ಮಾನಸ ಆತ್ಮಹತ್ಯೆ ಪ್ರಕರಣ-ಅರೋಪಿಗಳು ಪತ್ತೆ ಷರತ್ತು ಬದ್ದ ನಿರೀಕ್ಷಣಾ ಜಾಮೀನು ಮಂಜೂರು
ಕೋಲಾರ,ಸೆ,೧೩- ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಾನಸ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ಮಾನಸಳ ಪತಿ ಉಲ್ಲಾಸಗೌಡನನ್ನು ಕೋಲಾರ ಗ್ರಾಮಾಂತರ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.
ತಲೆ ಮರೆಸಿ ಕೊಂಡಿದ್ದ ಆರೋಪಿಯನ್ನು ಮೈಸೂರಿನಲ್ಲಿ ಪತ್ತೆಹಚ್ಚಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಕರೆ ತಂದಿದ್ದಾರೆ. ಈ ಪ್ರಕರಣದ ನಾಲ್ಕು ಮಂದಿ ಅರೋಪಿಗಳಿಗೆ ಕೋಲಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಷರತ್ತು ಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳಾದ ಪತ್ರಕರ್ತ ಮುನಿವೆಂಕಟೇಗೌಡ,ಗೋಪಾಲಗೌಡ, ಬ್ಯಾಟೆಗೌಡ ಹಾಗೂ ಜಯಮ್ಮ ಅವರುಗಳಿಗೆ ಜಾಮೀನು ಮಂಜೂರು ಮಾಡಿದೆ.
ಮಾನಸ ಆತ್ಮಹತ್ಯೆ ಪ್ರಕರಣದ ಅರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ವಿಳಂಭ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಮಾನಸ ಕುಟುಂಬವು ಮಹಿಳಾ ಸಂಘಟನೆಗಳೊಂದಿಗೆ ಕಳೆದ ಮೂರು ದಿನಗಳ ಹಿಂದೆ ನಗರದಲ್ಲಿನ ಡಿ.ವೈ.ಎಸ್.ಪಿ. ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದರು, ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ. ಅವರು ಎರಡು ದಿನದಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ನೀಡಿದ್ದರು. ಅದರಂತೆ ಆರೋಪಿಗಳನ್ನು ಎರಡು ದಿನದಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣ ನಡೆದು ೧೫ ದಿನಗಳು ಕಳೆದರೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಮೀನಾ ಮೇಷ ಎಣಿಸುತ್ತಿದ್ದ ಹಿನ್ನಲೆಯಲ್ಲಿ ಮಹಿಳಾ ಸಂಘಟನೆಗಳು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು ಮಹಿಳಾ ಆಯೋಗದ ಅಧ್ಯಕ್ಷೆ ಡಾ, ನಾಗಲಕ್ಮೀ ಚೌದರಿ ಅವರು ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ತಮ್ಮ ಅಸಮಾಧಾನವನ್ನು ವ್ಯಕ್ತ ಪಡೆಸಿ ಆರೋಪಿಗಳನ್ನು ಬಂಧಿಸಲು ತಾಕೀತು ಮಾಡಿದ್ದರು. ಆರೋಪಿಗಳನ್ನು ಬಂಧಿಸದಿದ್ದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ವಿರುದ್ದವೇ ನಾನೇ ಪ್ರತಿಭಟನೆಗೆ ಇಳಿಯುವುದಾಗಿ ಎಚ್ಚರಿಕೆ ನೀಡಿದ್ದರು.
ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಖಡಕ್ ಸೂಚನೆ ಮೇರೆಗೆ ತಲೆಮರೆಸಿ ಕೊಂಡಿದ್ದ ಪ್ರಮುಖ ಆರೋಪಿ ಉಲ್ಲಾಸಗೌಡನನ್ನು ಗ್ರಾಮಾಂತರ ಪೊಲೀಸರು ಮೈಸೂರಿನಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದು ಕರೆ ತಂದಿದ್ದಾರೆ. ಉಳಿದ ೪ ಮಂದಿಗಳನ್ನು ಆರೋಪಿಗಳ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡೆಸಿದ್ದಾರೆ.
ನ್ಯಾಯಾಲಯದಲ್ಲಿ ನಿರೀಕ್ಷಣ ಜಾಮೀನು ಪಡೆಯಲು ಅನುವು ಮಾಡಿಕೊಡುವ ದೆಸೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸದೆ ವಿಳಂಭ ನೀತಿಯನ್ನು ಪಾಲಿಸಿದರು, ಆರೋಪಿಗಳು ಪ್ರಭಾವಿಗಳಾಗಿದ್ದು ಪೊಲೀಸರ ಮೇಲೆ ರಾಜಕೀಯದ ಒತ್ತಡ ಬೀರಿದ್ದರು. ಪ್ರಕರಣ ದಾಖಲಾಗಿದ್ದ ಕೊಡಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಜಾಮೀನು ಮಂಜೂರು ಅಗುವವರೆಗೂ ಜೈಲು ಪಾಲಾಗುತ್ತಿದ್ದರು.
ಅದರೆ ಪೊಲೀಸರ ಮೇಲೆ ಪ್ರಭಾವಿತರು ಒತ್ತಡ ಹೇರಿ ಬಂಧನವಾದ ಕೊಡಲೇ ಜಾಮೀನು ಪಡೆದು ಹೊರಬರುವ ವ್ಯವಸ್ಥೆಗಳನ್ನು ಮೊದಲೇ ಸಿದ್ದ ಪಡೆಸಿ ಕೊಂಡಿದ್ದರು ಎಂದು ಪ್ರತಿಭಟನಾಕಾರರು ತಮ್ಮ ಅಸಮಾಧಾನ ವ್ಯಕ್ತ ಪಡೆಸಿದ್ದು, ಆರೋಪಿಗಳಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುವವರೆಗೂ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.