ಡಾ. ಜಿ.ಬಿ. ವಿಸಾಜಿ ನಿಧನ: ಕರ್ನಾಟಕ ಸಾಹಿತ್ಯ ಸಂಘ ಶೃದ್ಧಾಂಜಲಿ
ಬೀದರ:ಸೆ.೧೩: ಹಿರಿಯ ಸಾಹಿತಿಗಳು, ಗಡಿಭಾಗದಲ್ಲಿ ಕನ್ನಡ ಕಟ್ಟಿದವರು, ಖ್ಯಾತ ಕವಿಗಳು ಹಾಗೂ ಕವಿಗಳಿಗೆ ಮಾರ್ಗದರ್ಶಕರಾಗಿ ಸುಮಾರು ೪ ದಶಕಗಳಿಂದ ಸಾಹಿತ್ಯ ಸೇವೆ ಕೈಗೊಂಡ ಡಾ. ಜಿ.ಬಿ. ವಿಸಾಜಿ (೮೨) ಯವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡ ಸಾಹಿತ್ಯ ಸರಸ್ವತಿಯ ಕಿರೀಟದ ಮೇಲಿರುವ ಪ್ರಜ್ವಲ ರತ್ನವೊಂದು ಕಳೆದುಕೊಂಡAತಾಗಿದೆ ಎಂದು ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಪ್ರೊ. ಜಗನ್ನಾಥ ಹೆಬ್ಬಾಳೆ ತಿಳಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ವಿಸಾಜಿಯವರು ಈ ನಾಡು ಕಂಡ ಶ್ರೇಷ್ಠ ಸಾಹಿತಿ, ಚಿಂತಕ ಹಾಗೂ ಅಧ್ಯಾಪಕರಾಗಿದ್ದರು. ಭಾಲ್ಕಿಯ ಸಿ.ಬಿ.ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಹಲವು ವೇದಿಕೆಗಳಲ್ಲಿ ಉಪನ್ಯಾಸ, ಕಾರ್ಯಕ್ರಮಗಳ ಉದ್ಘಾಟನೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಂಘ-ಸAಸ್ಥೆ ಸೇರಿದಂತೆ ಸರ್ಕಾರದ ವತಿಯಿಂದ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಭಗವಂತ ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಮತ್ತು ಸ್ವ. ಜಿ.ಬಿ.ವಿಸಾಜಿಯವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಹೆಬ್ಬಾಳೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕರ್ನಾಟಕ ಜಾನಪದ ಪರಿಷತ್ತು, ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳಾದ ಪ್ರೊ. ಎಸ್.ಬಿ.ಬಿರಾದಾರ, ಶಂಕರೆಪ್ಪ ಹೊನ್ನಾ, ನಿಜಲಿಂಗಪ್ಪ ತಗಾರೆ, ಡಾ. ಸಾವಿತ್ರಿಬಾಯಿ ಹೆಬ್ಬಾಳೆ, ಮಲ್ಲಮ್ಮ ಸಂತಾಜಿ, ಡಾ. ರಾಜಕುಮಾರ ಹೆಬ್ಬಾಳೆ, ಎಸ್.ಬಿ.ಕುಚಬಾಳ, ಪ್ರಕಾಶ ಕನ್ನಾಳೆ, ಡಾ. ಸುನಿತಾ ಕೂಡ್ಲಿಕರ್, ಡಾ. ಮಹಾನಂದ ಮಡಕಿ, ಡಾ.ಸಂಜೀವಕುಮಾರ ಜುಮ್ಮಾ, ಶರದಕುಮಾರ ನಾರಾಯಣಪೇಟಕರ್, ಡಾ.ಬಸವರಾಜ ಸ್ವಾಮಿ, ಶಿವಶರಣಪ್ಪ ಗಣೇಶಪುರ ಸೇರಿದಂತೆ ಇನ್ನಿತರರು ಶೃದ್ಧಾಂಜಲಿ ಸಲ್ಲಿಸಿದ್ದಾರೆ.