ನಾಳೆ ಬಸವೇಶ್ವರ ಕೋ ಆಪರೇಟಿವ್ ಬ್ಯಾಂಕನ ವಾರ್ಷಿಕ ಮಹಾಸಭೆ
ಬಸವನಬಾಗೇವಾಡಿ:ಸೆ.೧೩:ಪಟ್ಟಣದ ಪ್ರತಿಷ್ಠಿತ ಬಸವೇಶ್ವರ ಕೋ ಆಪರೇಟಿವ ಬ್ಯಾಂಕಿನ ೨೦೨೩-೨೦೨೪ನೆಯ ಸಾಲಿನ ೬೦ನೆಯ ವಾರ್ಷಿಕ ಮಹಾಸಭೆಯನ್ನು ಬಸವನಬಾಗೇವಾಡಿಯ ಮುದ್ದೇಬಿಹಾಳ ರಸ್ತೆಯಲ್ಲಿರುವ ಜಗದ್ಗುರು ರೇಣುಕಾಚಾರ್ಯ ಜನಕಲ್ಯಾಣ ಮಂಟಪದಲ್ಲಿ ಸೆಪ್ಟೆಂಬರ ೧೪ರ ಬೆಳಗ್ಗೆ ೧೦.೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಸವೇಶ್ವರ ಕೋ ಆಪರೇಟಿವ ಬ್ಯಾಂಕಿನ ಅಧ್ಯಕ್ಷರಾದ ಲೋಕನಾಥ ಅಗರವಾಲ ಹೇಳಿದರು
ಬ್ಯಾಂಕಿನ ಸಭಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೧೯೬೪ರಲ್ಲಿ ದಿವಂಗತ ಆರ ಎಂ ದುಂಬಾಳಿ ಅವರು ಸ್ಥಾಪಿಸಿದ ಬ್ಯಾಂಕು ೩೧-೦೩-೨೦೨೪ಕ್ಕೆ ನಮ್ಮ ಬ್ಯಾಂಕಿನ ಷೇರು ಬಂಡವಾಳ ರೂ.೩೦೪.೪೯ಲಕ್ಷಗಳು ಇದ್ದು ಹಿಂದಿನ ವರ್ಷಕ್ಕಿಂತ ೨೯.೪೩ಲಕ್ಷ ರೂಪಾಯಿ ಹೆಚ್ಚಳವಾಗಿದೆ ಎಂದು ಹೇಳಲು ಹರ್ಷವಾಗುತ್ತದೆ ಬ್ಯಾಂಕಿನ ಸದಸ್ಯರ ಒಟ್ಟು ಸಂಖ್ಯೆ ೬೭೪೦ ಹೊಂದಿದ್ದು ಆರ್ಥಿಕ ಪರಸ್ಥಿತಿಯನ್ನು ಸದೃಢಗೊಳಿಸಲು ನಿಧಿಗಳು ಮಹತ್ವದ ಪಾತ್ರವಹಿಸುತ್ತವೆ ಬ್ಯಾಂಕಿನ ಕಾಯ್ದಿಟ್ಟ ನಿಧಿ ಹಾಗೂ ಇತರೆ ನಿಧಿಗಳು ೮೧೧.೭೮ಲಕ್ಷಗಳು ಇದ್ದು ಪ್ರಸಕ್ತ ಸಾಲಿನಲ್ಲಿ ರೂಪಾಯಿ ೯೮.೪೯ಲಕ್ಷಗಳಷ್ಟು ಹೆಚ್ಚಳಗೊಂಡಿರುತ್ತದೆ
ಬ್ಯಾAಕಿನಲ್ಲಿ ಒಟ್ಟು ಠೇವು ಹಣ ೯೫೫೧.೯೨ಲಕ್ಷ ಇದ್ದು ಇದು ಕಳೆದ ಸಾಲಿನ ಠೇವಣಿಗಿಂತ ರೂ ೮೮೪.೦೪ಲಕ್ಷಗಳಷ್ಟು ಹೆಚ್ಚಾಗಿದೆ ಮಾನ್ಯ ಸದಸ್ಯರು ಮತ್ತು ಗ್ರಾಹಕರು ಬ್ಯಾಂಕಿನ ಮೇಲೆ ಇರಿಸಿದ ವಿಶ್ವಾಸ ನಂಬಿಕೆಯಿAದ ಬ್ಯಾಂಕಿನ ಠೇವಣಿಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎಲ್ಲಾ ಠೇವುಗಳು ವಿಮೆಯಿಂದ ಸುರಕ್ಷಿತವಾಗಿವೆ
ವರದಿ ವರ್ಷಾಂತ್ಯಕ್ಕೆ ಬ್ಯಾಂಕು ಸಂಪನ್ಮೂಲ ಹೆಚ್ಚಿನ ಪ್ರಗತಿಯಾಗಿದ್ದು ಇರುತ್ತದೆ ಬ್ಯಾಂಕು ಈ ವರ್ಷ ೧೧೧.೧೧ಲಕ್ಷ ದಾಖಲೆಯ ನಿವ್ಹಳ ಲಾಭವನ್ನು ಹೊಂದಿದೆ ಎಂದು ಹೇಳಿದರು
