ಕ್ರೀಡೆ ದೈಹಿಕ ಹಾಗೂ ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ: ಬಸವರಾಜ ಕೌಲಗಿ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧೩:ಓದು ಮಕ್ಕಳಲ್ಲಿ ಜ್ಞಾನ ವೃದ್ಧಿಸಿದರೆ; ಕ್ರೀಡೆ ಮಕ್ಕಳನ್ನು ದೈಹಿಕವಾಗಿ ಬಲಗೊಳಿಸುವುದರ ಜೊತೆಗೆ ಮಾನಸಿಕವಾಗಿಯೂ ಗಟ್ಟಿಯಾಗುವುದಕ್ಕೆ ನೆರವಾಗುತ್ತದೆ. ಆ ಕಾರಣದಿಂದಾಗಿಯೇ ಸ್ವಾಮಿ ವಿವೇಕಾನಂದರು ಮನೋಬಲದಷ್ಟೆ ಶಾರೀರಿಕ ಬಲಕ್ಕೂ ಮಾನ್ಯತೆ ನೀಡುತ್ತ ಕ್ರೀಡೆಯ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಗುಂಪು ಕ್ರೀಡಾಕೂಟದಲ್ಲಿ ವಿಜೇತರಾದ ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶುಭಾಷಯ ಕೋರಿ ಮಾತನಾಡಿದರು.
ಸದೃಢವಾಗಿರುವ ಶರೀರದಲ್ಲಿ ಸದೃಢವಾಗಿರುª ಆತ್ಮ ನೆಲೆಸಿರುತ್ತದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಅದಕ್ಕಾಗಿ ಅವರು ಜ್ಞಾನಾರ್ಜನೆಗೆ ನಿಡುತ್ತಿದ್ದಷ್ಟೆ ಪ್ರಾಮುಖ್ಯತೆಯನ್ನು ದೈಹಿಕ ದೃಢತೆಗಾಗಿಯೂ ನೀಡುತ್ತಿದ್ದರು. ಸ್ವಾಮೀಜಿಯವರ ವಿಚಾರಗಳು ಈ ಕಾಲಘಟ್ಟಕ್ಕೆ ಅತ್ಯಂತ ಅವಶ್ಯಕವಾಗಿವೆ. ಇಂದು ವಿದ್ಯಾರ್ಥಿಗಳಲ್ಲಿ ಬಹಳಷ್ಟು ಜನ ಕಲಿಕೆಯಲ್ಲಿ ಮುಂದಿದ್ದರೂ ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅಂಥವರಿಗೆ ಕ್ರೀಡೆ ಎಂಬುದು ದಿವ್ಯ ಔಷಧವಾಗಿದೆ ಎಂದು ಹೇಳಿದರು.
ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರೊಂದಿಗೆ ಕಲಿಕೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಇಂದು ಸವಾಲಿನ ವಿಷಯವಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರಕ್ಕೆ ಕಾಲಿಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅದರಿಂದ ಮಕ್ಕಳಲ್ಲಿ ಅಡಗಿದ್ದಂತ ಕ್ರೀಡಾ ಪ್ರತಿಭೆ ಹೊರ ಬಾರದೇ ಅಲ್ಲಿಯೇ ನಶಿಸಿ ಹೋಗುತ್ತಲಿದೆ. ಸಿಕ್ಕಂತ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮಲ್ಲಿನ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಮಕ್ಕಳು ಭವಿಷ್ಯದಲ್ಲಿ ಮಹತ್ತರವಾದ ಸ್ಥಾನವನ್ನು ಪಡೆದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಶಾಲಾ ಕಾಲೇಜುಗಳು ಮಕ್ಕಳಲ್ಲಿನ ಪ್ರತಿಭೆಯನ್ನು ಹೊರ ಹಾಕುವುದಕ್ಕೆ ಸೂಕ್ತವಾದಂತಹ ವೇದಿಕೆಯನ್ನು ಕಲ್ಪಸಿಕೊಡಬೇಕು ಎಂದು ಹೇಳಿದರು. ಜಿಲ್ಲಾ ಮಟ್ಟದ ಚದುರಂಗ ಆಟದಲ್ಲಿ ಮೊದಲ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ದ್ವಿತೀಯ ಪಿಯುಸಿ ವಿಭಾಗದ ಭಾಗ್ಯಶ್ರಿ ಪಾಟೀಲ, ಪ್ರೇಮಕುಮಾರ ಮತ್ತು ಲಾನ್‌ಟೆನಿಸ್ ಆಟದಲ್ಲಿ ರಾಜ್ಯಕ್ಕೆ ಆಯ್ಕೆಯಾದ ರಿಯಾ ಕೆಂಭಾವಿ, ಕೋಮಲ್ ಭಾವಿಕಟ್ಟಿ ಹಾಗೂ ಅತ್ಯುತ್ತಮ ಪ್ರದರ್ಶ£ ತೋರಿದ ಲುಬಾನಾ ಬಗಲಿ, ಶ್ರೇಯಾ ಹೂಗಾರ, ಪೂರ್ವಿ ಮಂಟೂರಗೆ ಶುಭಾಷಯಗಳನ್ನು ಕೋರುವುದರ ಜೊತೆಗೆ ಅವರಿಗೆ ತರಬೇತಿ ನೀಡಿದ ದೈಹಿಕ ನಿರ್ದೇಶಕರುಗಳನ್ನು ಅಭಿನಂದಿಸಿದರು. ಆಯ್ಕೆಯಾದ ಮಕ್ಕಳು ರಾಜ್ಯ ಮಟ್ಟದಲ್ಲಿಯೂ ಅತ್ಯುತ್ತಮ ಪ್ರದರ್ಶ£ Àತೋರಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವುದರೊಂದಿಗೆ ನಾಡಿನ ಕ್ರೀಡಾ ಕ್ಷೇತ್ರಕ್ಕೆ ಅದ್ವಿತೀಯವಾದ ಕೊಡುಗೆ ನೀಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್, ದೈಹಿಕ ನಿರ್ದೇಶಕರುಗಳಾದ ಗೋಪಾಲ ನಾಯ್ಕ, ಸಂತೋಷ ಲಮಾಣಿ, ಜ್ಯೋತಿ ಎಸ್.ಬಿ ಉಪಸ್ಥಿತರಿದ್ದರು.