ನಾಟಕದ ಪ್ರಯೋಜನ ಪಡೆದುಕೊಳ್ಳಿ:ಬೆಳಗುಂದಿ
ಸೈದಾಪುರ:ಸೆ.೧೩:ನಾಟಕಗಳು ದೃಶ್ಯ ರೂಪಕ್ಕಿಳಿಸಿ ವಿದ್ಯಾರ್ಥಿಗಳಿಗೆ ತಲುಪಿಸುವದರಿಂದ ಕಲಿಕೆ ಪರಿಣಾಮಕಾರಿಯಾಗುತ್ತದೆ ಇದರ ಸರಿಯಾದ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಸಂಸ್ಥೆಯ ಆವರಣದಲ್ಲಿ ನೀನಾಸಂ ಮತ್ತು ರಂಗಾಯಣ, ಸಾಣೇಹಳ್ಳಿ ನುರಿತ ಕಲಾವಿದರಿಂದ ಪಿಯುಸಿ ಪ್ರಥಮ ವರ್ಷದ ಬೋಳೇಶಂಕರ ನಾಟಕ ಹಾಗೂ ದ್ವಿತೀಯ ವರ್ಷದ ಕೃಷ್ಣೆಗೌಡರ ಆನೆ ಪಠ್ಯಾಧಾರಿತ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಪಠ್ಯದ ಜೊತೆಗೆ ಸಾಹಿತ್ಯ, ಕಲೆ, ಸಾಂಸ್ಕೃತಿಯೂ ಅತಿ ಮುಖ್ಯವಾಗಿದ್ದೂ ರಂಗ ಕಲೆ ಇದನ್ನು ಪ್ರಾಯೋಗಿಕವಾಗಿ ಕಂಡು ಕೊಳ್ಳಲು ನೆರವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಈ ವಿದಧ ಕಾರ್ಯಕ್ರಮ ಆಯೋಜನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದ್ದೂ ಇನ್ನೂ ಹೆಚ್ಚಿನ ಸೇವೆ ಕಲಾ ತಂಡದಿAದ ಆಗಲಿ ಎಂದು ಹಾರೈಸಿದರು.
ನಾಟಕದ ನಿರ್ಧೇಶಕರಾದ ಸಮೀರ ಶುಬೇದಾರ, ರಾಜಕುಮಾರ.ಎನ್.ಕೆ, ಸಂಸ್ಥೆಯ ಸಹಕಾರ್ಯದರ್ಶಿ ಕೆ.ಬಿ.ಗೋವರ್ದನ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಆಡಳಿತ ಮಂಡಳಿಯ ಸದಸ್ಯರಾದ ಸುರೇಶ ಆನಂಪಲ್ಲಿ, ಬಳಿಚಕ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಾಂತೇಶ ಕಲಾಲ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ.ಗುರುಪ್ರಸಾದ, ಹಂಪಣ್ಣ ಸಜ್ಜನಶೆಟ್ಟಿ, ಕರಬಸಯ್ಯ ದಂಡಿಗಿಮಠ, ಚಂದ್ರಶೇಖರ ಡೊಣ್ಣೆಗೌಡ ಸೇರಿದಂತೆ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.