ಬ್ಯಾಂಕಿನ ಅಭಿರುದ್ದಿ ಪಥದಲ್ಲಿ ಅನುತ್ಪಾದಕ ಆಸ್ತಿ ಶೇಕಡಾ ೫.೪೭ಇರುತ್ತದೆ ಮತ್ತು ಬ್ಯಾಂಕಿನ ಠೇವುಗಳು ಶತಕೋಟಿ ಸಮೀಪಿಸುತ್ತಿದೆ ಎಂದು ಹೇಳಿದರು ಬ್ಯಾಂಕು ೪ಶಾಖೆಗಳನ್ನು ಹೊಂದಿದ್ದು ಈಗಾಗಲೇ ಹೂವಿನಹಿಪ್ಪರಗಿಯಲ್ಲಿ ಬ್ಯಾಂಕು ಸುಸಜ್ಜಿತ ಸ್ವಂತ ಕಟ್ಟಡಲ್ಲಿ ಕಾರ್ಯನಿರ್ವಹಿಸುತ್ತಿದೆ ಕೊಲ್ಹಾರ ನಿಡಗುಂದಿ ಕೇಶವನಗರದಲ್ಲಿ ನಮ್ಮ ಬ್ಯಾಂಕಿನ ಶಾಖೆಗಳಿದ್ದು ಈ ಶಾಖೆಗಳು ಕೂಡಾ ಪ್ರಗತಿಯಲ್ಲಿ ಸಾಗುತ್ತಿವೆ ಎಂದು ಹೇಳಿದರು ಬ್ಯಾಂಕು ಮುಂಬರುವ ದಿನಗಳಲ್ಲಿ ಆಕ್ಸಿಸ್ ಬ್ಯಾಂಕಿನ ಸಹೋಗದೊಂದಿಗೆ ಐ.ಎಫ್.ಎಸ್.ಸಿ ಕೋಡ್ ಎನ್.ಇ.ಎಫ್.ಟಿ ಆರ್.ಟಿ.ಜಿ.ಎಸ್ ಸೇವೆಗಳನ್ನು ಅತಿ ಶೀಗ್ರದಲ್ಲೆಯೇ ಪ್ರಾರಂಭಿಸಲಾಗುವುದು ಬ್ಯಾಂಕು ಎಟಿಎಂ ಯು.ಪಿ.ಐ ಫೋನ್ ಪೇ ಗೂಗಲ್ ಪೇ ಪೇಟಿಮ್ ಅಂತ ಡಿಜಿಟಲ ಸೇವೆಗಳನ್ನು ಪ್ರಾರಂಭಿಸಲಾಗುವುದು ಅಲ್ಲದೆ ಬ್ಯಾಂಕಿನ್ ಎಲ್ಲ ಸದಸ್ಯರಿಗೆ ಅಪಘಾತ ವಿಮಾ ಸೌಲಭ್ಯಗಳನ್ನು ಒದಗಿಸಲು ವಿವಿದ ವಿಮಾ ಕಂಪನಿಗಳ ಜೊತೆ ಚರ್ಚಿಸಲಾಗಿದೆ ಶೀಘ್ರದಲ್ಲಿಯೇ ಬ್ಯಾಂಕಿನ ಸದಸ್ಯರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು
ಈ ಸಂದರಭದಲ್ಲಿ ಬ್ಯಾಂಕಿನ ಉಪಾದ್ಯಕ್ಷ ಬಿ.ಐ.ಗೊಳಸಂಗಿ ನಿರ್ದೇಶಕರಾದ ಶಂಕರಗೌಡ ಬಿರಾದಾರ ಏನ್ ಕೆ ನಾಯ್ಕ ಜಿ.ಎಂ. ಹಳ್ಳೂರು ಆರ್ ಎಂ ಕೋರಿ ಆರ್ ವಿ. ಯಳಮೇಲಿ ಯು.ಎಸ್ ಹಾರಿವಾಳ ಬಿ.ಎಂ ಚೌರಿ ಎಸ್.ಸಿ.ಪತ್ತಾರ ಶ್ರೀಮತಿ ಎಸ್ ಬಿ ಪಟ್ಟಣಶೆಟ್ಟಿ ಶ್ರೀಮತಿ ಕೆ ಎಲ್ ತಿಪ್ಪನಗೌಡರ್ ಆರ್ ವಿ ಗುತ್ತರಾಗಿಮಠ ಬಿ ಜಿ ಬಿರಾದಾರ ಸೇರಿದಂತೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಪಿ ಆಯ್ ಬ್ಯಾಕೋಡ ಬ್ಯಾಂಕಿನ ವ್ಯವಸ್ಥಾಪಕ ಸಿ ಎಸ್ ತಳ್ಳೊಳ್ಳಿ ಲೆಕ್ಕಿಗ ಆರ್ ಏನ್ ಚಿಕ್ಕೊಂಡ ಉಪಸ್ಥಿತರಿದ್ದರು