ವಿಶೇಷ ಮೆರಗು ಮೂಡುತ್ತದೆ ಅಲ್ಲದೇ ಅವರಲ್ಲಿ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ವೇದಿಕೆಗಳು ಸಹಕಾರಿಯಾಗಲಿವೆ ಎಂದು ಹೇಳಿದರು.
ಪತ್ರಕರ್ತರಾದ ಕಾಶಿನಾಥ ಗುತ್ತೆದಾರ ಮಾತನಾಡಿ ಗಣೇಶ ಮೂರ್ತಿ ಪ್ರತಿಷ್ಟಾಪನೆಯಿಂದ ಸರ್ವರೂ ಒಂದುಗೂಡಿ ಆಚರಿಸುವದು ಹಮ್ಮೆಯ ವಿಷಯವಾಗಿದೆ. ಪ್ರತಿಷ್ಟಾಪಿಸಿದ ದಿನದಿಂದ ೫ ದಿನ ಎಲ್ಲಾರೂ ಕೂಡಿಕೊಂಡು ದಿನಕೊಂದು ಕಾರ್ಯಕ್ರಮಗಳನ್ನು ಮಾಡಿ ಎಲ್ಲರೂ ಸೌಹಾರ್ದದಿಂದ ಭಾಗವಹಿಸುವದರಿಂದ ಅವರಲ್ಲಿನ ಬಾಂದ್ಯವ್ಯ ಇನ್ನು ಗಟ್ಟಿಯಾಗಲು ಇಂತಹ ವೇದಿಕೆಗಳು ತುಂಬಾ ಸಹಕಾರಿಯಾಗುತ್ತದೆ. ಪ್ರತಿವರ್ಷವೂ ಹೊಸ ಹೊಸ ಯೊಜನೆಗಳೊಂದಿಗೆ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದು ಹೇಳಿದರು.
ವಿನಾಯಕ ಬಳಗದ ಲಕ್ಷಿö್ಮÃಕಾಂತ ರಾಜೊಳ್ಳಿ, ರುದ್ರಪ್ಪ ತಾವರೆ, ಡಾ, ಸಂತೊಷ ಯಲ್ಲೇರಿ, ಚನ್ನು ಪಾಟೀಲ್, ಮಲ್ಲಿಕಾರ್ಜುನ ಅಲ್ಲೂರಕರ್, ಪರಮೇಶ ಪೇಂಟರ್, ದೇವಕಮ್ಮ ರಾಜೋಳ್ಳಿ, ಅಭಯ್ ಮುಡಬೂಳಕರ್, ಭಾರತೀ ಟೀಚರ್, ಶೃತಿ, ರೇಣುಕಾ, ಶ್ವೇತಾ, ಮಲ್ಲಮ್ಮ ಏರಿ, ರಾಧಿಕಾ ಗುತ್ತೆದಾರ, ಸಹನಾ ಬುರ್ಲಿ, ವಿಜಯೇಂದ್ರ ಇತರರು ಇದ್ದರು.